ನಿತೀಶ್ ಕುಮಾರ್ ಬಹುಮತ ಸಾಬೀತಿಗೂ ಮುನ್ನ ಬಿಹಾರ ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್ ರಾಜೀನಾಮೆ

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮಹಾ ಮೈತ್ರಿಕೂಟ, ಬಹುಮತ ಸಾಬೀತುಪಡಿಸುವ ಮುನ್ನವೇ ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್ ಸಿನ್ನಾ ಬುಧವಾರ (ಆಗಸ್ಟ್ 24) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.

ಆಡಳಿತಾರೂಢ ಮೈತ್ರಿಕೂಟವು ಸಿನ್ನಾ ವಿರುದ್ಧ ಬಹುಮತ ಸಾಬೀತಿಗೂ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದರೆ ತನ್ನ ವಿರುದ್ಧದ ಆರೋಪಗಳ ವಿರುದ್ಧ ಹೋರಾಡುವುದಾಗಿ ತಿಳಿಸಿದ್ದಾರೆ.“ನಿಮ್ಮ ಅವಿಶ್ವಾಸ ಗೊತ್ತುವಳಿ” ಸ್ಪಷ್ಟವಾಗಿಲ್ಲ. ನಾನು ಒಂಬತ್ತು ಮಂದಿಯಲ್ಲಿ, ಎಂಟು ಮಂದಿ ಸಹಿ ಹಾಕಿರುವ ಪತ್ರವನ್ನು ಪಡೆದಿದ್ದು. ಇದು ನಿಯಮದಂತೆ ಸಮರ್ಪಕವಾಗಿಲ್ಲ ಎಂದು ಸ್ಪೀಕರ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಬಿಹಾರ ವಿಧಾನ ಪರಿಷತ್ ನ ಸಭಾಪತಿ ಸ್ಥಾನಕ್ಕೆ ಜೆಡಿಯುನ ದೇವೇಶ್ ಚಂದ್ರ ಠಾಕೂರ್ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಬಿಹಾರದ ಭಾರತೀಯ ಜನತಾ ಪಕ್ಷದ ಶಾಸಕರು ವಿಧಾನಸಭಭೆ ಹಹೊರಭಾಗದಲ್ಲಿ ಪ್ರತಿಭಟನೆ ನಡೆಸಿರುವುದಾಗಿ ವರದಿ ತಿಳಿಸಿದೆ.