ದೇಶ ವಿದೇಶ

2025 ರೊಳಗೆ ಭಾರತ ನಡುವಿನ ವ್ಯಾಪಾರ 30 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ- ರಷ್ಯಾ ಆರ್ಥಿಕ ಅಭಿವೃದ್ದಿ ಸಚಿವ

ನವದೆಹಲಿ: 2025 ರೊಳಗೆ ಭಾರತ- ರಷ್ಯಾ ನಡುವಿನ ವ್ಯಾಪಾರ 30 ಬಿಲಿಯನ್ ಅಮೆರಿಕನ್ ಡಾಲರ್ ಗೆ  ತಲುಪುವ  ಸಾಧ್ಯತೆ ಇದೆ ಎಂದು ರಷ್ಯಾ ಆರ್ಥಿಕ ಅಭಿವೃದ್ದಿ ಸಚಿವ  ಮ್ಯಾಕ್ಸಿಂ ಒರೆಷ್ಕೀನ್ ಹೇಳಿದ್ದಾರೆ.
ರಷ್ಯಾ- ಭಾರತೀಯ ಉದ್ದಿಮೆದಾರರ ವೇದಿಕೆಯಲ್ಲಿ ಮಾತನಾಡಿದ ಅವರು,  ಹೂಡಿಕೆ ಪ್ರಮಾಣ 50 ಬಿಲಿಯನ್ ಗೆ ಮುಟ್ಟುವ ಸಾಧ್ಯತೆ ಇರುವುದಾಗಿ ತಿಳಿಸಿದರು. ಉಭಯ ದೇಶಗಳ ನಡುವಿನ ಆರ್ಥಿಕ ಒಪ್ಪಂದದಿಂದಾಗಿ ವ್ಯಾಪಾರ ವಹಿವಾಟು  ಹೆಚ್ಚಳವಾಗಿದ್ದು,  ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದರು. ರಷ್ಯಾ  ಒಕ್ಕೂಟ ಸುಂಕ ಸೇವೆ ಪ್ರಕಾರ, 2017ರಲ್ಲಿ ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರದ ಒಟ್ಟಾರೇ ಪ್ರಮಾಣ  9.3 ಬಿಲಿಯನ್ ನಷ್ಟಾಗಿತ್ತು. ಕಳೆದೊಂದು ವರ್ಷದಲ್ಲಿ ಶೇಕಡಾ 21 ರಷ್ಟು ಪ್ರಮಾಣ ಹೆಚ್ಚಳಗೊಂಡಿದೆ.

About the author

ಕನ್ನಡ ಟುಡೆ

Leave a Comment