ಅ೦ತರಾಷ್ಟ್ರೀಯ

26/11 ಮುಂಬೈ ದಾಳಿ ಸಂಚುಕೋರರ ಬಗ್ಗೆ ಮಾಹಿತಿಗೆ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಅಮೆರಿಕಾ

ವಾಷಿಂಗ್ಟನ್: 2008 ನವೆಂಬರ್ 26 ರಂದು ನಡೆದಿದ್ದ ಮುಂಬೈ ಉಗ್ರರ ದಾಳಿಯ ಸಂಚಿನ ಬಗ್ಗೆ ಮಾಹಿತಿ ನೀಡುವವರಿಗೆ 5 ಮಿಲಿಯನ್  ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿದೆ.ಭಾರತದ ವಾಣಿಜ್ಯ ನಗರಿ ಮುಂಬೈ ಮೇಲೆ  ದಾಳಿ ನಡೆದು ಇಂದಿಗೆ 10 ವರ್ಷ ಆಗುತ್ತಿರುವ ಸಂದರ್ಭದಲ್ಲಿ ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ  ದಾಳಿ ನಡೆಸಿದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ನೀಡುವವರಿಗೆ 35 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ. ಈ ದಾಳಿ ವೇಳೆಯಲ್ಲಿ  ಅಮೆರಿಕಾದ ನಾಲ್ಕು ಜನರು ಸೇರಿದಂತೆ ಒಟ್ಟಾರೇ 166 ಮಂದಿ ಮೃತಪಟ್ಟಿದ್ದರು.ಮುಂಬೈ ದಾಳಿ ನಡೆದ 10 ವರ್ಷ ಆಗಿದ್ದರೂ ದುಷ್ಕರ್ಮಿಗಳಿಗೆ ಶಿಕ್ಷೆಯಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಸಿಂಗಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮೆರಿಕ ಉಪಾಧ್ಯಕ್ಷ ಮೆಕ್ ಪೆನ್ಸಿ ಜೊತೆಗಿನ ಮಾತುಕತೆ ವೇಳೆಯಲ್ಲಿ ಪ್ರಸ್ತಾಪಿಸಿದ್ದರು.ಈ ಮಾತುಕತೆ ನಡೆದ 15 ದಿನಗಳ ನಂತರ ಅಮೆರಿಕಾ ಸರ್ಕಾರ ಬಹುಮಾನದ ಘೋಷಣೆ ಮಾಡಿದೆ.ಎಲ್ ಇಟಿ ಉಗ್ರ ಸಂಘಟನೆಯ ಹಂತಕರು 2008, ನವೆಂಬರ್ 26 ರಿಂದ 29ರವರೆಗೂ ಮುಂಬೈ ನಗರ ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಿದ್ದರು.

About the author

ಕನ್ನಡ ಟುಡೆ

Leave a Comment