ರಾಜಕೀಯ

28 ವರ್ಷ ಸಂಸಾರ ಮಾಡಿದ್ದಾರೆ ಅಂದ ಮೇಲೆ ಸುಮಲತಾ ಕೂಡ ಗೌಡ್ತಿನೇ: ಕಾಂಗ್ರೆಸ್ ಸಚಿವ ನಾಗರಾಜ್

ಬೆಂಗಳೂರು: ಮದುವೆಯಾಗಿ 28 ವರ್ಷ ಸಂಸಾರ ಮಾಡಿದ ಮೇಲೆ ಗಂಡನ ಜಾತಿಯೇ ಹೆಂಡತಿಗೆ ಬರುತ್ತದೆ, ಹೀಗಾಗಿ ಸುಮಲತಾ ಕೂಡ ಗೌಡ್ತಿಯೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಕಾಂಗ್ರೆಸ್ ಸಚಿವ ಎಂಟಿಬಿ ನಾಗರಾಜ್ ಜೆಡಿಎಸ್ ಸಂಸದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿ ವೈಷಮ್ಯದ ಹೇಳಿಕೆ ನೀಡಿ ಭಾವನೆ ಕೆರಳಿಸಬಾರದು ಮಂಡ್ಯ ಸಂಸದ ಶಿವರಾಮೇಗೌಡರಿಗೆ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಮದುವೆಯಾಗಿ ಇಬ್ಬರು ವಿಲೀನವಾದ ಮೇಲೆ ಗಂಡು ಮಗುವಾಗಿದೆ. ಜನಗಳ ಭಾವನೆಗಳನ್ನು ಕೆರಳಿಸುವ ನಿಟ್ಟಿನಲ್ಲಿ ಕೆಲವರು ರಾಜಕೀಯವಾಗಿ ಬಣ್ಣಕಟ್ಟಲು ಜಾತಿ ಬಳಕೆ ಮಾಡ್ತಾರೆ. ಆದರೆ ಅದನ್ನು ಮಾಡದೆ ಜನರಲ್ಲಿ ಕೈ ಮುಗಿದು, ಸಾಧನೆಗಳನ್ನು ತಿಳಿಸಿ ಮತಯಾಚಿಸಬೇಕು ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment