ದೇಶ ವಿದೇಶ

33 ವರ್ಷಗಳಿಂದ ಕೇವಲ ಚಹಾ ಕುಡಿದು ಬದುಕಿದ್ದಾಳೆ

ಕೊರಿಯಾ: ಚುಮು ಚಳಿಯಲ್ಲಿ 1 ಕಪ್ ಬಿಸಿ ಚಹಾ ಕುಡಿಯುವುದರಿಂದ ಸಿಗುವ ಆನಂದವೇ ಬೇರೆ. ಆದರೆ ಊಟದ ಬದಲು ಕೇವಲ ಚಹಾ ಕುಡಿದುಕೊಂಡೇ ಇರಲು ಸಾಧ್ಯವೇ? ಆದರೆ ಛತ್ತೀಸ್‌ಗಢದಲ್ಲೊಬ್ಬ  30 ಕ್ಕೂ ಅಧಿಕ ವರ್ಷಗಳಿಂದ ಕೇವಲ ಚಹಾ ಕುಡಿದುಕೊಂಡು ಬದುಕುತ್ತಿದ್ದಾಳೆ.

ಆಕೆ ಜೀವಂತವಾಗಿರುವುದಷ್ಟೇ ಅಲ್ಲ. ನಂಬಲು ಅಸಾಧ್ಯವೆನಿಸುವಂತಹ ಇನ್ನೊಂದು ಸಂಗತಿ ಎಂದರೆ ಆಕೆ ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ. ಕೊರಿಯಾ ಜಿಲ್ಲೆಯ ಬರಾದಿಯಾ ಗ್ರಾಮದ ನಿವಾಸಿಯಾದ ಪಿಲ್ಲಿ ದೇವಿ 11ನೇ ವಯಸ್ಸಿಗೆ ಆಹಾರ ಸೇವಿಸುವುದನ್ನು ಬಿಟ್ಟಿದ್ದಳು ಮತ್ತು ಅಂದಿನಿಂದ ಕೇವಲ ಚಹಾ ಸೇವಿಸಿಕೊಂಡು ಬದುಕಿದ್ದಾಳೆ. ಈ ವಿಶಿಷ್ಟ ಜೀವನಶೈಲಿಯಿಂದಾಗಿ ಸ್ಥಳೀಯವಾಗಿ ಆಕೆ ‘ಚಾಯ್ ವಾಲಿ ಚಾಚಿ’ ಎಂದು ಗುರುತಿಸಿಕೊಳ್ಳುತ್ತಾಳೆ.  ಪಿಲ್ಲಿ ತಂದೆ ರಿತಿ ರಾಮ್ ಅವರು ಹೇಳುವ ಪ್ರಕಾರ, 44 ವರ್ಷದ ಪಿಲ್ಲಿ 6 ನೇ ತರಗತಿಯಲ್ಲಿದ್ದಾಗ ಜಿಲ್ಲಾ ಮಟ್ಟದ ಕ್ರೀಡಾ ಪಂದ್ಯಾವಳಿಗೆ ಹೋಗಿದ್ದಳು. ಅಲ್ಲಿಂದ ಮರಳಿದ ಬಳಿಕ ಸಡನ್ ಆಗಿ ಆಹಾರ ಸೇವಿಸುವುದನ್ನು ಮತ್ತು ನೀರು ಕುಡಿಯುವುದನ್ನು ಬಿಟ್ಟಳು. ಮೊದ ಮೊದಲು ಬಿಸ್ಕತ್ತು, ಬ್ರೆಂಡ್ , ಹಾಲಿನ ಚಹಾ ಕುಡಿಯುತ್ತಿದ್ದ ಆಕೆ ನಿಧಾನವಾಗಿ ಅದೆಲ್ಲವನ್ನು ಬಿಟ್ಟು ಕೇವಲ ಬ್ಲ್ಯಾಕ್ ಟೀ ಕುಡಿದುಕೊಂಡು ಬದುಕ ಹತ್ತಿದಳು. ಆಕೆ ದಿನವೀಡಿ ಚಹಾ ಕುಡಿದುಕೊಂಡು ಬದುಕುತ್ತಾಳೆ ಎಂದುಕೊಂಡರೆ ಅದು ತಪ್ಪು. ಅವಳು ಚಹಾ ಕುಡಿಯುವುದು ದಿನಕ್ಕೊಮ್ಮೆ ಮಾತ್ರ ಅಂದರೆ ಬೆಳಗ್ಗೆ ಸೂರ್ಯಾಸ್ತವಾದ ಬಳಿಕ.

ಆಕೆ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರಬಹುದೆಂದು ಪೋಷಕರು ಆಕೆಯನ್ನು ಕಂಡ ಕಂಡ ಆಸ್ಪತ್ರೆಗೆ ಕರೆದೊಯ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬ ಸದಸ್ಯರು ಹೇಳುವ ಪ್ರಕಾರ ಸದಾ ಶಿವಪೂಜೆಯಲ್ಲಿ ಮುಳುಗಿರುವ ಪಿಲ್ಲಿ ಮನೆಯಿಂದ ಹೊರಗೆ ಹೋಗುವುದೇ ಅಪರೂಪ. ಕೊರಿಯಾದ ಡಾ. ಎಸ್. ಕೆ ಗುಪ್ತಾ ಹೇಳುವ ಪ್ರಕಾರ, ಕೇವಲ ಚಹಾ ಕುಡಿದುಕೊಂಡು ಬದುಕಲು ಸಾಧ್ಯವೇ ಇಲ್ಲ. ನಿಜಕ್ಕೂ ಇದು ಆಶ್ಚರ್ಯಕಾರಕವೇ ಸರಿ. ನವರಾತ್ರಿ ಸಮಯದಲ್ಲಿ 9 ದಿನಗಳ ಕಾಲ ಚಹಾ ಕುಡಿದು ಬದುಕಬಹುದು. ಆದರೆ 33 ವರ್ಷಗಳಷ್ಟು ದೀರ್ಘಕಾಲ ದಿನಕ್ಕೊಮ್ಮೆ ಚಹಾ ಕುಡಿದು ಬದುಕುವುದು ನಂಬಲು ಕಷ್ಟವಾದ ಸಂಗತಿಯೇ ಸರಿ.

About the author

ಕನ್ನಡ ಟುಡೆ

Leave a Comment