ರಾಷ್ಟ್ರ ಸುದ್ದಿ

4 ಲಕ್ಷ ರೈತರ ಸಾಲಮನ್ನಾ ದಾಖಲೆಯನ್ನು ಸಂಸತ್​ನಲ್ಲಿ ಪ್ರದರ್ಶಿದ ಕಾಂಗ್ರೆಸ್​, ಮೋದಿ ಹೇಳಿಕೆಗೆ ತಿರುಗೇಟು

ದೆಹಲಿ: ಪಂಜಾಬ್​ ಸರ್ಕಾರದಿಂದ ಒಬ್ಬೇ ಒಬ್ಬ ರೈತನ ಸಾಲವೂ ಮನ್ನಾ ಆಗಿಲ್ಲ ಎಂಬ ಮೋದಿ ಹೇಳಿಕೆಗೆ ಕಾಂಗ್ರೆಸ್​ ಸಂಸತ್​ನಲ್ಲಿ ದಾಖಲೆಗಳ ಮೂಲಕವೇ ಉತ್ತರ ನೀಡಿದೆ.

ಸಾಲಮನ್ನಾದ ಫಲಾನುಭವಿಗಳಾಗಿರುವ  4,14,285 ರೈತರ ದಾಖಲೆಗಳ ಗಂಟನ್ನೇ ಸಂಸತ್​ಗೆ ತಂದ ಕಾಂಗ್ರೆಸ್​ ಸಂಸದ ಸುನೀಲ್​ ಜಾಖರ್​ ಅವುಗಳನ್ನು ಪ್ರದರ್ಶಿಸುವ ಮೂಲಕ ಮೋದಿ ಅವರ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.

ಇತ್ತೀಚೆಗೆ ಧರ್ಮಶಾಲದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಪಂಜಾಬ್​ ಸರ್ಕಾರ ರೈತರ ಸಾಲಮನ್ನಾ ಘೋಷಿಸಿದೆಯಾದರೂ, ಒಬ್ಬೇ ಒಬ್ಬ ರೈತನ ಸಾಲವೂ ಮನ್ನಾ ಆಗಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು.

About the author

ಕನ್ನಡ ಟುಡೆ

Leave a Comment