ದೇಶ ವಿದೇಶ

41 ಉಗ್ರರನ್ನು ಹೊಡೆದುರುಳಿಸಿದ ಟರ್ಕಿ ಸೇನೆ

ಇರಾಕ್: ಇರಾಕ್ ನ ಕಂದಿಲ್ ಪ್ರಾಂತ್ಯದಲ್ಲಿ ಟರ್ಕಿ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 41 ಉಗ್ರರನ್ನು ಹೊಡೆದುರುಳಿಸಿದೆ. ಕುರ್ದೀಶ್ ವರ್ಕರ್ಸ್ ಪಾರ್ಟಿಗೆ ಸೇರಿದ ಭಯೋತ್ಪಾದಕರನ್ನು ಬಂಧಿಸುವಂತೆ ಅಥವಾ ಹೊಡೆದುರುಳಿಸುವಂತೆ ಆದೇಶಿಸಲಾಗಿತ್ತು.
ಮಾರ್ಚ್ 22ರಂದು ವೈಮಾನಿಕ ದಾಳಿ ನಡೆಸಿತ್ತು. ಕಳೆದ ಶನಿವಾರ ಟರ್ಕಿ ಸೇನೆ ಕುರ್ದೀಶ್ ವರ್ಕರ್ಸ್ ಪಾರ್ಟಿ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ 3,733 ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment