ಸುದ್ದಿ

44 ವರ್ಷಗಳ ಕಾನೂನು ಹೋರಾಟದಿಂದ ಪ್ರಮೋದಾ ದೇವಿಯವರಿಗೆ ಮುಕ್ತಿ

ಮೈಸೂರು: ರಾಜಮಾತೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪತ್ನಿ ಪ್ರಮೋದಾ ದೇವಿ ಒಡೆಯರ್ ಅವರ ಆದಾಯ ತೆರಿಗೆ ಇಲಾಖೆಯೊಂದಿಗಿನ 44 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ ಕಂಡಿದೆ. ಕುಟುಂಬದ ಆಸ್ತಿಯನ್ನು ಹರಾಜು ಪ್ರಕ್ರಿಯೆಯಿಂದ ಸಂಗ್ರಹಿಸಿದ ಹೆಚ್ಚಿನ ತೆರಿಗೆ ಹಣವನ್ನು, ಬಾಡಿಗೆ ಆದಾಯ ಜೋಡಣೆ ಮತ್ತು ವೈಯಕ್ತಿಕ ಆದಾಯದ ಮರುಪಡೆಯುವಿಕೆ ಮೊತ್ತವನ್ನು ಆದಾಯ ತೆರಿಗೆ ಇಲಾಖೆ ಮೈಸೂರು ಒಡೆಯರ್ ಗೆ ಮರು ನೀಡಲು ಮುಂದಾಗಿದೆ.ಐಟಿ ಇಲಾಖೆಯಿಂದ ಮರುಪಾವತಿಯಾಗುವ ಹಣದ ಮೊತ್ತವನ್ನು ನಿಗದಿಪಡಿಸಲು ಇಚ್ಛಿಸದ ಅವರು, ಕೆಲವು ಲಕ್ಷಗಳವರೆಗೆ ಹಣ ಸಿಗಬಹುದಾಗಿದ್ದು ಜಗನ್ ಮೋಹನ್ ಅರಮನೆಯ ನವೀಕರಣಕ್ಕೆ ಬಳಸಲಾಗುವುದು. ತಮ್ಮ ಪತಿಗೆ ನ್ಯಾಯ ಸಿಗುವ ಭರವಸೆಯಿತ್ತು, ಅವರ ಮರಣ ನಂತರ ಆದೇಶ ಬಂದಿರುವುದು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದರು.

About the author

ಕನ್ನಡ ಟುಡೆ

Leave a Comment