ರಾಷ್ಟ್ರ ಸುದ್ದಿ

60 ವರ್ಷ ದೇಶದ ನಿದ್ದೆ ಕಸಿದ ಕಾಂಗ್ರೆಸ್‌: ಬಿಜೆಪಿ ತಿರುಗೇಟು

ಹೊಸದಿಲ್ಲಿ: ಪ್ರಧಾನಿ ಮೋದಿ ಅವರನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂಬ ರಾಹುಲ್‌ ಗಾಂಧಿ ಹೇಳಿಕೆಯು ದೇಶದ ಸಾರ್ವಜನಿಕ ಹೇಳಿಕೆಗಳಲ್ಲೇ ಅತ್ಯಂತ ಕೀಳುಮಟ್ಟದ್ದು ಎಂದು ಬಿಜೆಪಿ ತಿರುಗೇಟು ನೀಡಿದೆ.

‘ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ಕಳೆದ 60 ವರ್ಷ ಇಡೀ ದೇಶಕ್ಕೇ ನಿದ್ದೆ ಇಲ್ಲದಂತೆ ಮಾಡಿದ್ದ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿಯಿಂದ ಇನ್ನೆಂತಹ ಹೇಳಿಕೆ ನಿರೀಕ್ಷಿಸಲು ಸಾಧ್ಯ’ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಇದೇ ವೇಳೆ, ರಫೇಲ್‌ ಡೀಲ್‌ ಕುರಿತಾದ ರಾಹುಲ್‌ ಆರೋಪಗಳಿಗೆ ತಿರುಗೇಟು ನೀಡಿರುವ ಸಚಿವರು, ಸಂಸತ್ತಿಗೆ ಬಂದು ಬಹಿರಂಗ ಚರ್ಚೆ ನಡೆಸುವಂತೆ ಸವಾಲು ಹಾಕಿದ್ದಾರೆ. ಅಲ್ಲದೆ, ರಾಹುಲ್‌ ಟ್ಯೂಷನ್‌ ಇಲ್ಲದೆ ಏನೂ ಮಾತನಾಡಲಾರರು ಎಂದು ಸಹ ಬಿಜೆಪಿ ಲೇವಡಿ ಮಾಡಿದೆ.

ಈ ಸುದ್ದಿಯನ್ನೂ ಓದಿ, ರೈತರ ಸಾಲ ಮನ್ನಾ ಮಾಡುವವರೆಗೂ ಮೋದಿಗೆ ನಿದ್ರಿಸಲು ಬಿಡಲ್ಲ: ರಾಹುಲ್

ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಎಚ್ಚರಿಕೆ ನೀಡಿದ್ದರು. ಮೋದಿ ಸರಕಾರ ರಿಲಯೆನ್ಸ್‌ ಸಂಸ್ಥೆ ಒಡೆಯ ಅನಿಲ್‌ ಅಂಬಾನಿ ಸೇರಿದಂತೆ ದೇಶದ 15 ಬೃಹತ್‌ ಉದ್ಯಮಿಗಳ 3.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಆದರೆ, ಕಳೆದ ನಾಲ್ಕು ವರ್ಷದಲ್ಲಿ ರೈತರ ಸಂಕಷ್ಟ ನಿವಾರಣೆಗೆ ಒಂದು ಪೈಸೆ ಸಾಲ ಮನ್ನಾ ಮಾಡಿಲ್ಲ. ಈ ಸಂಬಂಧ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದರು. ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸಾಲ ಮನ್ನಾ ಘೋಷಣೆ ಬೆನ್ನಲ್ಲೇ, ಅಸ್ಸಾಂನ ಬಿಜೆಪಿ ಸರಕಾರವೂ ಇದೇ ಹಾದಿ ತುಳಿದಿದೆ. ಇದರೊಂದಿಗೆ ಕಳೆದ ಎರಡು ದಿನದಲ್ಲಿ ಮೂರು ರಾಜ್ಯಗಳು ಸಾಲಮನ್ನಾ ಘೋಷಿಸಿದಂತಾಗಿದೆ.

ರಾಜ್ಯದ ಸುಮಾರು 8 ಲಕ್ಷ ರೈತರ 600 ರೂ. ಕೋಟಿ ಸಾಲ ಮನ್ನಾ ಮಾಡಲು ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರೈತರ ಎಲ್ಲಾ ಬಗೆಯ ಕೃಷಿ ಸಾಲಗಳ ಪೈಕಿ 25% ಅಥವಾ ಗರಿಷ್ಠ 25,000 ರೂ.ಗಳನ್ನು ಸರಕಾರ ಮನ್ನಾ ಮಾಡಲಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಪಡೆದ ಸಾಲಕ್ಕೆ ಇದು ಅನ್ವಯವಾಗಲಿದೆ

About the author

ಕನ್ನಡ ಟುಡೆ

Leave a Comment