ರಾಜ್ಯ ಸುದ್ದಿ

63ನೇ ಕನ್ನಡ ರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿ ನಾಡಧ್ವಜಕ್ಕೆ ಗೌರವ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ರಾಜ್ಯಾದ್ಯಂತ 63ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸುವ ಮೂಲಕ ನಾಡಧ್ವಜಕ್ಕೆ ಗೌರವ ಸಲ್ಲಿಸಿದರು.

ಸಿಎಂ ಕುಮಾರಸ್ವಾಮಿ ಅವರಿಗೆ ಮೇಯರ್ ಗಂಗಾಂಭಿಕ ಮಲ್ಲಿಕಾರ್ಜುನ, ಎಂಎಲ್​ಸಿ ಸರವಣ ಹಾಗೂ ಮಾಜಿ ಸಚಿವ ಬಸವರಾಜ ಹೊರಟಿ ಅವರು ಸಾಥ್ ನೀಡಿದರು. ಧ್ವಜಾರೋಹಣ ನಂತರ ಗೌರವ ವಂದನೆ ಸ್ವೀಕರಿಸಿದ ಸಿಎಂ, ಪಥಸಂಚಲನ ನೆರವೇರಿಸಿದರು.

63ನೇ ಕನ್ನಡ ರಾಜ್ಯೋತ್ಸವಕ್ಕೆ ಕಂಠೀರವ ಕ್ರೀಡಾಂಗಣ ಸಕಲ ರೀತಿಯಲ್ಲೂ ಸಜ್ಜಾಗಿತ್ತು. ಮುಂಜಾನೆ 6ಗಂಟೆಯಿಂದಲೇ ಕ್ರೀಡಾಂಗಣದಲ್ಲಿ ಭದ್ರತೆ ನೀಡಲಾಗಿತ್ತು. ಭದ್ರತೆಗಾಗಿ ಸುಮಾರು 500ಕ್ಕೂ ಅಧಿಕ ಪೊಲೀಸರು, ನಾಲ್ವರು ಎಸಿಪಿ, 16 ಇನ್​​ಸ್ಪೆಕ್ಟರ್​, 30 ಸಬ್​​​ಇನ್​ಸ್ಪೆಕ್ಟರ್​ ಹಾಗೂ ಕೆಎಸ್​​ಆರ್​​ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment