ಸಿನಿ ಸಮಾಚಾರ

64ನೇ ಫಿಲಂಫೇರ್ 2019: ರಣಬೀರ್‌, ಆಲಿಯಾ ಕೈಹಿಡಿದ ಬ್ಲಾಕ್ ಲೇಡಿ

ಮುಂಬಯಿಯ ಜಿಯೋ ಗಾರ್ಡನ್‌ನಲ್ಲಿ ನಡೆದ 64ನೇ ಫಿಲ್ಮ್‌ಫೇರ್‌ ಸಮಾರಂಭದಲ್ಲಿ ಸಂಜು ಸಿನಿಮಾಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಣಬೀರ್‌ ಕಪೂರ್‌ ಪಡೆದರೆ, ರಾಝಿ  ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಆಲಿಯಾ ಭಟ್‌ ಪಡೆದರು. ಇಬ್ಬರೂ ಬ್ಲಾಕ್‌ಲೇಡಿಯನ್ನು ಹಿಡಿದ ಮಿಂಚಿದ್ದು ಇಡೀ ಕಾರ್ಯಕ್ರಮದ ದೊಡ್ಡ ಆಕರ್ಷಣೆಯಾಯಿತು. ಈ ವರ್ಣ ರಂಜಿತ ಫಿಲ್ಮ್‌ಫೇರ್‌ ಆವಾರ್ಡ್ಸ್ ರೆಡ್‌ ಕಾರ್ಪೆಟ್‌ ಸಮಾರಂಭದಲ್ಲಿ ಬಾಲಿವುಡ್‌ನ ಬಹುತೇಕ ದಿಗ್ಗಜರು, ಗಣ್ಯರು, ಫಿಲ್ಮ್‌ ಮೇಕರ್ಸ್‌, ನಟ-ನಟಿಯರು ಕಲಾವಿದರು ನೆರೆದಿದ್ದರು. ಕಳೆದ 2018 ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಸಿನಿಮಾಳಿಗೆ ಮಾತ್ರವಲ್ಲ, ನಾನಾ ಕೆಟಗರಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಫಿಲ್ಮ್‌ಫೇರ್‌ ಜೋಶ್ : ರೆಡ್‌ ಕಾರ್ಪೆಟ್‌ನಲ್ಲಿ ವಾಕ್‌ ಡಿಸೈನರ್‌ವೇರ್‌ ಧರಿಸಿ ವಾಕ್‌ ಮಾಡಿದ ಸಿಲೆಬ್ರೆಟಿಗಳು ಹಾಗೂ ಸ್ಟೇಜ್‌ ಮೇಲೆ ನಟ-ನಟಿಯರ ಅದ್ಭುತ ಫರ್ಫಾಮೆನ್ಸ್‌ ನೆರೆದ ಸಿನಿಮಾ ಗಣ್ಯರ ಜೋಷ್‌ ಹೆಚ್ಚಿಸಿತ್ತು. ಕಾರ್ಯಕ್ರಮವನ್ನು ಶಾರುಖ್‌ ಖಾನ್‌, ರಾಜ್‌ಕುಮಾರ್‌ ಯಾದವ್‌ ಹಾಗೂ ವಿಕ್ಕಿ ಕೌಶಲ್‌ ನಿರೂಪಿಸಿದರು. ಇನ್ನು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ತಾರೆಯರ ಮೊಗದಲ್ಲಿ ನಗುಮೊಗ ಎದ್ದು ಕಾಣುತ್ತಿತ್ತು. ವೇದಿಕೆ ಮೇಲೆ ಪ್ರಶಸ್ತಿ ಸ್ವೀಕರಿಸಿ, ತಮ್ಮ ಸಿನಿ ಜರ್ನಿ ಹಾಗೂ ಪ್ರಶಸ್ತಿಗೆ ಕಾರಣರಾದವರನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.

ಫಿಲ್ಮ್‌ಫೇರ್‌ ಅವಾರ್ಡ್‌ ಪಡೆದವರು

ಅತ್ಯುತ್ತಮ ನಾಯಕ ನಟ: ರಣಬೀರ್‌ ಕಪೂರ್‌/ಸಂಜು

ಅತ್ಯುತ್ತಮ ನಾಯಕಿ ನಟಿ: ಆಲಿಯಾ ಭಟ್‌ /ರಾಝಿ

ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ (ನಾಯಕ): ರಣವೀರ್‌ ಸಿಂಗ್‌/ ಪದ್ಮಾವತ್‌ ಹಾಗೂ ಆಯುಷ್ಮಾನ್‌ ಖುರಾನಾ /ಅಂದಾಧುನ್‌

ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ (ನಾಯಕಿ): ನೀನಾ ಗುಪ್ತಾ /ಬಾದಾಯಿ ಹೋ

ಅತ್ಯುತ್ತಮ ನಿರ್ದೇಶಕ: ಮೇಘನಾ ಗುಲ್ಝಾರ್‌ /ರಾಝಿ

ಅತ್ಯುತ್ತಮ ವಿಮರ್ಶತ್ಮಾಕ ಚಿತ್ರ: ಅಂದಾಧುನ್‌

ಅತ್ಯುತ್ತಮ ಪೋಷಕ ನಟ: ಗಜರಾಜ್‌ ರಾವ್‌ /ಬಾದಾಯಿ ಹೋ ಹಾಗೂ ವಿಕ್ಕಿ ಕೌಶಲ್‌/ಸಂಜು

ಅತ್ಯುತ್ತಮ ಪೋಷಕ ನಟಿ: ಸುರೇಝಾ ಸಿಕ್ರಿ/ಬಾದಾಯಿ ಹೋ

ಅತ್ಯುತ್ತಮ ಡೆಬ್ಯೂ ನಟ: ಇಶಾನ್‌ ಕಟ್ಟರ್‌

ಅತ್ಯುತ್ತಮ ಡೆಬ್ಯೂ ನಟಿ: ಸಾರಾ ಅಲಿ ಖಾನ್‌

ಅತ್ಯುತ್ತಮ ನಿರ್ದೇಶಕ: ಅಮರ್‌ ಕೌಶಿಕ್‌ (ಸ್ತ್ರೀ )

ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೇಯಾ ಘೋಷಾಲ್‌ /ಪದ್ಮಾವತ್‌ ಗೂಮರ್‌ ಹಾಡು

ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಜಿತ್‌ ಸಿಂಗ್‌/ ರಾಝಿಯ ಎ ವತನ್‌

About the author

ಕನ್ನಡ ಟುಡೆ

Leave a Comment