ರಾಜ್ಯ ಸುದ್ದಿ

ಆನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮೃತ

ಮಂಡ್ಯ: ಆನೆ ದಾಳಿಯಿಂದ ಕರ್ತವ್ಯ ನಿರತ ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯಲ್ಲಿ 15 ವರ್ಷಗಳಿಂದ ವಾಚ್​ಮನ್​ ಆಗಿರುವ ಮಹದೇವು (35) ಅವರ ಮೇಲೆ ಮಳವಳ್ಳಿ ತಾಲೂಕಿನ ಸೋಲಬ ಗ್ರಾಮದ ಬಳಿ ಮುಂಜಾನೆ 4 ಗಂಟೆಗೆ ಕಾಡಾನೆ ದಾಳಿ ನಡೆಸಿದೆ.

ಮುಂಜಾನೆ 4 ಆನೆಗಳು ಗ್ರಾಮದ ಕಡೆ ಬರುತ್ತಿದ್ದವು. ಅದನ್ನು ತಿಳಿದ ನಾಲ್ವರು ಸಿಬ್ಬಂದಿ ಆನೆಗಳನ್ನು ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಕತ್ತಲಲ್ಲಿ ಕಾಣಿಸದೆ ಆನೆಯ ಎದುರೇ ಹೋದ ಮಹದೇವು ಅವರನ್ನು ಆನೆಗಳು ಸೊಂಡಿಲಿನಿಂದ ಬಡಿದು ಸಾಯಿಸಿವೆ ಎನ್ನಲಾಗಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment