ರಾಷ್ಟ್ರ ಸುದ್ದಿ

68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸದಲ್ಲಿದ್ದಾರೆ: ವಿ.ಕೆ.ಸಿಂಗ್

ನವದೆಹಲಿ: ವಿಶ್ವದ 68 ರಾಷ್ಟ್ರಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆಂದು ಸಂಸತ್ತಿನಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜ.ವಿ.ಕೆ.ಸಿಂಗ್ ಅವರು ಹೇಳಿದ್ದಾರೆ.
ಮುಂಬೈ ಮೂಲಕ ಸಾಫ್ಟ್ ವೇರ್ ಇಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿಯವರು ಗೂಢಚಾರ್ಯ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಕೆಲ ವರ್ಷಗಳ ಹಿಂದೆ ಬಂಧನಕ್ಕೊಳಪಡಿಸಿತ್ತು. ಮೂರು ವರ್ಷಗಳ ಬಳಿಕ ಹಮೀದ್ ಅವರು ನಿನ್ನೆಯಷ್ಟೇ ಪಾಕಿಸ್ತಾನದ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಈ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿರುವ ವಿ.ಕೆ.ಸಿಂಗ್ ಅವರು, 68 ದೇಶಗಳಲ್ಲಿ 8,445 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆ. 40 ಭಾರತೀಯರು ಸೆರೆವಾಸದ ಅವಧಿಯಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment