ರಾಷ್ಟ್ರ

ರೈಲು ಪ್ರಯಾಣಿಕರಿಗೆ ಹೊಸ ಯೋಜನೆ

ರೈಲು ಪ್ರಯಾಣ ಅಂದ್ರೇ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ! ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರು ತಮ್ಮ ದೈನಂದಿನ ಪ್ರಯಾಣ ಬೆಳೆಸುವುದು ಸಾಮಾನ್ಯ.. ಆದರೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಮಾತ್ರ ಇದಕ್ಕೆ ಹೊರತಾಗಿದ್ದಾರೆ..

ಅಂತವರಿಗೆ  ಒಂದು ಖುಷಿ ವಿಷಯ ಇದೆ ಏನು ಅಂತಿರಾ? ಮುಂದೆ ಈ ಸ್ಟೋರಿ ಓದಿ..!!

ಭಾರತೀಯ ರೈಲ್ವೆಯು ಪ್ರಯಾಣಿಕರಿಗಾಗಿ ಪ್ರತಿದಿನ 8,072 ರೈಲುಗಳನ್ನು ಓಡಿಸುತ್ತಿದ್ದು, ಭಾರತದ ಇಪ್ಪತ್ತೈದು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಸುಮಾರು ಐನೂರು ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಪ್ರತಿವರ್ಷ ಸಾಗಿಸುತ್ತದೆ. ಭಾರತೀಯ ರೈಲ್ವೆ ಜಾಲವು ಸಿಕ್ಕಿಮ್ , ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಲ್ಲಿ ಇಲ್ಲಿಯವರೆಗೂ ಪ್ರವೇಶ ಮಾಡಿಲ್ಲ.ರೈಲು ಭಾರತದ ಜನತೆಯ ಜನಪ್ರಿಯ ಪ್ರವಾಸ ಮಾಧ್ಯಮವಾಗಿದೆ. ಸಾಧಾರಣ ರೈಲಿನಲ್ಲಿ 18 ಕೋಚುಗಳಿದ್ದರೂ, ಕೆಲವೊಂದು ಜನಪ್ರಿಯ ರೈಲುಗಳಲ್ಲಿ 24ರವರೆಗೂ ಕೋಚುಗಳು ಇರುವುದುಂಟು. ಪ್ರತಿಯೊಂದು ಕೋಚು 18ರಿಂದ 72 ಪ್ರಯಾಣಿಕರಿಗಾಗಿ ವಿನ್ಯಾಸ ಮಾಡಿದ್ದರೂ , ಶಾಲಾ ರಜಾ ದಿನಗಳಲ್ಲಿ ಮತ್ತು ಬಿರುಸಿನ ಚಟುವಟಿಕೆಗಳ ಮಾರ್ಗಗಳಲ್ಲಿ ಜನದಟ್ಟಣೆಯು ಇದರ ಅನೇಕ ಪಟ್ಟು ಹೆಚ್ಚಿರುವುದನ್ನು ಕಾಣಬಹುದು.
ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಮತ್ತೊಂದು ಪ್ರಮುಖ ಯೋಜನೆಯನ್ನು ರೂಪಿಸಿ ಪ್ರಾಯೋಗಿಕವಾಗಿ ಎರಡು ರೈಲು ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ..
‌ರೈಲ್ವೆ ಸಚಿವರಾದ ಸುರೇಶ್ ಪ್ರಭು, ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ರೈಲು ಆಸ್ಪತ್ರೆ ಉದ್ಘಾಟಿಸಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಹೊಸ ವರ್ಷದ ಆಫರ್ ನೀಡಿದ್ದಾರೆ..

About the author

ಕನ್ನಡ ಟುಡೆ

Leave a Comment