ಸುದ್ದಿ

ಮಕ್ಕಳ ಕೈಗೆಟಕುವ ಬೆಸ್ಕಾಂ ಟ್ರಾನ್ಸ್-ಫಾರ್ಮರ್! ಮೂರು ಅಡಿ ಅಂತರ

ಆನೇಕಲ್,ಡಿ.28: ತಾಲೂಕಿನ ಬಿದರಗುಪ್ಪೆ ಗ್ರಾಮದಲ್ಲಿ ಮನೆಯ ಮುಂದೆ ಕೇವಲ ಮೂರು ಅಡಿ ಅಂತರದಲ್ಲಿ ವಿದ್ಯುತ್ ಟ್ರಾನ್ಸ್ಪಾರ್ಮರ್ ಅಳವಡಿಸಿದ್ದು, ಇದರಿಂದ ಅಲ್ಲಿನ ಜನಸಾಮಾನ್ಯರು ಭಯದಲ್ಲೆ ಕಾಲ ಕಳೆಯುವಂತಾಗಿದೆ. ಅಲ್ಲದೆ ಪ್ರತಿ ದಿನ ಮಕ್ಕಳು ಆಟವಾಡಲು ಮನೆಯಿಂದ ಹೊರ ಬರದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಮಕ್ಕಳ ಕೈಗೆಟಕ್ಕುತ್ತದೆ ಎಂಬ ಭಯ ಪಾಲಕರದ್ದಾಗಿದೆ. ಈ ಬಗ್ಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ಬೇಜಾವ್ದಾರಿತನ ಎತ್ತಿ ತೊರಿಸುತ್ತಿದ್ದಾರೆ ಎಂದು ಅಲ್ಲಿನ ಸಾರ್ವಜನಿಕರ ಆಕ್ರೋಶ.

About the author

ಕನ್ನಡ ಟುಡೆ

Leave a Comment