ರಾಜ್ಯ

8ನೇ ಆವೃತ್ತಿಯ ದಿ ಬ್ರಾಂಡ್ ಟ್ರಸ್ಟ್ ರಿಪೋರ್ಟ್ 2018 : ಮುಂಚೂಣಿಯಲ್ಲಿ ರಾಜ್ಯ ರಾಜಧಾನಿ

ಟಿಆರ್‌‌‌ಎ ರಿಸರ್ಚ್ ಸಂಸ್ಥೆ ತನ್ನ ಉನ್ನತ ಉತ್ಪನ್ನ ವರದಿಯ ಸರಣಿಯಲ್ಲಿ 8ನೇ ಆವೃತ್ತಿಯ ದಿ ಬ್ರಾಂಡ್ ಟ್ರಸ್ಟ್ ರಿಪೋರ್ಟ್ 2018ನ್ನು ಬಿಡುಗಡೆ ಮಾಡಿದೆ.ಬೆಂಗಳೂರು ಮೂಲದ ಬ್ರಾಂಡ್‌‌ಗಳು ಈ ಪಟ್ಟಿಯಲ್ಲಿ ದೃಢವಾದ ಪ್ರದರ್ಶನ ನೀಡಿದ್ದು ನಗರದ ಬ್ರಾಂಡ್‌‌‌ಗಳು ಈ ವರದಿಯ 38 ಸೂಪರ್ ವರ್ಗಗಳ ಪೈಕಿ 5ರಲ್ಲಿ ಮುಂಚೂಣಿಯಲ್ಲಿವೆ. ಕಳೆದ ವರ್ಷದಿಂದ ಈ ಮುಂಚೂಣಿಯ ಸ್ಥಾನದಲ್ಲಿ ಮತ್ತೆ ಕಾಣಿಸಿಕೊಂಡಿರುವ ಬ್ರಾಂಡ್‌‌‌ಗಳಲ್ಲಿ ಡೆಲ್ (ವೈಯಕ್ತಿಕ ತಂತ್ರಜ್ಞಾನ), ಫಾಸ್ಟ್ರಾಕ್ (ಬ್ರಾಂಡ್ ಫ್ಯಾಷನ್), ತನಿಷ್ಕ್ (ಆಭರಣ) ಸೇರಿದ್ದು ನೂತನ ನಂಬಿಕೆಯ ವರ್ಗದ ಮುಂಚೂಣಿಯ ಸಂಸ್ಥೆಗಳಲ್ಲಿ ಆ್ಯರೋ (ಉಡುಪುಗಳು), ಎಒ ಸ್ಮಿತ್ (ವಾಟರ್ ಹೀಟರ್) ಸೇರಿವೆ. ದೊಡ್ಡ ಸಂಖ್ಯೆಯ ವಲಸೆ ಜನರು ಹಾಗೂ ವೃತ್ತಿನಿರತ ಮಹಿಳೆಯರ ಕಡಿಮೆಯಾದ ಭಾಗವಹಿಸುವಿಕೆಗಳು ನಗರದ ಮನಸ್ಸುಗಳನ್ನು ರೂಪಿಸುತ್ತಿವೆ. ಎಲ್‌‌ಜಿ (ಅಖಿಲ ಭಾರತ 3ನೇ ಸ್ಥಾನ) ಬೆಂಗಳೂರಿನ ಅತ್ಯಂತ ನಂಬಿಕಾರ್ಹ ಬ್ರಾಂಡ್‌‌‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. 2ನೇ ಸ್ಥಾನ ಹ್ಯೂಲೆಟ್ ಪ್ಯಾಕಾರ್ಡ್ (ಅಖಿಲ ಭಾರತ 9ನೇ ಸ್ಥಾನ) ನದ್ದಾಗಿದೆ. ಸಂಚಾರ ದಟ್ಟಣೆಯಿಂದಾಗಿ ರಸ್ತೆಯಲ್ಲಿ ಹೆಚ್ಚಿನ ಕಾಲ ಕಳೆಯುವ ನಗರದಲ್ಲಿ ಬಿಎಂಡಬ್ಲ್ಯು (ಅಖಿಲ ಭಾರತ 15ನೇ ಸ್ಥಾನ) 3ನೇ ನಂಬಿಕಾರ್ಹ ಸ್ಥಾನವನ್ನು ಹೊಂದಿದೆ. ಎಲ್‌‌ಐಸಿ (ಅಖಿಲ ಭಾರತ 24ನೇ ಸ್ಥಾನ) 4ನೇ ಸ್ಥಾನದಲ್ಲಿದ್ದು ಜಿಇ (ಅಖಿಲ ಭಾರತ 88ನೇ ಸ್ಥಾನ) 5ನೇ ಸ್ಥಾನವನ್ನು ನಗರದ ನಂಬಿಕಾರ್ಹ ಬ್ರಾಂಡ್‌‌ಗಳಲ್ಲಿ ಗಳಿಸಿವೆ. ಭಾರತದ ಅತ್ಯಂತ ನಂಬಿಕಾರ್ಹ ಬ್ರಾಂಡ್ ಆಗಿ 2ನೇ ವರ್ಷದಲ್ಲೂ ಸತತವಾಗಿ ಸ್ಯಾಮ್‌‌‌ಸಂಗ್ ಮುಂಚೂಣಿಯಲ್ಲಿದೆ. ಈ ಪಟ್ಟಿಯಲ್ಲಿ ಅತ್ಯಂತ ನಂಬಿಕಾರ್ಹ ಬ್ರಾಂಡ್‌‌ಗಳಾಗಿ ಸೋನಿ ಮತ್ತು ಎಲ್‌‌ಜಿ  ಕ್ರಮವಾಗಿ 2ನೇ ಮತ್ತು 3ನೇ ಸ್ಥಾನವನ್ನು ಉಳಿಸಿಕೊಂಡಿದ್ದು ಇದು 2017ರ ಪುನರಾವರ್ತನೆಯಾಗಿದೆ. ಭಾರತದ 4ನೇ ಅತ್ಯಂತ ನಂಬಿಕಾರ್ಹ ಬ್ರಾಂಡ್ ಎಂದರೆ ಭಾರತದ ಮುಂಚೂಣಿಯ ಬಹುರಾಷ್ಟ್ರಿಯ ಸಂಸ್ಥೆ ಟಾಟಾ ಆಗಿದ್ದು ನಂತರದ ಸ್ಥಾನವನ್ನು ಅಮೇರಿಕಾದ ಕುಪರ್‌‌‌ಟಿನೋ ಮೂಲದ ತಂತ್ರಜ್ಞಾನ ಸಂಸ್ಥೆ ಆ್ಯಪಲ್ ಹೊಂದಿದ್ದು ಕಳೆದ ವರ್ಷಕ್ಕಿಂತ ಒಂದು ರ‍್ಯಾಂಕ್‌ ಕೆಳಗಿಳಿದಿದೆ. ಅಗ್ರ ಅತ್ಯಂತ ನಂಬಿಕಾರ್ಹ ಬ್ರಾಂಡ್ ಗಳ ಪಟ್ಟಿಯಲ್ಲಿ ಎರಡು ರ‍್ಯಾಂಕ್‌ಗಳಷ್ಟು ಮೇಲೇರಿಸುವ ಡೆಲ್ 2018ರಲ್ಲಿ 6ನೇ ಸ್ಥಾನ ಪಡೆದಿದೆ. ಹೊಂಡಾ 7ನೇ ಸ್ಥಾನದಲ್ಲಿದೆ. ನಂತರದ ಸ್ಥಾನ ನೈಕ್‌‌ನದ್ದಾಗಿದ್ದು ಕಳೆದ ವರ್ಷಗಳಲ್ಲಿ (2015ರಲ್ಲಿ 49ನೇ, 2016ರಲ್ಲಿ 48ನೇ, 2017ರಲ್ಲಿ 37ನೇ ಸ್ಥಾನ) ಸತತವಾಗಿ ಅದು ಮೇಲೇರುತ್ತಿದ್ದು 2018ರಲ್ಲಿ 8ನೇ ಸ್ಥಾನದಲ್ಲಿದೆ. ಹ್ಯೂಲೆಟ್ ಪ್ಯಾಕಾರ್ಡ್ ಕಳೆದ ವರ್ಷಕ್ಕಿಂತ  2 ಸ್ಥಾನ ಮೇಲೇರಿ 9ನೇ ರ‍್ಯಾಂಕ್‌ ಪಡೆದಿದೆ. ಮಾರುತಿ ಸುಜುಕಿ  2017ಕ್ಕಿಂತ ಮೂರು ರ‍್ಯಾಂಕ್‌ ಕೆಳಗೆ ಇಳಿದು 10ನೇ ಸ್ಥಾನದಲ್ಲಿದೆ. ಬಿಟಿಆರ್ 2018 ತನ್ನ ಸರಣಿಯಲ್ಲಿ 8ನೇಯದ್ದಾಗಿದೆ ಎಂದು ಎಂದು ಟಿಆರ್‌‌ಎ ರಿಸರ್ಚ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಚಂದ್ರಮೌಳಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment