ಪರಿಸರ

80 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ

ಮಡಿಕೇರಿ: ಶುರುವಾದರೆ ಕೊಡಗಿನ ಜಲಪಾತಗಳನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಅಬ್ಬಿ, ಮಲ್ಲಳ್ಳಿ ಜಲಪಾತಗಳಂತೆಯೇ ಪ್ರಸಿದ್ಧವಾಗಿರುವ ಮತ್ತೊಂದು ಜಲಪಾತವೆಂದರೆ ಚೇಲಾವರ ಜಲಪಾತ. ಹಾಲ್ನೊರೆಯಂತೆ ಹರಿಯುವ ಈ ಜಲಪಾತವನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನಿಂದ 1 6 ಕಿ.ಮೀ ದೂರ ಸಾಗಿದರೆ(ಮಡಿಕೇರಿಯಿಂದ ಸುಮಾರು 60 ಕಿ.ಮೀ ದೂರದಲ್ಲಿ ಅಂದರೆ ಒಂದು ಗಂಟೆ ಪ್ರಯಾಣ ಮಾಡಿದರೆ) ಈ ಮನೋಹರ ಜಲಪಾತ ಕಣ್ಣಿಗೆ ಬೀಳುತ್ತದೆ.
ಚೋಮಕುಂದಿನ ಆಮೆಪರೆ ಬೆಟ್ಟದಿಂದ, 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ಸೊಬಗು ಕಣ್ತುಂಬಿಕೊಳ್ಳಲು ಅಕ್ಟೋಬರ್‌ ಒಳಗೆ ಭೇಟಿ ನೀಡಬೇಕು. ಇಲ್ಲಿ ನೀರಿನಲ್ಲಿ ಆಡುವುದನ್ನು ನಿಷೇಧಿಸಲಾಗಿದೆ.

About the author

ಕನ್ನಡ ಟುಡೆ

Leave a Comment