ಸಿನಿ ಸಮಾಚಾರ

#Me Too: ಶ್ರುತಿ ವಿರುದ್ಧ ಮಾನನಷ್ಟ ಕೇಸ್‌ ದಾಖಲಿಸಿದ ಅರ್ಜುನ್‌ ಸರ್ಜಾ

ಬೆಂಗಳೂರು: ಮೀ ಟೂ ಆರೋಪ ಮಾಡಿದ್ದ  ನಟಿ ಶ್ರುತಿ ಹರಿಹರನ್‌ ಅವರ ವಿರುದ್ಧ ನಟ ಅರ್ಜುನ್‌ ಸರ್ಜಾ ಅವರು ಗುರುವಾರ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಬೆಂಗಳೂರಿನ ಸಿವಿಲ್‌ ಕೋರ್ಟ್‌ನಲ್ಲಿ  ಧ್ರುವ ಸರ್ಜಾ ಮೂಲಕ  ಮಾನನಷ್ಟ ಮೊಕದ್ದಮೆ ದಾಖಲು ಮಾಡಿಸಿದ್ದು, 5 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಮನವಿ ಸಲ್ಲಿಸಿದ್ದಾರೆ. ಅರ್ಜಿ ಇವತ್ತು ಸಂಜೆ ಇಲ್ಲ ನಾಳೆ ವಿಚಾರಣೆಗೆ  ಬರಲಿದೆ.

ಸೈಬರ್‌ ಕ್ರೈಂ ಠಾಣೆಗೆ ದೂರು : ಅರ್ಜುನ್‌ ಸರ್ಜಾ ಅವರ ಮ್ಯಾನೇಜರ್‌ ಶಿವಾರ್ಜುನ  ಅವರು ಸೈಬರ್‌ ಕ್ರೈಂ ಠಾಣೆಗೆ ದೂರ ನೀಡಿದ್ದು, ಸರ್ಜಾ ಅವರ ಟ್ವೀಟರ್‌ ಮತ್ತು ಈ ಮೇಲ್‌ ಖಾತೆ ಹ್ಯಾಕ್‌ ಮಾಡಲಾಗಿದ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

 

About the author

ಕನ್ನಡ ಟುಡೆ

Leave a Comment