ಸಿನಿ ಸಮಾಚಾರ

#MeToo: ಖ್ಯಾತ ಬಹುಭಾಷಾ ನಟ ಅರ್ಜನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಬೆಂಗಳೂರು: ಮಿ ಟೂ ಅಭಿಯಾನ ಹಲವು ರಾಜಕೀಯ ಗಣ್ಯರ ಹಾಗೂ ನಟರ ನಿದ್ದೆಗೆಡಿಸಿದ್ದು, ಈಗ ಖ್ಯಾತ ಬಹುಭಾಷಾ ನಟ ಅರ್ಜನ್ ಸರ್ಜಾ ಅವರಿಗೂ #MeToo ಬಿಸಿ ತಟ್ಟಿದೆ.’ಗಂಡ ಹೆಂಡತಿ’ ಚಿತ್ರದ ಖ್ಯಾತಿಯ ನಟಿ ಸಂಜನಾ ಗುಲ್ರಾಣಿ ನಂತರ ಸ್ಯಾಂಡಲ್ ವುಡ್ ಖ್ಯಾತ ನಟಿ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ತನ್ನ ಮೇಲಾದ ಲೈಂಗಿಕ ಕಿರುಕುಳದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನನಗೆ ಪದೇ ಪದೇ ಡಿನ್ನರ್ ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ  ಪೀಡಿಸುತ್ತಿದ್ದರು ಎಂದು ಮ್ಯಾಗಜೀನ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಹೇಳಿದ್ದಾರೆ. ಡಿನ್ನರ್ ಗೆ ಬರುವುದಿಲ್ಲ ಎಂದರೂ ಕೂಡ ಪದೇ ಪದೇ ಪೀಡಿಸುತ್ತಿದ್ದರು. ಅಲ್ಲದೆ ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ. ಪತಿ – ಪತ್ನಿ ಪಾತ್ರದಲ್ಲಿ ಅಭಿನಯಿಸಿದರೂ ಅದಕ್ಕೆ ಒಂದು ಗಡಿರೇಖೆ ಇರುತ್ತದೆ. ಆದರೆ ಅರ್ಜುನ್ ಸರ್ಜಾ ಆ ಗಡಿ ರೇಖೆಯನ್ನು ಮೀರಿದ್ದರು ಎಂದು ಶ್ರುತಿ ದೂರಿದ್ದಾರೆ.

About the author

ಕನ್ನಡ ಟುಡೆ

Leave a Comment