ರಾಜ್ಯ ಸುದ್ದಿ

ಕಣ್ಣೀರೇ ದೇವೇಗೌಡರ ಕುಟುಂಬದ ಬ್ರ್ಯಾಂಡ್‌: ಮಾಜಿ ಡಿಸಿಎಂ ಆರ್‌.ಅಶೋಕ್‌ ವ್ಯಂಗ್ಯ

ಬೆಂಗಳೂರು: ‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ಕಣ್ಣೀರೇ ಬ್ರ್ಯಾಂಡ್‌. ನಿಮ್ಮ ಪಕ್ಷದ ಅಭ್ಯರ್ಥಿಯಾಗಿ ಬೇರೆಯವರ ಮಕ್ಕಳು ಚುನಾವಣೆಗೆ ನಿಂತಾಗ ಯಾಕೆ ಕಣ್ಣೀರು ಬರುವುದಿಲ್ಲ’ ಎಂದು ಮಾಜಿ ಡಿಸಿಎಂ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇವೇಗೌಡರ ಅಶ್ರುಧಾರೆ ಬೇರೆಯವರಿಗಾಗಿ ಅಲ್ಲ. ರೈತರ ಪರ, ಮಣ್ಣಿನ ಮಗ ಎಂದು ಕರೆದುಕೊಳ್ಳುವ ನಿಮಗೆ ಬೇರೆ ಮಣ್ಣಿನ ಮಕ್ಕಳ ಬಗ್ಗೆ ಏಕೆ ಕಣ್ಣೀರು ಬರುವುದಿಲ್ಲ ? ನಿಖಿಲ್‌ ಕುಮಾರಸ್ವಾಮಿ ಗೋ ಬ್ಯಾಕ್‌ ಎಂದು ಮಂಡ್ಯದಲ್ಲಿ ಅಭಿಯಾನ ನಡೆದಿರುವ ಬಗ್ಗೆ ಬೇಸರ ಮಾಡಿಕೊಳ್ಳುವ ನಿಮಗೆ ಬೇರೆಯವರು ಅಳುವಾಗ ನೋವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

About the author

ಕನ್ನಡ ಟುಡೆ

Leave a Comment