ರಾಜ್ಯ ಸುದ್ದಿ

ಲಿಂಗೈಕ್ಯರಾದ ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಕಲ ಸಿದ್ಧತೆ

ಕೂಡಲಸಂಗಮ: ಲಿಂಗೈಕ್ಯರಾದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ| ಮಾತೆ ಮಹಾದೇವಿ ಅವರ ಕ್ರಿಯಾ ಸಮಾಧಿಗೆ ಕೂಡಲಸಂಗಮದ ಬಸವ ಧರ್ಮ ಪೀಠದಲ್ಲಿ ಸಕಲ ಸಿದ್ಧತೆ ಮಾಡಿದ್ದು, ಶನಿವಾರ ಅವರ ಕ್ರಿಯಾ ಸಮಾಧಿ ಕಾರ್ಯ ನೆರವೇರಲಿದೆ. ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದ ಶರಣ ಲೋಕದ ಘಣಲಿಂಗ ಮಂಟಪದಲ್ಲಿರುವ ಅಕ್ಕಮಹಾದೇವಿ ಮತ್ತು ಅಂತರ್ಜಾತಿ ವಿವಾಹ ಚಿತ್ರಪಟದ ಬಳಿ ಅವರ ಜೀವಿತ ಅವಧಿಯಲ್ಲಿಯೇ (24 ವರ್ಷಗಳ ಹಿಂದೆ) ಸಮಾಧಿ ನಿರ್ಮಾಣಗೊಂಡಿದ್ದು, ಮಾತೆ ಮಹಾದೇವಿ ಅವರು ಇದೇ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ.

ಭಕ್ತರ ದರ್ಶನಕ್ಕೆ ಅವಕಾಶ: ಶುಕ್ರವಾರ ರಾತ್ರಿ ಕೂಡಲಸಂಗಮಕ್ಕೆ ಆಗಮಿಸುವ ಮಾತೆ ಮಹಾದೇವಿಯವರ ಲಿಂಗ ಶರೀರವನ್ನು ಚಾಲುಕ್ಯ ಮಹಾದ್ವಾರದಿಂದ ಬಸವಣ್ಣನವರ ಐಕ್ಯ ಮಂಟಪದವರೆಗೆ ಮೆರವಣಿಗೆ ನಡೆಸಿ, ಮರಳಿ ಬಸವ ಧರ್ಮ ಪೀಠದ ಮಹಾಮನೆ ಆವರಣಕ್ಕೆ ತಂದು ಬಸವ ತತ್ವದಡಿ ಪ್ರಾರ್ಥನೆ ಸಲ್ಲಿಸಿದ ನಂತರ ಶನಿವಾರ ಮಧ್ಯಾಹ್ನ 12ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. 200/300 ಅಡಿ ಅಳತೆ ಮುಖ್ಯ ವೇದಿಕೆಯಲ್ಲಿ ಅಂತಿಮ ದರ್ಶನಕ್ಕೆ ಸಿದಟಛಿತೆ ನಡೆದಿದ್ದು, ಇಲ್ಲಿ 75 ಸಾವಿರ ಭಕ್ತರು ಏಕಕಾಲದಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ವಚನ ಸಂಗೀತಕ್ಕಾಗಿ 15/20 ಅಳತೆಯ ಪ್ರತ್ಯೇಕ ವೇದಿಕೆ ಸಿದಟಛಿಗೊಂಡಿದೆ. 200/300 ಅಡಿ ಅಳತೆಯ ಮತ್ತೂಂದು ಪೆಂಡಾಲ್‌ನಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment