ರಾಷ್ಟ್ರ ಸುದ್ದಿ

ಲೋಕಸಭೆ ಚುನಾವಣೆ: ಮಾಯಾವತಿ ಜೊತೆ ಕೈ ಜೋಡಿಸಿದ ಪವನ್ ಕಲ್ಯಾಣ್

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಡುವೆ ಗೆಲುವಿನ ಲೆಕ್ಕಾಚಾರಗಳು ಶುರುವಾಗಿದ್ದು ಈ ಮಧ್ಯೆ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಬಿಎಸ್ಪಿ ಮುಖಂಡೆ ಮಾಯಾವತಿ ಜೊತೆ ಕೈಜೋಡಿಸಿದ್ದಾರೆ. ಮಾಯಾವತಿ ಅವರನ್ನು ಪ್ರಧಾನಿ ಮಾಡುವ ಕೆಲಸದಲ್ಲಿ ಇದು ನನ್ನ ಸಣ್ಣ ಪ್ರಯತ್ನ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಮಾಯಾವತಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮಾಯಾವತಿ ಆಂಧ್ರ ಮತ್ತು ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಜೊತೆ ಸೇರಿ ಪ್ರಚಾರ ಮಾಡಲಿದ್ದಾರೆ.

About the author

ಕನ್ನಡ ಟುಡೆ

Leave a Comment