ಸಿನಿ ಸಮಾಚಾರ

99 ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಭಾವನಾ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “99′ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ದೇಶಕ ಪ್ರೀತಂಗುಬ್ಬಿ ಮತ್ತು ಗಣೇಶ್‌ ಕಾಂಬಿನೇಷನ್‌ನ ಮೂರನೇ ಸಿನಿಮಾ ಇದಾಗಿದ್ದು, ನಿರ್ಮಾಪಕ ರಾಮು ಅವರ ಜೊತೆ ಗಣೇಶ್‌ಗೆ ಇದು ಮೊದಲ ಚಿತ್ರ. “99′ ತಮಿಳಿನ ಸೂಪರ್‌ ಹಿಟ್‌ “96′ ಚಿತ್ರದ ಅವತರಣಿಕೆ. ಗಣೇಶ್‌ ಅವರಿಗೆ ಆ ಪಾತ್ರ ಸೂಕ್ತ ಅನ್ನುವ ಕಾರಣಕ್ಕೆ ಪ್ರೀತಮ್‌ ಗುಬ್ಬಿ, ಅವರೊಂದಿಗೆ ಬಹುಬೇಗನೆ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಇದೊಂದು ಅದ್ಭುತವಾದ ಪ್ರೇಮಕಾವ್ಯ. ಇಲ್ಲೊಂದು ಲವ್‌ಸ್ಟೋರಿ ಇದೆಯಾದರೂ, ಅದು ಬೇರೆಯದ್ದೇ ಮಜಾ ಕೊಡುವಂತಹ ಲವ್‌ಸ್ಟೋರಿ. ಅಲ್ಲದೇ ಈ ಚಿತ್ರಕ್ಕಾಗಿ ಗಣೇಶ್‌ ಬರೋಬ್ಬರಿ ಐದು ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಅದೂ ಕೇವಲ ಒಂದೂವರೆ ತಿಂಗಳಲ್ಲಿ ಅನ್ನೋದು ವಿಶೇಷ. “99′ ಚಿತ್ರದಲ್ಲಿ “ಜಾಕಿ’ ಭಾವನಾ ಗಣೇಶ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದಲ್ಲಿ ಗಣೇಶ್‌ ಜಾಲಿ ಹುಡುಗನ ಪಾತ್ರ ಮಾಡಿದ್ದು, ಮುಖದ ಮೇಲೆ ಗಡ್ಡ, ಗುಂಡು ಗುಂಡಾಗಿ ಕಾಣಿಸಿಕೊಂಡಿದ್ದು, ಸದ್ಯದಲ್ಲೇ ಚಿತ್ರವು ತೆರೆಮೇಲೆ ಬರಲಿದೆ.

About the author

ಕನ್ನಡ ಟುಡೆ

Leave a Comment