ಕೊರೊನಾದಿಂದ ಭಯದ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೂಂದುಡಿಕೆ ಬಗ್ಗೆ ಚರ್ಚೆ

ಕಲಬುರ್ಗಿ : ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೂಂದುಡಿಕೆ ಬಗ್ಗೆ ಬೋಡ್೯ ಜೊತೆ ಚರ್ಚೆ ನಡೆಸಲಾಗಿದೆಯಂತೆ. ಕೊರೋನಾ ವೈರಸ್‌ ಹರಡುವ ಭೀತಿಯಿಂದ ಪರೀಕ್ಷೆ ಮೂಂದುಡಿಕೆ ವಿಚಾರಕ್ಕೆ ಬೋಡ್೯ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಶರತ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಕೊರೊನಾದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ನಗರದ ವಾರ್ತಾ ಭವನದಲ್ಲಿ ಜಿಲ್ಲಾಧಿಕಾರಿ ಶರತ್ ಬಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸುದ್ದಿಗೋಷ್ಠಿ ನಡೆಸಲಾಗಿದೆ.
ಈ ವೇಳೆ ಚರ್ಚೆ ಮಾಡಿ, ಪರೀಕ್ಷೆ ಮುಂದುಡಿಕೆ ಬಗ್ಗೆ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದಂತೆ. ರಾಜ್ಯದಲ್ಲಿ ಮಾರ್ಚ್ 27 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲು ದಿನಾಂಕ ನಿಗದಿಯಾಗಿದೆ.
ಕಲಬುರ್ಗಿಯಲ್ಲಿ ಕೊರೊನಾದಿಂದ ವೃದ್ಧ ಮೃತಪಟ್ಟಿದ್ದಾರೆ. ಕೊರೊನಾದಿಂದ ಮರಣ ಹೊಂದಿದ, ಭಾರತದ ಮೊದಲ ಪ್ರಕರಣ ಇದಾಗಿದೆ. ಹೀಗಾಗಿ, ಇಡೀ ಕಲಬುರ್ಗಿಯ ಮೇಲೆ ಹೆಚ್ಚು ನಿಗಾ ವಹಿಸಿಲಾಗಿದೆ. ಮನೆ ಬಿಟ್ಟು ಹೊರಬರದಿರುವ ಜನರಿಗೆ ಸೂಚನೆ ನೀಡಲಾಗಿದೆ.
Share
WhatsApp
Follow by Email