ಲಾಸ್ ಏಂಜಲೀಸ್: RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
Natu Natu song ( NTR and RAMCHARAN )
ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ.
ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭ್ಯವಾಗಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ
M M KEERAVANI
ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ.
ಪುನೀತ್ ರಾಜಕುಮಾರ ಅವರು ಕಾಣಿಸಿಕೊಂಡ ಕರ್ನಾಟಕ ರತ್ನ, ಪವರ್ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರ ಕನಸಿನ ಕೂಸು ‘ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಯೂಟ್ಯೂಬ್‍ನಲ್ಲಿ ರಿಲೀಸ್ ಆದ ಕೇವಲ ಒಂದೇ ಗಂಟೆಗಳಲ್ಲಿ ಈ ಟ್ರೈಲರ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಸಾಕ್ಷ್ಯ ಚಿತ್ರ
ಕರ್ನಾಟಕದ ಅಭಯಾರಣ್ಯ, ನದಿ, ತೊರೆ, ಬೆಟ್ಟ-ಗುಡ್ಡಗಳು ಮತ್ತು ಪ್ರಾಣಿಸಂಕುಲವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ‘ಕರ್ನಾಟಕದ ಕಾಡು ಉಳಿಸಿ’ ಎಂಬ ವರನಟ ಡಾ. ರಾಜಕುಮಾರ್ ಅವರ ಸಂದೇಶದ ಮರುಜನ್ಮವೇ ಹೊಸ ‘ಗಂಧದ ಗುಡಿ’ಯ ಸಾರಾಂಶವಾಗಿದೆ.
ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಪು ಅವರನ್ನು ಹೊಗಳಿ ಗಂಧದ ಗುಡಿ ಸಾಕ್ಷ್ಯ ಚಿತ್ರಕ್ಕೆ ಹೀಗೆ ಶುಭ ಹಾರೈಸಿದ್ದಾರೆ.
ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. #GandhadaGudi ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.
Appu lives in the hearts of millions around the world. He was brilliance personified, full of energy and blessed with unparalleled talent. #GandhadaGudi is a tribute to Mother Nature, Karnataka's natural beauty and environmental conservation. My best wishes for this endeavour. https://t.co/VTimdGmDAM
2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದ್ದರು. ಇದೇ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ವಿಶೇಷ ಅಂದ್ರೆ ‘ಗಂಧದ ಗುಡಿ’ ಡಾಕ್ಯುಮೆಂಟರಿಯನ್ನು ‘ಅಪ್ಪು’ ಆಸೆಯಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್–9ರ ಎರಡನೇ ವಾರದ ಎಲಿಮಿನೇಶನ್‌ಗೆ ಕ್ಷಣಗಣನೆ ಶುರುವಾಗಿದೆ. ಈ ವಾರ 9 ಮಂದಿ ನಾಮಿನೇಟ್ ಆಗಿದ್ದು, ಹೊರಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ.
Bigg Boss 9
ಪ್ರಶಾಂತ್ ಸಂಬರಗಿ, ನೇಹಾ ಗೌಡ, ದರ್ಶ್ ಚಂದ್ರಪ್ಪ, ನವಾಜ್, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ಮಯೂರಿ, ಅಮೂಲ್ಯ ಗೌಡ, ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಮನೆಯಿಂದ ಹೊರಹೋದ ಐಶ್ವರ್ಯಾ ಪಿಸೆ, ಬಿಗ್ ಬಾಸ್ ಅವರು ನೀಡಿದ್ದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಆರ್ಯವರ್ಧನ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.
ಇನ್ನು, ಈ ವಾರದ ಕ್ಯಾಪ್ಟನ್ ವಿನೋದ್ ಗೊಬ್ಬರಗಾಲ ಅವರು, ಬಿಗ್ ಬಾಸ್ ಸೂಚನೆಯಂತೆ ತಮ್ಮ ಅಧಿಕಾರ ಬಳಸಿಕೊಂಡು ರೂಪೇಶ್ ರಾಜಣ್ಣ ಅವರನ್ನು ನಾಮಿನೇಟ್ ಮಾಡಿದ್ದರು. ಉಳಿದ ಏಳು ಮಂದಿ ಮನೆಯ ಸದಸ್ಯರ ಅಭಿಪ್ರಾಯದ ಆಧಾರದ ಮೇಲೆ ಎಲಿಮಿನೇಶನ್ ಹಂತಕ್ಕೆ ಬಂದು ನಿಂತಿದ್ದಾರೆ.ಮನೆಯ ಸದಸ್ಯರ ಜೊತೆ ಅಷ್ಟಾಗಿ ಬೆರೆಯುತ್ತಿಲ್ಲ ಎಂಬ ಕಾರಣಕ್ಕೆ ದರ್ಶ್ ಚಂದ್ರಪ್ಪ ಅವರಿಗೆ ಅತಿ ಹೆಚ್ಚು ಜನ ನಾಮಿನೇಶನ್‌ಗೆ ಮತ ಹಾಕಿದ್ದರು
ರಾಕೇಶ್‌ಗೆ ಕಳಪೆ ಪಟ್ಟ: ಹೌದು, ಮನೆಯಲ್ಲಿ ಆಗಾಗ್ಗೆ ಪ್ರ್ಯಾಂಕ್ ಮಾಡುತ್ತಾ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ರಾಕೇಶ್ ಅಡಿಗ ಅವರಿಗೆ ಈ ವಾರದ ಕಳಪೆ ಪಟ್ಟ ಸಿಕ್ಕಿದೆ. ವಿನೋದ್ ಗೊಬ್ಬರಗಾಲ ಮತ್ತು ರಾಕೇಶ್‌ಗೆ ಸಮಾನ ಮತಗಳು ಬಿದ್ದಿದ್ದವು. ಬಳಿಕ, ಆರ್ಯವರ್ಧನ್ ಅವರು ರಾಕೇಶ್ ಕಡೆ ಬೊಟ್ಟು ಮಾಡಿದ್ದರಿಂದ ಟೈ ಬ್ರೇಕರ್ ಮೂಲಕ ಅವರು ಜೈಲು ಸೇರಿದರು.
ಬಾಲಿವುಡ್‌ಗೆ ಪ್ರವೇಶ ಮಾಡಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ‘ಗುಡ್ ಬೈ‘ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದು ಅಕ್ಟೋಬರ್ 7ರಂದು ತೆರೆಕಾಣಲಿದೆ.
ಹಿಂದಿಯ ಖ್ಯಾತ ನಟ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಪೋಸ್ಟರ್‌ನಲ್ಲಿ ಅಮಿತಾಭ್ ನೀಲಿ ಬಣ್ಣದ ಜಾಕೆಟ್ ಧರಿಸಿದ್ದಾರೆ. ಲೇಯರ್ ಮಾಡಿದ ಬೀಜ್ ಕುರ್ತಾ ಧರಿಸಿರುವುದನ್ನು ಕಾಣಬಹುದು. ಅವರ ಹಿಂದೆ ಹಸಿರು ಬಣ್ಣದ ಕುರ್ತಾ ಮತ್ತು ದುಪಟ್ಟಾ ಧರಿಸಿರುವ ರಶ್ಮಿಕಾ ಮಂದಣ್ಣ ಇದ್ದಾರೆ. ನಟಿ ಗಾಳಿಪಟ ಹಾರಿಸುವ ನೂಲಿನ ಬಂಡಲ್ ಹಿಡಿದಿದ್ದಾರೆ. ಈ ಪೋಸ್ಟರ್‌ಗೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.ಗುಡ್ ಬೈ ಸಿನಿಮಾದ ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಸಾಕುಪ್ರಾಣಿಗಳ ಜೊತೆ ಇರುವ ಫೋಟೊಗಳು ಕುಡ ವೈರಲ್ ಆಗಿದ್ದವು.
ಗುಡ್ ಬೈ ಸಿನಿಮಾದ ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಸಾಕುಪ್ರಾಣಿಗಳ ಜೊತೆ ಇರುವ ಫೋಟೊಗಳು ಕುಡ ವೈರಲ್ ಆಗಿದ್ದವು.
ಬೆಂಗಳೂರು: ನಾಳೆ ಖುಷಿಯ ವಿಚಾರವೊಂದನ್ನು ತಿಳಿಸುವೆ ಎಂದು ಅಭಿಮಾನಿಗಳ ಹುಚ್ಚಿಗೆ ಕಿಚ್ಚು ಹಚ್ಚಿದ್ದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇದೀಗ ನಿಜವಾಗಿಯೂ ಸಿಹಿಸುದ್ದಿಯನ್ನು ನೀಡಿದ್ದಾರೆ. ಈ ಬಗ್ಗೆ ರಮ್ಯಾ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಂಬರುವ ಯೋಜನೆಗಳನ್ನು ಹಂಚಿಕೊಂಡಿದ್ದು, ಪ್ರೀತಿಯ ಅಭಿಮಾನಿಗಳಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ‘ಸಿಹಿ ಸುದ್ದಿ’ಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಣ ಸಂಸ್ಥೆ ‘ಆಪಲ್ ಬಾಕ್ಸ್ ಸ್ಟೂಡಿಯೋಸ್’ ಮೂಲಕ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ ಎಂದು ರಮ್ಯಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಏನಿದು ಆಪಲ್ ಬಾಕ್ಸ್? ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕ್ತವಾದ ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದೆ. ಸೆಟ್‌ನಲ್ಲಿ ಕೂರಲು ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮೆರಾದ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದಾಗ ಈ ಆಪಲ್ ಬಾಕ್ಸ್ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ಸದಾ ನನಗೆ ಸ್ಪೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.
‘ಪ್ರಸ್ತುತ, ಆಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳಲು ನನಗೆ ಸಂತಸವಿದೆ. ಈ ಎರಡೂ ಚಿತ್ರಗಳು ಕೆ.ಆರ್.ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿವೆ. ಅದರ ಜೊತೆಯಲ್ಲೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಸಿನಿಮಾ ಹಾಗೂ ವೆಬ್‌ಸೀರೀಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟೂಡಿಯೋಸ್ ಸಿದ್ಧವಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಹೊಸ ವಿವರಗಳನ್ನು ಆಪಲ್ ಬಾಕ್ಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿಸಿ’ ಎಂದಿದ್ದಾರೆ.
ನನ್ನೆಲ್ಲಾ ಪ್ರಯತ್ನಗಳಲ್ಲೂ ನಿರಂತರವಾಗಿ ಜೊತೆಗಿರುವ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು, ಸಿನಿಮಾ ವರ್ಗದವರು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ‘ನನ್ನ ಪ್ರೀತಿಯ ಅಭಿಮಾನಿಗಳಿಗೆ‘ ಹೃತ್ಪೂರ್ವಕ ವಂದನೆಗಳು.
ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೆಲೆ ಕಟ್ಟಲಾಗದ್ದು.ಇದರ ಜೊತೆಗೆ ವಿಜಯ ಕಿರಗಂದೂರ್, ಜಯಣ್ಣ, ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ಇವರಿಗೂ ವಿಶೇಷ ಧನ್ಯವಾದಗಳು. ಹೊಸ ಆರಂಭದತ್ತ ಹೆಜ್ಜೆ ಇಡುತ್ತಾ ಕೃತಜ್ಞತೆಗಳೊಂದಿಗೆ ರಮ್ಯಾ’ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಸೋನು ಸೂದ್ ಅವರ ಸಿನಿ ಜರ್ನಿ ಸಹ ಹೂವಿನ ಹಾಸಿಗೆಯಾಗಿರಲಿಲ್ಲ. ಸಾಕಷ್ಟು ಕಷ್ಟ ಹಾಗೂ ತಿರಸ್ಕಾರವನ್ನು ಅನುಭವಿಸಿದ್ದಾರೆ. ಸೋಲಿನ ಮೆಟ್ಟಿಲನ್ನೇ ಯಶಸ್ಸಿಗೆ ಬಳಸಿಕೊಂಡು ಬೆಳೆದಿರುವ ನಟ ತಮ್ಮ ಜೀವನದಲ್ಲಾದ ಘಟನೆಯೊಂದರ ಬಗ್ಗೆ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.
ಸೋನು ಸೂದ್ ಅವರನ್ನು ಜನರು ಇಂದು ದೇವರು ಹಾಗೂ ರಿಯಲ್ ಲೈಫ್ ಹೀರೋ ಎಂದೆ ಕರೆಯುತ್ತಿದ್ದಾರೆ. ಎಷ್ಟೋ ಮಂದಿ ಅವರಿಂದ ಸಹಾಯ ಪಡೆದವರು ಅವರನ್ನು ಪೂಜಿಸುತ್ತಿದ್ದಾರೆ.ಜನರ ಮನಸ್ಸಿನಲ್ಲಿ ಪೂಜ್ಯ ಸ್ಥಾನ ಪಡೆದುಕೊಂಡಿರುವ ಸೋನು ಸೂದ್ ಅವರ ಸಿನಿ ಜರ್ನಿ ಸುಲಭವಾಗಿರಲಿಲ್ಲ.
ಆರಂಭದ ದಿನಗಳಲ್ಲಿ ಸೋನು ಸೂದ್ ಸಹ ತುಂಬಾ ಕಷ್ಟಪಟ್ಟಿದ್ದಾರೆ.
ಸಾಕಷ್ಟು ಸಲ ತಾವು ಕಷ್ಟಪಟ್ಟ ದಿನಗಳನ್ನು ನೆನೆಪಿಕೊಂಡಿದ್ದಾರೆ.
ಇಂತಹ ನಟ ಈಗ ಹಿಂದಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.
ಸೋನು ಸೂದ್ ಈಗ ತಮ್ಮ ವೃತ್ತಿ ಜೀವನಲ್ಲಿ ಘಟಿಸಿದ ಕೆಲವು ಘಟನೆಯೊಂದರ ಬಗ್ಗೆ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.
ಸಿನಿಮಾ ಅವಕಾಶಕ್ಕಾಗಿ ಅಲೆದಾಡಿದ್ದ ಸೋನು ಸೂದ್ ನಿಯತಕಾಲಿಕೆಯೊಂದರಲ್ಲಿ ಫೋಟೋ ಹಾಕಿಸಿಕೊಳ್ಳಲು ಆಡಿಷನ್ ಕೊಟ್ಟಿದ್ದರಂತೆ.
ಆದರೆ ಆಗ ಆ ನಿಯತಕಾಲಿಕೆ ಸೋನು ಸೂದ್ ಅವರನ್ನು ರಿಜೆಕ್ಟ್ ಮಾಡಿತ್ತಂತೆ.ಈಗ ಅದೇ ನಿಯತಕಾಲಿಕೆಯ ಮುಖಪುಟದಲ್ಲಿ ಸೋನು ಸೂದ್ ಅವರ ಫೋಟೋ ಪ್ರಕಟವಾಗಿದೆ. ಅಷ್ಟಕ್ಕೂ ಯಾವುದು ಆ ನಿಯತಕಾಲಿಕೆ ಅಂತೀರಾ..?
ಸ್ಟಾರ್ಡಸ್ಟ್ನ ಏಪ್ರಿಲ್ ಸಂಚಿಕೆಯ ಮುಖಪುಟದಲ್ಲಿ ಸೋನು ಸೂದ್ ಅವರ ಫೋಟೋವನ್ನು ಪ್ರಕಟಿಸಲಾಗಿದೆ. ನಿಯತಕಾಲಿಕೆಯ ಮುಖಪುಟ ಹಂಚಿಕೊಂಡಿರುವ ಸೋನು ಸೂದ್ ಆ ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಅವರು ಇಂದು ಮಧ್ಯಾಹ್ನ ತಮ್ಮ ಮನೆಗೆ ಪುಟ್ಟ ಪೋರನ ಬರಮಾಡಿಕೊಂಡಿದ್ದಾರೆ.
ಈ ಸಂಭ್ರಮದ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲಾಕ್ಡೌನ್ ಹಿನ್ನಲೆ ಇತ್ತೀಚೆಗೆ ವರ್ಚಯಲ್ ಮೂಲಕವೇ ಅವರು ತಮ್ಮ ಬೇಬಿ ಶವರ್ ನಡೆಸಿಕೊಂಡಿದ್ದರು. ಅವರು ಉದ್ಯಮಿ ಶೀಲಾದಿತ್ಯ ಮುಖೋಪಾಧ್ಯಯ ಜೊತೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಸ್ಯಾಂಡಲ್ವುಡ್ನಲ್ಲಿ ಜೆಕೆ ಎಂದೇ ಖ್ಯಾತರಾಗಿರುವ ನಟ ಕಾರ್ತಿಕ್ ಜಯರಾಮ್ ಕಾಲಿವುಡ್ನಲ್ಲಿ ಖಾತೆ ತೆರೆದ ನಂತರ ಮತ್ತೆ ಬಾಲಿವುಡ್ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ರಾವಣನಾಗಿ ಹಾಗೂ ಓ ಪುಷ್ಪ ಐ ಹೇಟ್ ಟಿಯರ್ಸ್ ಸಿನಿಮಾದ ಮೂಲಕ ನಾಯಕನಾಗಿ ಹಿಂದಿ ಪ್ರೇಕ್ಷಕರಿಗೆ ಪರಿಚಯವಾಗಿರುವ ಜೆಕೆ ಈಗ ಮತ್ತೊಂದು ಸಿನಿಮಾದ ಮೂಲಕ ರಂಜಿಸಲು ಸಿದ್ಧರಾಗಿದ್ದಾರೆ.
ಜೆಕೆ ಈಗಾಗಲೇ ಕಿರುತೆರೆ ಹಾಗೂ ಬೆಳ್ಳಿತೆರೆ ಮೂಲಕ ಹಿಂದಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.
ಕಿರುತೆರೆಯಲ್ಲಿ ರಾವಣನಾಗಿ ಬೆಳ್ಳಿತೆರೆಯಲ್ಲಿ ಓ ಪುಷ್ಪ ಐ ಹೇಟ್ ಟಿಯರ್ಸ್ ಸಿನಿಮಾದ ಮೂಲಕ ನಾಯಕನಾಗಿ ರಂಜಿಸಿದ್ದಾರೆ.
ಕನ್ನಡದ ಪ್ರತಿಭಾನ್ವಿತ ನಟ ಜೆಕೆ ಈಗ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ.
ಹೌದು ಬಾಲಿವುಡ್ ಸಿನಿಮಾದಲ್ಲಿ ಕ್ರಿಕೆಟಿಗನಾಗಿ ರಂಜಿಸಲಿದ್ದಾರೆ ಜೆಕೆ.
ತಾಪ್ಸಿ ಪನ್ನು ಅಭಿನಯದ ಶಹಬಾಸ್ ಮಿಥು ಸಿನಿಮಾದಲ್ಲಿ ಜೆಕೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಭಾರತೀಯ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರ ಜೀವನಾಧಾರಿತ ಸಿನಿಮಾದಲ್ಲಿ ಜೆಕೆ ಕ್ರಿಕೆಟಿಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅರಸಿ ಬಂದ ಪಾತ್ರಕ್ಕಾಗಿ ಕೇವಲ ಹತ್ತು ನಿಮಿಷದಲ್ಲಿ ರಿಹರ್ಸಲ್ ಮಾಡಿ ಆಡಿಷನ್ ಕೊಟ್ಟಿದ್ದರಂತೆ ಜೆಕೆ.
ಈ ಸಿನಿಮಾದಲ್ಲಿ ಜೆಕೆ ಹೊಸ ಲುಕ್ನಲ್ಲಿ ಅಂದರೆ ಗಡ್ಡ ಇಲ್ಲದೆ ಕಾಣಿಸಿಕೊಳ್ಳಲಿದ್ದಾರಂತೆ.
ಲಾಕ್ಡೌನ್ನಿಂದಾಗಿ ಇನ್ನು ಜೆಕೆ ಅವರ ಪಾತ್ರದ ಚಿತ್ರೀಕರಣ ಆರಂಭವಾಗಿಲ್ಲ.
ಆದರೆ ಈಗಾಗಲೇ ಶಹಬಾಸ್ ಮಿಥು ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿದಿದೆ.
ಕನ್ನಡ, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೆಕೆ ಸದಾ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.