ಗುಡ್ ಬೈ‘:  ರಶ್ಮಿಕಾ ಮಂದಣ್ಣಗೆ ಅಮಿತಾಭ್‌ ಸಾಥ್ !

ಗುಡ್ ಬೈ‘: ರಶ್ಮಿಕಾ ಮಂದಣ್ಣಗೆ ಅಮಿತಾಭ್‌ ಸಾಥ್ !

Good bye ಚಿತ್ರದ ಪೋಸ್ಟರ್

ಬಾಲಿವುಡ್‌ಗೆ ಪ್ರವೇಶ ಮಾಡಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ‘ಗುಡ್ ಬೈ‘ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದು ಅಕ್ಟೋಬರ್ 7ರಂದು ತೆರೆಕಾಣಲಿದೆ.

ಹಿಂದಿಯ ಖ್ಯಾತ ನಟ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ಪೋಸ್ಟರ್‌ನಲ್ಲಿ ಅಮಿತಾಭ್‌ ನೀಲಿ ಬಣ್ಣದ ಜಾಕೆಟ್‌ ಧರಿಸಿದ್ದಾರೆ. ಲೇಯರ್ ಮಾಡಿದ ಬೀಜ್ ಕುರ್ತಾ ಧರಿಸಿರುವುದನ್ನು ಕಾಣಬಹುದು. ಅವರ ಹಿಂದೆ ಹಸಿರು ಬಣ್ಣದ ಕುರ್ತಾ ಮತ್ತು ದುಪಟ್ಟಾ ಧರಿಸಿರುವ ರಶ್ಮಿಕಾ ಮಂದಣ್ಣ ಇದ್ದಾರೆ. ನಟಿ ಗಾಳಿಪಟ ಹಾರಿಸುವ ನೂಲಿನ ಬಂಡಲ್ ಹಿಡಿದಿದ್ದಾರೆ. ಈ ಪೋಸ್ಟರ್‌ಗೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.ಗುಡ್ ಬೈ ಸಿನಿಮಾದ ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಸಾಕುಪ್ರಾಣಿಗಳ ಜೊತೆ ಇರುವ ಫೋಟೊಗಳು ಕುಡ ವೈರಲ್‌ ಆಗಿದ್ದವು.

ಗುಡ್ ಬೈ ಸಿನಿಮಾದ ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಸಾಕುಪ್ರಾಣಿಗಳ ಜೊತೆ ಇರುವ ಫೋಟೊಗಳು ಕುಡ ವೈರಲ್‌ ಆಗಿದ್ದವು.

Share
WhatsApp
Follow by Email