ಮೂಡಲಗಿಯಲ್ಲಿ ಕರ್ನಾಟಕ ಗರುಡ ಸಂಸ್ಥೆ ಉದ್ಘಾಟನೆ

ಮೂಡಲಗಿ : ಕರ್ನಾಟಕ ಗರುಡ ಸಂಸ್ಥ (ರಿ) ಬೆಂಗಳೂರು ಇವರ ಆಶ್ರಯದಲ್ಲಿ ತಾಲೂಕಿನಲ್ಲಿ ಕರ್ನಾಟಕ ಗರುಡ ಸಂಸ್ಥೆ ಉದ್ಘಾಟನಾ ಸಮಾರಂಭ ಮುಖ್ಯ ಅತಿಥಿ ಪಿಎಸ್ಐ ಸಿಂಧೂರ್ ರೆಬೆನ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು.

ರಾಜ್ಯದ್ಯಕ್ಷರು ರಾಜಶೇಖರ್ ಎಮ್ ರಾಜ್ಯ ಗೌರವ ಅಧ್ಯಕ್ಷರು ಗಜೇಂದ್ರ ಅಂಕಲಗಿ ರಾಜ್ಯ ಸಂಚಾಲಕರು ಲಕ್ಷ್ಮಣ್ ವಾಯ್ ಮೆಳ್ಳಿಗೇರಿ ರಾಜ್ಯ ಕಾರ್ಯದರ್ಶಿ ಸುಧಾ ಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಗೀತ ಭೀಮಪ್ಪ ಹೂಗಾರ್ ಹಾಗೂ ಪುರಸಭೆ ಸದಸ್ಯರು ಶಿವಾನಂದ್ ಸಣ್ಣಕ್ಕಿ ಯಲ್ಲಪ್ಪ ಸಣ್ಣಕ್ಕಿ ಶಂಕರ್ ತುಕ್ಕನವರ್ ಪುರಸಭೆ ಸದಸ್ಯರು ಅನ್ವರ್ ನದಾಫ್ ಸಿದ್ದು ಗಡೇಕರ್ ವಿನೋದ್ ಹೊಸಮನಿ ಹಾಗೂ ಗಣ್ಯರು ಉಪಸ್ಥಿತರಿದ್ದರು

ಅಶೋಕ ಪಾಗಾದ ನಿವೃತ್ತಿ, ಪುರಸಭೆ ಸಿಬ್ಬಂದಿಗಳಿಂದ, ಸ್ನೇಹಿತರ ಬಳಗದಿಂದ ಸತ್ಕರಿಸಿ ಬಿಳ್ಕೋಡುಗೆ

ಬೈಲಹೊಂಗಲ : ಮಾತೃ ಹೃದಯದಿಂದ ಎಲ್ಲರ ಜತೆಗೂಡಿ ಅಶೋಕ ಪಾಗಾದ ಅವರು ಕೆಲಸ ನಿರ್ವಹಿಸುತ್ತಿದ್ದರು. ಸಾಕಷ್ಟು ಕಷ್ಟ, ನಷ್ಟ, ತೊಂದರೆ ಬಂದರೂ ಯಾವುದನ್ನೂ ಲೆಕ್ಕಿಸಿದೆ ತಮ್ಮ ಕರ್ತವ್ಯ ನಿಷ್ಠೆ ಮರೆಯುತ್ತಿರಲಿಲ್ಲವೆಂದು ವರ್ಗಾವಣೆಗೊಂಡ ಮುಖ್ಯಾಧಿಕಾರಿ ಎಸ್.ಜಿ.ಅಂಬಿಗೇರ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಕರವಸೂಲಿ ಸಹಾಯಕರಾಗಿದ್ದ ಅಶೋಕ ಉಳಪ್ಪ ಪಾಗಾದ ಅವರ ನಿವೃತ್ತಿಯಾದ ನಿಮಿತ್ತ ಸ್ನೇಹಿತರ ಬಳಗ ಹಾಗೂ ಪುರಸಭೆ ಸಿಬ್ಬಂದಿಗಳಿAದ ಸತ್ಕರಿಸಿ ಬೀಳ್ಕೂಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಟ್ಟಣದ ಜನರಿಗೆ ಚಿರಪರಿಚಿತರಾಗಿದ್ದ ಇವರು ಎಲ್ಲರೊಡೆನೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಪಾಗಾದ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು. ನೂತನ ಮುಖ್ಯಾಧಿಕಾರಿ ಕೆ.ಆಯ್.ನಾಗನೂರ ಮಾತನಾಡಿ, ಅಶೋಕ ಪಾಗಾದ ಅವರು ಒಳ್ಳೆಯ ಕೆಲಸ ನಿರ್ವಹಿಸಿರುವುದು ಶ್ಲಾಘನೀಯ. ಪ್ರತಿಯೊಬ್ಬರು ಸರಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಪ್ರಾಮಾಣಿಕತೆ, ನಿಷ್ಠೆಯಿಂದ ಜನರ ಸೇವೆ ಮಾಡಬೇಕೆಂದರು. ಅಶೋಕ ಪಾಗಾದ ಸತ್ಕಾರ ಸ್ವೀಕರಿಸಿ ಮಾತನಾಡಿ, ಪುರಸಭೆಯಲ್ಲಿ ಕರ ವಸೂಲಿ ಸಹಾಯಕರಾಗಿ ಕೆಲಸ ನಿರ್ವಹಿಸಿರುವುದು ತೃಪ್ತಿ ತಂದಿದೆ. ನಾಡಿನ ಜನಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ, ನಾಗರಿಕರು ಉತ್ತಮ ಸಹಕಾರ ನೀಡಿದ್ದಾರೆ. ಸಾಕಷ್ಟು ತೊಂದರೆಗಳು ಬಂದರೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದೇನೆ. ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಅವರ ಜೊತೆ ಕೆಲಸ ನಿರ್ವಹಿಸಿರುವುದು ಖುಷಿ ತಂದಿದೆ. ಒಳ್ಳೆಯ ಮನಸ್ಸು, ಪ್ರಾಮಾಣಿಕ ಸೇವೆ ನೀಡುತ್ತಿದ್ದ ಅವರು ಎಲ್ಲರನೂ ಪ್ರೀತಿ, ವಿಶ್ವಾಸದಿಂದ ಸಹಾಯ-ಸಹಕಾರ ಮಾಡುತ್ತಿದ್ದರು ಎಂದರು. ಇದೇ ವೇಳೆ ಸ್ನೇಹಿತರ ಬಳಗ ಹಾಗೂ ಪುರಸಭೆ ಸಿಬ್ಬಂದಿಗಳು ಅಶೋಕ ಪಾಗಾದ ದಂಪತಿಗಳನ್ನು ಸತ್ಕರಿಸಿದರು. ಮಾಜಿ ಮುಖ್ಯಾಧಿಕಾರಿ ಆಯ್.ಬಿ.ಬಗನಾಳ, ರಮೇಶ ಹಿಟ್ಟಣಗಿ, ಸತೀಶ ಕಜ್ಜಿಡೋಣಿ, ಇಂಜಿನೀಯರಗಳಾದ ಎಸ್.ಬಿ.ಪಾಟೀಲ, ಪತ್ತಾರ, ಸತೀಶ ಕಜ್ಜಿಡೋನಿ, ಉಮಾ ಬೆಟಗೇರಿ, ಎಸ್.ಎಸ್.ನರಗುಂದ, ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ, ಪಿ.ಜಿ.ಅರಕಸಾಲಿ, ಡಿ.ಎಂ.ಕಲೀಫ, ಬಿ.ಆಯ್.ಗುಡಿಮನಿ, ಕುಟ್ರೆ ಹಾಗೂ ಸಿಬ್ಬಂದಿಗಳು, ಸ್ನೇಹಿತರ ಬಳಗದವರು ಉಪಸ್ಥಿತರಿದ್ದರು.

ಹೊಟೇಲ್ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ತಾಲೂಕಾ ದಂಡಾಧಿಕಾರಿ ಪ್ರವೀಣ ಜೈನ್ ಅವರಿಗೆ ಮನವಿ ಸಲ್ಲಿಸುತ್ತಿರುವುದು.

ಚನ್ನಮ್ಮನ ಕಿತ್ತೂರು : ಕೊರೊನಾ ಹಾವಳಿಗೆ ತುತ್ತಾಗಿ ದಿನದ ದುಡಿಕೆ ಇಲ್ಲದೆ ಪರಿತಪಿಸುತ್ತಿರುವ ಹೊಟೇಲ್ ಕಾರ್ಮಿಕರಿಗೆ ಕೂಡಲೇ ರಾಜ್ಯ ಸರ್ಕಾರ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿ ಕಿತ್ತೂರು ರಾಣಿ ಚನ್ನಮ್ಮ ಹೊಟೇಲ್ ಮಾಲಿಕರ ಸಂಘದಿAದ ಗುರುವಾರ ಇಲ್ಲಿಯ ಚನ್ನಮ್ಮನ ಕಿತ್ತೂರು ತಾಲೂಕಾ ದಂಡಾಧಿಕಾರಿ ಪ್ರವೀಣ ಜೈನ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಎರಡೂ ಮೂರು ತಿಂಗಳಿನಿAದ ಕೊರೊನಾ ಆರ್ಭಟಕ್ಕೆ ಇಡೀ ದೇಶವೆ ತಲ್ಲಣಗೊಂಡಿದೆ ಆದರೇ ರಾಜ್ಯ ಸರ್ಕಾರ ಸಾಮಾನ್ಯ ಜನರ ಹಾಗೂ ಕೂಲಿಕಾರ್ಮಿಕರ ಜೀವನ ಗಮನದಲ್ಲಿಟ್ಟುಕೊಂಡು ಪರಿಹಾರ ಧನ ನೀಡಿದೆ. ಆದರೇ ಈ ಪರಿಹಾರ ಧನದಲ್ಲಿ ಹೊಟೇಲ್ ಕಾರ್ಮಿಕರನ್ನು ಹಾಗೂ ಮಾಲೀಕರನ್ನು ಕಡೆಗಣಿಸಿದ್ದು ಸರಿಯಲ್ಲ, ಲಾಕಡೌನ ಆದಾಗಿನಿಂದಲೂ ಇಲ್ಲಿಯವರೆಗೂ ಮನೆಯ ಕರೆಂಟ್ ಬಿಲ್ಲ, ತುಂಬಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ ಇತ್ತ ಮಾಲೀಕರ ಬಳಿಯೂ ವ್ಯಾಪಾರ ವಹಿವಾಟುಗಳಿಲ್ಲದೆ ಕಾರ್ಮಿಕರ ಸಂಕಷ್ಠಕ್ಕೆ ಸಹಾಯ ಹಸ್ತ ಚಾಚಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ ಅವರು, ಕೂಡಲೇ ರಾಜ್ಯ ಸರ್ಕಾರ ಎಲ್ಲರಂತೆ ಹೊಟೇಲ ಕಾರ್ಮೀಕರನ್ನು ಗಣನೆಗೆ ತೆಗೆದುಕೊಂಡು ಜೀವನ ಸಾಗಿಸುವ ನಿಟ್ಟಿನಲ್ಲಿ ಪರಿಹಾರ ಧನ ನೀಡಬೇಕೆಂದು ಮನವಿಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೊಟೇಲ ಮಾಲೀಕರ ಸಂಘದ ಅಧ್ಯಕ್ಷ ವಿಜಯಕುಮಾರ ಶಿಂಧೆ, ಚಂದ್ರಶೇಖರ, ರಾಘವೇಂದ್ರ ನಾಯ್ಕ, ಪ್ರಭಾಕರ ಉಂಡಿ, ರಾಜು ಶೆಟ್ಟಿ, ನಿಸ್ಸಾರಹ್ಮದ ಬೇಟಗೇರಿ, ಪ್ರವೀಣ ಬೆಳಗಾಂವಕರ, ಇಬ್ರಾಹಿಂ ಸೌದಾಗರ, ಶಿವಾನಂದ ಬಸರಕೋಡ, ಗೋಪಾಲ ಸಾಮೂಗ, ವಾಸು ನಾಯ್ಕ ಸೇರಿದಂತೆ ಪಟ್ಟಣದ ಎಲ್ಲ ಹೊಟೇಲ ಮಾಲೀಕರು ಹಾಜರಿದ್ದರು.

ಮೂಡಲಗಿ: ಕಾಶೀಮಲಿ ಸೋಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ

ಮೂಡಲಗಿ: ಕೊರೋನಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಜೀವ ಪಣಕ್ಕಿಟ್ಟು ವಾರಿಯರ್ಸಗಳಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಸ್ಥಳೀಯ ಕಾಶೀಮಲಿ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ವತಿಯಿಂದ ಮೂರು ಸಾವಿರ ಗೌರವ ಧನ ನೀಡಿ ಗೌರವಿಸಲಾಯಿತು.
ಬ್ಯಾಂಕ್ ಸಭಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಾದ ಗಂಗವ್ವ ಢವಳೇಶ್ವರ,ಗೌರವ್ವ ಗಣಿ,ಸುಶಿಲಾ ನಂದಗಾAವಮಠ,ಲಕ್ಷಿö್ಮÃ ಢವಳೇಶ್ವರ ಅವರನ್ನು ಸೊಸಾಯಿಟಿ ವತಿಯಿಂದ ಗೌರವ ಧನÀ ಚೆಕ್ಕು ನೀಡಿ ಗೌರವಿಸಿದರು.
ಸೊಸಾಯಿಟಿ ಅಧ್ಯಕ್ಷ ಅನ್ವರ ನದಾಫ ಉಪಾಧ್ಯಕ್ಷ ಅಪ್ಪಾಸಾಬ ನದಾಫ ನಿರ್ದೇಶಕರಾದ ಮೀರಾಸಾಬ ನದಾಫ,ಮಲೀಕಜಾನ ನದಾಫ,ನೂರಸಾಬ ನದಾಫ,ಇಸಾಕ ಅಹ್ಮದ ನದಾಫ,ದಸ್ತಗೀರಸಾಬ ನದಾಫ ಪ್ರಧಾನ ವ್ಯವಸ್ಥಾಪಕ ಆಯ್.ಎಮ್.ನದಾಫ ಮತ್ತು ಸಿಬ್ಬಂದಿ ವರ್ಗ ಇದ್ದರು

ಪಿಕೆಪಿಸ್ ನಿವೃತ್ತಿ ಮುಖ್ಯ ನಿರ್ವಾಹಕರ ಚನ್ನಪ್ಪ ಗೆ ಸನ್ಮಾನ

ನಾಗನೂರ ಪಿ.ಕೆ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ನಾಗನೂರ ಪಿ.ಕೆ ಇದರ ಮುಖ್ಯಕಾರ್ಯ ನಿರ್ವಾಹಕರಾದ ಶ್ರೀ ಚನ್ನಪ್ಪ ಅಣ್ಣಪ್ಪ ಹಂಚಿನಾಳ ಇವರು ಸೇವಾ ನಿವೃತ್ತಿ ಹೊಂದಿದರು ಇವರನ್ನು ಸಂಘದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಇವರು ಸುಮಾರು 42 ವರ್ಷಗಳ ವರೆಗೆ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ ಅವರಿಗೆ ಅಬಿನಂದನೆ ಸಲ್ಲಿಸಿಲಾಯಿತು.
ಈ ಸಂಧರ್ಬದಲ್ಲಿ ಮಾತನಾಡಿದ ಚನ್ನಪ್ಪ ಹಂಚಿನಾಳ ಅವರು ಗ್ರಾಮದ ಜನÀರು ಹಾಗೂ ಆಡಳಿತ ಮಂಡಳಿಯು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದರಿಂದ 42 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಾದ್ಯವಾಯಿತು ಎಂದು ತಿಳಿಸಿದರು.
ಈ ಸಮಯದಲ್ಲಿ ಸಂಘದ ಅದ್ಯಕ್ಷರಾದ ಶ್ರೀ ಪರಪ್ಪ ಸವದಿ ಹಾಗೂ ಉಪಾದ್ಯಕ್ಷರಾದ ಶ್ರೀ ಎಚ್ ಎಮ್ ಹುದ್ದಾರ, ಆಡಳಿತ ಮಂಡಳಿಯ ಸದಸ್ಯರಾದ ಬಿ ಕೆ ತೇಲಿ, ಆರ್ ಎಮ್ ಐಗಳಿ, ಜಿ ಎಸ್ ಬಿಳ್ಳೂರ, ಎಮ್ ಬಿ ಚೌಗಲಾ, ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

WhatsApp
Follow by Email