ದಾವಣಗೆರೆ: ಹಿಂದೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಕಾಮುಕ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜಾದ್

ದಾವಣಗೆರೆ ; ಕಾಮುಕನೊಬ್ಬರ ಅಟ್ಟಹಾಸಕ್ಕೆ ಮಹಿಳೆಯರ ಮಾನ ಮರ್ಯಾದೆ ಹರಾಜು


ಕೀಚಕನ ಕಿರಾತಕ ಕೃತ್ಯಕ್ಕೆ ನೋವು ಅನುಭವಿಸುತ್ತಿರುವ ಹಲವಾರು ಮಹಿಳೆಯರು
ಚನ್ನಗಿರಿ ಪಟ್ಟಣದಲ್ಲಿರುವ ಮೆಡಿಕಲ್ ಸ್ಟೋರ್ ಮಾಲೀಕನಿಂದ ಪೈಶಾಚಕ ಕೃತ್ಯ
ಚನ್ನಗಿರಿ ಅಮರ್ ಮೆಡಿಕಲ್ ಸ್ಟೋರ್ ನ ಮಾಲೀಕ ಅಮ್ಜಾದ್ ನಿಂದ ಕೃತ್ಯ
ಹಲವು ಮಹಿಳೆಯರು ,ಮಕ್ಕಳನ್ನು ಕಾಮತೃಷೆಗೆ ಬಳಸಿಕೊಂಡ ಕಿರಾತಕ
ಮೆಡಿಕಲ್ ಸ್ಟೋರ್ ಗೆ ಬರುವ, ಕ್ಲಿನಿಕ್ ಗೆ ಬರುವ ಮಹಿಳೆಯರ‌ನ್ನು ಟಾರ್ಗೆಟ್ ಮಾಡುತ್ತಿದ್ದ ಕಿರಾತಕ
ಶಾಲಾ ಬಾಲಕಿಯನ್ನು ಪುಸಲಾಯಿಸಿ ಹೀನ ಕೃತ್ಯಕ್ಕೆ ಬಳಸಿಕೊಂಡು ದೌರ್ಜನ್ಯ


ಕೈಮುಗಿದು ಅತ್ತು ಕರೆದ್ರು ಬಿಡಲಿಲ್ಲ ಕಾಮಪಿಪಾಸು
ವಿಡಿಯೋ ವೈರಲ್ ಆಗುತ್ತಿದ್ದಂತೆ ಚನ್ನಗಿರಿ ಪಟ್ಟಣದಿಂದಲೇ ನಾಪತ್ತೆಯಾದ ಕಿರಾತಕ
ಮೆಡಿಕಲ್ ಸ್ಟೋರ್ ಮಾಲೀಕನ ಹೀನ ಕೃತ್ಯಕ್ಕೆ ಅದೆಷ್ಟೋ ಮಹಿಳೆಯರ ಮಾನ ಹರಾಜು
ಆ ಕೀಚಕನ ಮೊಬೈಲ್ ನಲ್ಲಿ 60 ಕ್ಕು ಹೆಚ್ಚು ಅಶ್ಲೀಲ ವಿಡಿಯೋ ಗಳ ಸಂಗ್ರಹ
ಅಶ್ಲೀಲ ವಿಡಿಯೋಗಳನ್ನು ಲ್ಯಾಪ್ ಟಾಪ್ ಗೆ ಹಾಕಿಕೊಂಡು ನೋಡುತ್ತಾ ವಿಕೃತ ಖುಷಿ ಪಡುತ್ತಿದ್ದ ನೀಚ
ಹಿಂದೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಎಂದು ಹಿಂದೂ ಸಂಘಟನೆಗಳಿಂದ ದೂರು
ಮಹಿಳೆಯರಿಗೆ ಗೊತ್ತಿಲ್ಲದೆ ವಿಡಿಯೋ ಮಾಡಿಕೊಂಡು ಅವರ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದವನ್ನು ಬಂಧಿಸಲು ಆಗ್ರಹ
ಚನ್ನಗಿರಿ ಪಟ್ಟಣದಲ್ಲಿ ಹಿಂದೂಪರ ಸಂಘಟ‌ನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ
ಆರೋಪಿಯನ್ನು ಬಂಧಿಸಲು ಬಲೆ ಬೀಸಿರುವ ಚನ್ನಗಿರಿ ಪೊಲೀಸರು

ಕಾಮುಕ ಅಮ್ಜಾದ್ ಮೇಲೆ ಪೋಕ್ಸೋ ಪ್ರಕರಣ ದಾಖಲು ,ಎ ಎಸ್ ಐ ಶಶಿಧರ್ ಚನ್ನಗಿರಿ ಪೊಲೀಸ್ ಠಾಣೆಗೆ ನೀಡಿದ ದೂರಿನ‌ ಮೇಲೆ ಪ್ರಕರಣ ದಾಖಲು

ಶಾಲಾ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ

ಆರೋಪಿ ಮೊಬೈಲ್ ಅಥವಾ ಕ್ಯಾಮೆರಾ ವಿಡಿಯೋ ದಲ್ಲಿ ಸೆರೆ ಹಿಡಿದಿರುವ ಸಾಧ್ಯತೆ

ಕಲಂ ನಂಬರ್ 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77, 294,

64 BNS ACT -2023 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ರೀತ್ಯಾ ಪ್ರಕರಣ ದಾಖಲು

ಸಿ ಇ ಎನ್ ಪೊಲೀಸರಿಂದ ನಿನ್ನೆ ಅಮ್ಜಾದ್ ಬಂಧನ ಆರೋಪಿಯನ್ನು‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು

ನೊಂದವರ ಬಗ್ಗೆ ವಿಡಿಯೋ ಹರಡುವುದು ಅಪರಾಧವಾಗಿದ್ದು ವಿಡಿಯೋ ವೈರಲ್ ಆಗದಂತೆ ಪೊಲೀಸ್ ಸೂಚನೆ

ರೆಡ್ಡಿ-ರಾಮುಲು ಮನೆಗಳ ಸಂಪರ್ಕ ಬಂದ್….!

ಬಳ್ಳಾರಿ: ಜನಾರ್ದನ ರೆಡ್ಡಿ- ಶ್ರೀರಾಮುಲು ನಡುವೆ ದೋಸ್ತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಅವಂಬಾವಿಯಲ್ಲಿ ಅಕ್ಕಪಕ್ಕದಲ್ಲೇ ಕೇವಲ 50 ಮೀಟರ್ ಅಂತರದಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಮನೆಗಳಿದ್ದು.

ರಸ್ತೆ ಇರುವ ಕಾರಣಕ್ಕೆ ಎರಡು ಮನೆಗಳ ಕಂಪೌಂಡ್‌ಗೆ ಒಂದು ಗೇಟ್ ಮಾಡಿಸಲಾಗಿತ್ತು. ಇಬ್ಬರ ನಡುವೆ ವೈಮನಸ್ಸು ಆಗ್ತಿದಂತೆ ಇಟ್ಟಿಗೆ ಸಿಮೆಂಟ್ ಹಾಕಿ ಗೇಟನ್ನು ರಾಮುಲು ಬಂದ್ ಮಾಡಿಸಿದ್ದಾರೆ.

ಡಿಸಿಎಂ ಡಿಕೆಶಿ ಬಗ್ಗೆ ವ್ಯಂಗ್ಯವಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ

ಬೆಂಗಳೂರು : ಕಾಂಗ್ರೆಸ್​ನಲ್ಲಿ ನಿಮ್ಮ (ಡಿಕೆ ಶಿವಕುಮಾರ್) ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂಬ ತಮ್ಮ ಮಾತನ್ನು ಕಾರ್ಯಗತ ಮಾಡುವ ಸಮಯ ಬಂದಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ. ಕಾರಣ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಏಳು ಜನ ಸಚಿವರು ಮತ್ತು 35 ಶಾಸಕರು ಗುರುವಾರ ರಾತ್ರಿ ಔತಣಕೂಟ ಏರ್ಪಡಿಸಿರುವುದನ್ನು ಉಲ್ಲೇಖಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಅತ್ತ ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣ, ಇತ್ತ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ 35 ಶಾಸಕರ ಡಿನ್ನರ್ ಮೀಟಿಂಗ್ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ. ಅದನ್ನು ಕಂಡು ಸ್ವಾಮಿ ಡಿಕೆ ಶಿವಕುಮಾರ್ ಅವರೇ, ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ತಾವು ಅಬ್ಬರಿಸದ್ದನ್ನು ಕಾರ್ಯಗತ ಮಾಡುವ ಸಮಯ ಬಂದಿದೆ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

ಡಿಕೆಶಿ ಅಬ್ಬರ ಮಾಧ್ಯಮಗಳ ಮುಂದೆ ಮಾತ್ರವೇ: ಅಶೋಕ್ ಪ್ರಶ್ನೆ ಮಾಡಿದ್ದಾರೆ.


‘ತಮ್ಮ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆಯುತ್ತದೆ. ಬಸ್ ಟಿಕೆಟ್ ದರ ಶೇ 15 ರಷ್ಟು ಹೆಚ್ಚಿಸುವಂತಹ ಪ್ರಮುಖ ನಿರ್ಧಾರ ಆಗುತ್ತದೆ. ಒಬ್ಬ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಅನುಪಸ್ಥಿತಿಯಲ್ಲಿ ಇಂತಹ ನಿರ್ಧಾರಗಳು ಆಗುತ್ತೆ ಅಂದರೆ ಏನರ್ಥ? ಎಂದು ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ ಅಥವಾ ತಮ್ಮ ಅಬ್ಬರ ಏನಿದ್ದರೂ ಮಾಧ್ಯಮಗಳ ಮುಂದೆ ಮಾತ್ರವೇ? ಹೀಗೆ ಮುಂದುವರೆದರೆ ತಮ್ಮ ಕನಸು ಕನಸಾಗಿಯೇ ಉಳಿಯುವುದು ಮಾತ್ರ ಗ್ಯಾರೆಂಟಿ’ ಎಂದು ಅಶೋಕ್ ಕುಹಕವಾಡಿದ್ದಾರೆ. ಹಾಗೆಯೇ ಸೂಕ್ಶ್ಮ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ರಾತ್ರಿ ನಡೆದ ಸಿದ್ದರಾಮಯ್ಯ ಬಣದ ಡಿನ್ನರ್ ಮೀಟಿಂಗ್ ರಾಜಕೀಯ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಎಲ್ಲದಕ್ಕೂ ಮಿಗಿಲಾಗಿ, ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಈ ಸಭೆ ಆಯೋಜಿಸಿದ್ದು ಸಾಕಷ್ಟು ಕುತೂಹಲಗಳನ್ನು ಸೃಷ್ಟಿಸಿದೆ. ಇದರಮಧ್ಯೆಯೇ , ಊಹಾಪೋಹಗಳನ್ನು ಅಲ್ಲಗಳೆದಿರುವ ಸತೀಶ್ ಜಾರಕಿಹೊಳಿ ಹಾಗೂ ತಂಡ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭೋಜನಕೂಟ ಮಾಡಲಾಗಿದೆ ಅಷ್ಟೆ ಎಂದು ಹೇಳಿಕೆ ನೀಡಿದೆ. ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದ ಈ ಔತಣಕೂಟ ರಾಜ್ಯ ರಾಜಕೀಯ ಎಲ್ಲರ ಗಮನ ಸೆಳೆದಿರುವುದಂತೂ ನಿಜ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದರೆ ಕಾರ್ಯಾಕಾರಿ ಸಮಿತಿ ಚುನಾವಣೆ ನಡೆಸುತ್ತೇನೆ : ಸಂಸದ ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ತಾವು ಆಯ್ಕೆಯಾದರೆ ಕಾರ್ಯಕಾರಿ ಸಮಿತಿ ಚುನಾವಣೆ ನಡೆಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಘೋಷಣೆ ಮಾಡಿದ್ದಾರೆ.

ಶಶಿ ತರೂರ್

ಸಂದರ್ಶನವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಅವರು, ತಾವು ಎಐಸಿಸಿ ಮುಖ್ಯಸ್ಥರಾದರೆ CWC (ಕಾರ್ಯಕಾರಿ ಸಮಿತಿ) ನಡೆಸುತ್ತೇನೆ. 25 ವರ್ಷಗಳಿಂದ ನಿಷ್ಕ್ರಿಯವಾಗಿರುವ ಸಂಸದೀಯ ಮಂಡಳಿಯ ಪುನಶ್ಚೇತನದ ಅಗತ್ಯವಿದ್ದು, ಅಸ್ತಿತ್ವದಲ್ಲಿರುವ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರವನ್ನು ವಿಕೇಂದ್ರಿಕರಣಗೊಳಿಸಬೇಕು ಮತ್ತು ಪಕ್ಷದ ತಳಮಟ್ಟದ ಪದಾಧಿಕಾರಿಗಳಿಗೆ ನಿಜವಾಗಿಯೂ ಅಧಿಕಾರ ನೀಡಬೇಕು. ಈ ವರ್ಷದ ಆರಂಭದಲ್ಲಿ ಪಕ್ಷದ ಚಿಂತನ ಶಿಬಿರದಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆದ ಉದಯಪುರ ಘೋಷಣೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದಾಗಿ ತಿರುವನಂತಪುರಂನ ಲೋಕಸಭಾ ಸಂಸದರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಹೇಳಿದ್ದಾರೆ

ಇದನ್ನೂ ಓದಿ : ಅಪ್ಪು ಗಂಧದ ಗುಡಿ ಗೆ ಶುಭಾಶಯ ತಿಳಿಸಿದ ಮೋದಿ!

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಸ್ಪರ್ಧೆಯಲ್ಲಿ ಉನ್ನತ ಸ್ಥಾನಕ್ಕೆ ಗೆದ್ದರೆ ಪಕ್ಷಕ್ಕಾಗಿ ಅವರ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕಾರ್ಯಕಾರಿ ಸಮಿತಿಗೆ ಚುನಾವಣೆಯನ್ನು ಕರೆಯುವುದು ತಮ್ಮ ಮೊದಲ ಮತ್ತು  ಒಂದು ಪ್ರಮುಖ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಇನ್ನೂ ಮುಂದೆ ಪ್ರಜಾಪ್ರಭುತ್ವ. ನಾನು ಅಸ್ತಿತ್ವದಲ್ಲಿರುವ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸಲಿದ್ದೇನೆ, ಇದು CWC ಚುನಾವಣೆಗಳು ಮತ್ತು ಕಾಲು ಶತಮಾನದಿಂದ ನಿಷ್ಕ್ರಿಯವಾಗಿರುವ ಸಂಸದೀಯ ಮಂಡಳಿಗೆ ಪುನರುಜ್ಜೀವನದ ಅಗತ್ಯವಿರುತ್ತದೆ ಮತ್ತು ಸರ್ವಾನುಮತದಿಂದ ಒಪ್ಪಿಗೆ ಪಡೆದ ಉದಯ್‌ಪುರ ಘೋಷಣೆ ಜಾರಿ ಮಾಡುತ್ತೇನೆ ಎಂದು ತರೂರ್ ಹೇಳಿದರು.

 ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚುನಾವಣೆಗಳನ್ನು ನಡೆಸುವುದು ಮತ್ತು ಸಂಸದೀಯ ಮಂಡಳಿಯ ಪುನಶ್ಚೇತನವು ತರೂರ್ ಸೇರಿದಂತೆ ಜಿ 23 ನಾಯಕರ ಗುಂಪಿನ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಅವರು 2020 ರಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ದೊಡ್ಡ ಪ್ರಮಾಣದ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ ಪತ್ರ ಬರೆದಿದ್ದರು. ಇದೀಗ ಶಶಿತರೂರ್ ಕೂಡ ಇದೇ ಅಂಶಗಳನ್ನು ಜಾರಿಗೆ ತರುವ ಕುರಿತು ಮಾತನಾಡುತ್ತಿದ್ದಾರೆ. 

ಉದಯ್ ಪುರ್ ಶಿಬಿರ ಘೋಷಣೆ:


ಕಾಂಗ್ರೆಸ್ ಉದಯಪುರ ಘೋಷಣೆಯನ್ನು ಅಂಗೀಕರಿಸಿದೆ, ಇದರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವ್ಯಾಪಕ ಪ್ರಾತಿನಿಧ್ಯ ಮತ್ತು ‘ಒಂದನ್ನು ಜಾರಿಗೊಳಿಸುವುದು ಸೇರಿದಂತೆ ಮುಂದಿನ ಸುತ್ತಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಪಕ್ಷವನ್ನು ಸಿದ್ಧಗೊಳಿಸಲು ವ್ಯಾಪಕವಾದ ಸಾಂಸ್ಥಿಕ ಸುಧಾರಣೆಗಳನ್ನು ಒಳಗೊಂಡಿದೆ. ಓರ್ವ ವ್ಯಕ್ತಿ, ಒಂದು ಪೋಸ್ಟ್’ ಮತ್ತು ‘ಒಂದು ಕುಟುಂಬ, ಒಂದು ಟಿಕೆಟ್’ ನಿಯಮಗಳೂ ಇದರಲ್ಲಿ ಸೇರಿವೆ

ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ತುಟ್ಟಿಭತ್ಯೆ ಹೆಚ್ಚಿಸಿದ ಸರ್ಕಾರ!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಂತಸ ಸುದ್ದಿ ನೀಡಿದ್ದು, ಕಳೆದ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ‘ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 3.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 1,282.72 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಎಸ್.ಸಿ, ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅನುಮೋದನೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಕೂಡ ತನ್ನ ನೌಕರರಿಗೆ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು.

5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ; ಮೌಲ್ಯಮಾಪನ ಮಾಡಿ, ಪರೀಕ್ಷೆಯಲ್ಲ!

ಬೆಂಗಳೂರು: 5 ಮತ್ತು 8 ನೇ ತರಗತಿಗಳಿಗೆ ಬೋರ್ಡ್ ಮಾದರಿಯ ಪರೀಕ್ಷೆಗಳನ್ನು ನಡೆಸಬೇಕೆಂದು ಚರ್ಚೆ ನಡೆದಿದ್ದು, ಅದನ್ನು ಪರಿಚಯಿಸುವ ಸರ್ಕಾರದ ಯೋಜನೆಯು ಅದರ ಅನುಷ್ಠಾನದ ಬಗ್ಗೆ ಶಾಲೆಗಳು ಮತ್ತು ಸಂಸ್ಥೆಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಮೌಲ್ಯಮಾಪನ ಮಾಡಿ, ಪರೀಕ್ಷೆಯಲ್ಲ ಎಂದ KAMS (Karnataka Associated Management of School) ಹೇಳಿದೆ.

Picture

ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 16 ಅನ್ನು ತಿದ್ದುಪಡಿ ಮಾಡಲು ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಅದರ ಅಡಿಯಲ್ಲಿ ಯಾವುದೇ ಮಗುವನ್ನು ಅವರ ಪ್ರಾಥಮಿಕ ಪರೀಕ್ಷೆಯಿಂದ ತಡೆಹಿಡಿಯಲಾಗುವುದಿಲ್ಲ ಅಥವಾ ಹೊರಹಾಕಲಾಗುವುದಿಲ್ಲ, ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣದ ಬಗ್ಗೆ ಬದ್ಧತೆಯಿಲ್ಲ ಎಂಬ ಕಾರಣಕ್ಕೆ ನೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನಕ್ಕೆ ನೋ ಡಿಟೆನ್ಶನ್ ನೀತಿ (ಅನುತೀರ್ಣ ನೀತಿ)ಯೂ ಒಂದು ಕಾರಣ ಎಂದು ನೀಡಲಾಗಿದೆ.

Read this : ಎಸ್.ಸಿ, ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅನುಮೋದನೆ.

ಶಾಲೆಗಳು ನಿರ್ಧಾರವನ್ನು ಸ್ವಾಗತಿಸಿವೆ. ಆದರೆ ಅದನ್ನು ವಿಭಿನ್ನವಾಗಿ ರೂಪಿಸುವಂತೆ ಕೇಳಿಕೊಂಡಿವೆ. ಶಿಕ್ಷಣ ಇಲಾಖೆಯು ಇದನ್ನು ಸಾರ್ವಜನಿಕ ಪರೀಕ್ಷೆ ಅಥವಾ ರಾಜ್ಯ ಮಟ್ಟದ ಪರೀಕ್ಷೆ ಎಂದು ಬಿಂಬಿಸಬಾರದು ಎಂದು ನಾವು ಸೂಚಿಸುತ್ತೇವೆ ಎಂದು ಕರ್ನಾಟಕ ಅಸೋಸಿಯೇಟೆಡ್ ಶಾಲೆಗಳ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.

ಅಂತೆಯೇ ಪದ ಪರೀಕ್ಷೆಯನ್ನು ತಪ್ಪಿಸಿ, ಶಾಲಾ ಹಂತದಲ್ಲೇ ನಡೆಸಬೇಕು ಎಂದು ಸಲಹೆ ನೀಡಿದರು. ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌ ಮಾತನಾಡಿ, ಆ ವಯಸ್ಸಿನ ಮಕ್ಕಳಿಗೆ ಪರೀಕ್ಷೆ ನಡೆಸುವುದರಿಂದ ಅವರಲ್ಲಿ ಅನಗತ್ಯ ಮಾನಸಿಕ ಒತ್ತಡ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್.ಸಿ, ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅನುಮೋದನೆ.

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇಕಡ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡ 5 ರಿಂದ 7ಕ್ಕೆ ಏರಿಸಲು  ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ನೇತೃತ್ವದ ಸಚಿವ  ಸಂಪುಟ ಸಮಿತಿ ಅನುಮತಿಸಿದೆ.

read this : ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಸಾಫ್ಟ್‌ವೇರ್‌ ಎಂಜಿನಿಯರ್ ಬಂಧನ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ವರದಿಯನ್ನು ಉಭಯ ಸದನಗಳ ಮುಂದೆ ಮಂಡಿಸಿ ಅಂಗೀಕಾರ ಪಡೆಯಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ಅಲ್ಲಿಂದ ಅನುಮತಿ ದೊರೆತ ನಂತರ ಮೀಸಲಾತಿ ಹೆಚ್ಚಳ ಜಾರಿಗೆ ಬರುತ್ತದೆ ಎಂದು ವಿವರಿಸಿದರು.

Read this : ಟಿಪ್ಪು ಎಕ್ಸ್‌ಪ್ರೆಸ್‌ ಇನ್ನು ಮುಂದೆ ‘ಒಡೆಯರ್‌’ ಎಕ್ಸ್‌ಪ್ರೆಸ್ !

ಈ ಸಂಬಂಧ ನಿನ್ನೆ ಸರ್ವಪಕ್ಷಗಳ ಸಭೆ ನಡೆದಿತ್ತು. ಅಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸರ್ವಾನುಮತದ ಅನುಮೋದನೆ ದೊರೆತಿತ್ತು ಎಂಬುದನ್ನು ಸ್ಮರಿಸಬಹುದು.

ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಸಾಫ್ಟ್‌ವೇರ್‌ ಎಂಜಿನಿಯರ್ ಬಂಧನ

ಬೆಂಗಳೂರು: ವಿಧಾನಸೌಧದಲ್ಲಿ ಬಾಂಬ್ ಇರಿಸಿರುವುದಾಗಿ ಶುಕ್ರವಾರ ಬೆದರಿಕೆ ಬಂದಿದ್ದು, ಈ ವಿಷಯದ ಕುರಿತು ಸಾಫ್ಟ್‌ವೇರ್‌ ಎಂಜಿನಿಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಕರೆ ಮಾಡಿದ್ದ ಆರೋಪಿ, ‘ವಿಧಾನಸೌಧದಲ್ಲಿ ಬಾಂಬ್ ಇರಿಸಲಾಗಿದೆ. ಸದ್ಯದಲ್ಲೇ ಸ್ಫೋಟಗೊಳ್ಳಲಿದೆ’ ಎಂದು ಹೇಳಿದ್ದ .

read this also : ಕೆಪಿಎಸ್‌ಸಿ ಇಂದ 5 ವಿವಿಧ ಇಲಾಖೆಗಳ ಹುದ್ದೆಗೆ ನೇಮಕ ಅಧಿಸೂಚನೆ ಪ್ರಕಟ:

ಈ ವಿಷಯ ಗೊತ್ತಾಗುತ್ತಿದ್ದಂತೆ ಪರಿಶೀಲನೆ ನಡೆಸಲಾಯಿತು. ಇದೊಂದು ಹುಸಿ ಕರೆ ಎಂಬುದು ತಿಳಿಯಿತು. ನಂತರ, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಲಾಗಿತ್ತು’ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.

‘ಹೆಬ್ಬಗೋಡಿ ನಿವಾಸಿಯಾದ 41 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ಬಾಂಬ್ ಬೆದರಿಕೆ ಕರೆ ಮಾಡಿದ್ದು ತಿಳಿಯಿತು. ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕರೆ ಮಾಡಲು ಕಾರಣವೇನು ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು.

Bigg Boss 9: ಈ 9 ಮಂದಿ ಮೇಲಿದೆ ಈ ವಾರದ ಎಲಿಮಿನೇಶನ್ !

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್–9ರ ಎರಡನೇ ವಾರದ ಎಲಿಮಿನೇಶನ್‌ಗೆ ಕ್ಷಣಗಣನೆ ಶುರುವಾಗಿದೆ. ಈ ವಾರ 9 ಮಂದಿ ನಾಮಿನೇಟ್ ಆಗಿದ್ದು, ಹೊರಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ.

Bigg Boss 9

ಪ್ರಶಾಂತ್ ಸಂಬರಗಿ, ನೇಹಾ ಗೌಡ, ದರ್ಶ್‌ ಚಂದ್ರಪ್ಪ, ನವಾಜ್, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ಮಯೂರಿ, ಅಮೂಲ್ಯ ಗೌಡ, ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಮನೆಯಿಂದ ಹೊರಹೋದ ಐಶ್ವರ್ಯಾ ಪಿಸೆ, ಬಿಗ್ ಬಾಸ್ ಅವರು ನೀಡಿದ್ದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಆರ್ಯವರ್ಧನ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.

ಇದನ್ನೂ ಓದಿ : ಟಿಪ್ಪು ಎಕ್ಸ್‌ಪ್ರೆಸ್‌ ಇನ್ನು ಮುಂದೆ ‘ಒಡೆಯರ್‌’ ಎಕ್ಸ್‌ಪ್ರೆಸ್ !

ಇನ್ನು, ಈ ವಾರದ ಕ್ಯಾಪ್ಟನ್ ವಿನೋದ್ ಗೊಬ್ಬರಗಾಲ ಅವರು, ಬಿಗ್ ಬಾಸ್ ಸೂಚನೆಯಂತೆ ತಮ್ಮ ಅಧಿಕಾರ ಬಳಸಿಕೊಂಡು ರೂಪೇಶ್ ರಾಜಣ್ಣ ಅವರನ್ನು ನಾಮಿನೇಟ್ ಮಾಡಿದ್ದರು. ಉಳಿದ ಏಳು ಮಂದಿ ಮನೆಯ ಸದಸ್ಯರ ಅಭಿಪ್ರಾಯದ ಆಧಾರದ ಮೇಲೆ ಎಲಿಮಿನೇಶನ್ ಹಂತಕ್ಕೆ ಬಂದು ನಿಂತಿದ್ದಾರೆ.ಮನೆಯ ಸದಸ್ಯರ ಜೊತೆ ಅಷ್ಟಾಗಿ ಬೆರೆಯುತ್ತಿಲ್ಲ ಎಂಬ ಕಾರಣಕ್ಕೆ ದರ್ಶ್ ಚಂದ್ರಪ್ಪ ಅವರಿಗೆ ಅತಿ ಹೆಚ್ಚು ಜನ ನಾಮಿನೇಶನ್‌ಗೆ ಮತ ಹಾಕಿದ್ದರು

ರಾಕೇಶ್‌ಗೆ ಕಳಪೆ ಪಟ್ಟ: ಹೌದು, ಮನೆಯಲ್ಲಿ ಆಗಾಗ್ಗೆ ಪ್ರ್ಯಾಂಕ್ ಮಾಡುತ್ತಾ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ರಾಕೇಶ್ ಅಡಿಗ ಅವರಿಗೆ ಈ ವಾರದ ಕಳಪೆ ಪಟ್ಟ ಸಿಕ್ಕಿದೆ. ವಿನೋದ್ ಗೊಬ್ಬರಗಾಲ ಮತ್ತು ರಾಕೇಶ್‌ಗೆ ಸಮಾನ ಮತಗಳು ಬಿದ್ದಿದ್ದವು. ಬಳಿಕ, ಆರ್ಯವರ್ಧನ್ ಅವರು ರಾಕೇಶ್ ಕಡೆ ಬೊಟ್ಟು ಮಾಡಿದ್ದರಿಂದ ಟೈ ಬ್ರೇಕರ್ ಮೂಲಕ ಅವರು ಜೈಲು ಸೇರಿದರು.

ಪ್ರಚಲಿತ ವಿದ್ಯಮಾನಗಳು :

ONE LINER CURRENT AFFAIRS IN KANNADA Kannada Prachalita Vidyamanagalu

04/09/2022

BY – EXAM INFO KANNADA.

೧. ಸರ್ಕಾರವು ಆಸ್ಟ್ರೋ ಪ್ರವಾಸೋದ್ಯಮವನ್ನು ಉತ್ತೇಜಿಸಲು ಲಡಾಖ್‌ನಲ್ಲಿ ದೇಶದ ಮೊದಲ ರಾತ್ರಿ ಆಕಾಶ ಅಭಯಾರಣ್ಯವನ್ನು ಸ್ಥಾಪಿಸಿದೆ.

೨. ಇತ್ತೀಚೆಗೆ, ಭಾರತವು ಯುಕೆಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆರ್ಥಿಕತೆಯಲ್ಲಿ ಭಾರತ ಈಗ ಯುಎಸ್, ಚೀನಾ, ಜಪಾನ್ ಮತ್ತು ಜರ್ಮನಿಗಿಂತ ಹಿಂದೆ ಇದೆ. ಒಂದು ದಶಕದ ಹಿಂದೆ, ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ 11 ನೇ ಸ್ಥಾನದಲ್ಲಿದ್ದರೆ, ಯುಕೆ 5 ನೇ ಸ್ಥಾನದಲ್ಲಿತ್ತು.

೩. ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

೪. ಈ ವರ್ಷದ ಏಪ್ರಿಲ್‌ನಲ್ಲಿ, ಓಲಾ ಎಲೆಕ್ಟ್ರಿಕ್, ಓಕಿನಾವಾ ಆಟೋಟೆಕ್ ಮತ್ತು ಪ್ಯೂರ್‌ಇವಿಯಂತಹ ತಯಾರಕರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿವೆ. ಅದರ ನಂತರ ಸರ್ಕಾರವು ಅದನ್ನು ತನಿಖೆ ಮಾಡಲು ಟಾಟಾ ನರಸಿಂಹ ರಾವ್ (ನಿರ್ದೇಶಕರು, ಎಆರ್‌ಸಿ, ಹೈದರಾಬಾದ್) ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿತು. ಈ ಸಮಿತಿಯು ಇತ್ತೀಚೆಗೆ ಸರಕಾರಕ್ಕೆ ತನ್ನ ಶಿಫಾರಸನ್ನು ಸಲ್ಲಿಸಿದೆ.

೫. ಇತ್ತೀಚಿಗೆ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (CCS) ಸ್ಥಳೀಯ ವಿಮಾನ LCA ಮಾರ್ಕ್ 2 ಮಲ್ಟಿರೋಲ್ ಫೈಟರ್ ಜೆಟ್‌ನ ಹೆಚ್ಚು ಸಮರ್ಥ ಮತ್ತು ಶಕ್ತಿಯುತ ಆವೃತ್ತಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಅನುಮೋದಿಸಿತು.

೬. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಭಾರತದ ಸಂವಿಧಾನವು ಯಾವುದೇ ಭಾಷೆಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿಲ್ಲ.

ಸಂವಿಧಾನದ 343 ನೇ ವಿಧಿಯ ಅಡಿಯಲ್ಲಿ, ಒಕ್ಕೂಟದ ಅಧಿಕೃತ ಭಾಷೆಯು ದೇವನಾಗರಿಯಲ್ಲಿ ಹಿಂದಿ ಆಗಿರಬೇಕು

ಅಧಿಕೃತ ಭಾಷೆಗಳ ಕಾಯಿದೆ, 1963 ಅನ್ನು 15 ವರ್ಷಗಳ ಅವಧಿ ಮುಗಿಯುವ ನಿರೀಕ್ಷೆಯಲ್ಲಿ ಅಂಗೀಕರಿಸಲಾಯಿತು, ಈ ಸಮಯದಲ್ಲಿ ಸಂವಿಧಾನವು ಅಧಿಕೃತ ಉದ್ದೇಶಗಳಿಗಾಗಿ ಇಂಗ್ಲಿಷ್ ಅನ್ನು ಬಳಸಲು ಅನುಮತಿಸಿತು.

೭. ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ರಹಿತ (NPT) ಒಪ್ಪಂದದ ಪಕ್ಷಗಳ ಹತ್ತನೇ ಪರಿಶೀಲನಾ ಸಮ್ಮೇಳನವು ಕಳೆದ ವಾರ ನ್ಯೂಯಾರ್ಕ್‌ನಲ್ಲಿ ಮುಕ್ತಾಯಗೊಂಡಿತು.

೮. ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಪ್ರಕಟಿಸಿದ ಶ್ರೇಯಾಂಕದ ವರದಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಎಲ್ಲಾ ಸಚಿವಾಲಯಗಳು/ಇಲಾಖೆಗಳಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಅಗ್ರಸ್ಥಾನದಲ್ಲಿದೆ.

೯. ಕೃಷಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ಆವರಿಸಿರುವ ಪ್ರದೇಶದಲ್ಲಿ 5.62% ಇಳಿಕೆ (ಅದನ್ನು 5% ಕ್ಕಿಂತ ಹೆಚ್ಚಿನ ಇಳಿಕೆ ಎಂದು ತೆಗೆದುಕೊಳ್ಳಿ).

ಸದ್ಯಕ್ಕೆ ಸುಮಾರು 384 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ


WhatsApp
Follow by Email