ನಾವು ಬೆಳೆದ ಊರು ನಮಗೆ ಪ್ರೇರಣೆ : ಬಿ. ಎಸ್. ಜಂಬಗಿ

ಮೂಡಲಗಿ: ನಾವು ಬೆಳೆದ ಸ್ಥಳ ನಮಗೆ ಪ್ರೇರಣಾಶಕ್ತಿಯಾಗಿ ನಿಲ್ಲುತ್ತದೆ. ನಾವು ಸೇವೆ ಸಲ್ಲಿಸಿದ ರೀತಿ ನಮ್ಮನ್ನು ಎತ್ತರಕ್ಕೆ ಏರಿಸುತ್ತದೆ ಅದು ಎಲ್ಲ ಅಧಿಕಾರಿಗಳ ಕೈಯಲ್ಲಿದೆ ಕೈ ಕೆಳಗಿನ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮೇಲಕ್ಕೆ ಎತ್ತುತ್ತಾ ಅವರಲ್ಲಿ ಹೊಸ ಉತ್ಸಾಹ ತುಂಬುತ್ತಾ ಮುನ್ನಡೆದಾಗ ಇಲಾಖೆಯು ನಮ್ಮನ್ನು ಸ್ಮರಿಸುತ್ತದೆ ಎಂದು ಬೆಂಗಳೂರಿನ ಕುರಿ ಅಭಿವೃದ್ಧಿ ಮಂಡಳಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ|| ಬಿ.ಎಸ್. ಜಂಬಗಿ ಹೇಳಿದರು.
ಪಶುಪಾಲನೆ, ಪಶು ವೈದ್ಯಕೀಯ ಸೇವಾ ಇಲಾಖೆ, ಮೂಡಲಗಿ ಪಶು ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಕುರಿ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿಯಾದ ಡಾ|| ಬಿ.ಎಸ್. ಜಂಬಗಿ ಅವರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿ ಪಶು ಇಲಾಖೆಯಲ್ಲಿ ಸಣ್ಣ ಪ್ರಮಾಣದ ನೌಕರಿಯಿಂದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯವರೆಗೆ ಬೆಳೆದು ಬಂದಿದ್ದು ಸತ್ಯ, ನಿಷ್ಠೆ ಮತ್ತು ಸಮಯ ಪರಿಪಾಲನೆಯಿಂದ ವ್ಯವಸ್ಥಾಪಕ ನಿರ್ದೇಶಕನಾಗಿ ಇಲಾಖೆಗೆ ಸಂಬoಧಪಟ್ಟ ರಾಜಕಾರಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವಾರು ಇಲಾಖೆಗೆ ಸಂಬoಧಪಟ್ಟ ಕಾರ್ಯಗಳನ್ನು ಮಾಡಿದ್ದು, ಮನಸ್ಸಿಗೆ ತೃಪ್ತಿ ತಂದಿದ್ದು, ಚರ್ಮ ಸಂಸ್ಕರಣಾ ಘಟಕ, ಕುರಿ ಹಿಕ್ಕಿಯಿಂದ ಸಾವಯವ ಗೊಬ್ಬರ ತಯಾರಿಕೆ ಉಣ್ಣೆ ಸಂಸ್ಕರಣಾ ಘಟಕಗಳನ್ನು ಮಾಡುವ ಹಂತದಲ್ಲಿ ನಿವೃತ್ತಿ ಹೊಂದಿದ್ದು ಮುಂದಿನ ಅಧಿಕಾರಿಗಳು ಅವುಗಳನ್ನು ಜಾರಿಗೆ ತರಲಿ ಎಂದ ಅವರು ನಿವೃತ್ತಿ ನಂತರವು ಇಲಾಖೆಯ ಅಧಿಕಾರಿಗಳು ಯಾವುದೇ ಸಲಹೆಗಳನ್ನು ಬೇಕಾದರೂ ಮುಕ್ತ ಮನಸ್ಸಿನಿಂದ ನೀಡುವುದಾಗಿ ಹೇಳಿ ದಕ್ಷಿಣ ಭಾರತದ ಪ್ರಸಿದ್ಧ ದನದ ಪೇಟೆ ಹೊಂದಿರುವ ಮೂಡಲಗಿಗೆ ಪಾಲಿ ಕ್ಲಿನಿಕ್ ಅವಶ್ಯವಿದ್ದು ಸದ್ಯದಲ್ಲಿಯೇ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಪ್ರಯತ್ನದಿಂದ ಪ್ರಾರಂಭವಾಗಲಿದೆ ಎಂದರು.
ಸಹಾಯಕ ನಿರ್ದೇಶಕ ಡಾ|| ಎಂ.ಬಿ. ವಿಭೂತಿ ಮಾತನಾಡಿ ೨೦೦೪ ರಲ್ಲಿ ಬೆಳಗಾವಿಯಲ್ಲಿ ಬೃಹತ್ ಪಶು ಪ್ರದರ್ಶನ ಮಾಡಿ ರೈತರಿಗೆ ಉಪಯುಕ್ತ ಮಾಹಿತಿಗಳ ಕೈಪಿಡಿಯನ್ನು ಬಿಡುಗಡೆಗೊಳಿಸುವ ಮೂಲಕ ರೈತರನ್ನು ನೇರವಾಗಿ ಪಶು ಇಲಾಖೆಯ ಕಡೆ ಸೆಳೆಯುವ ಕೆಲಸ ಡಾ|| ಜಂಬಗಿ ಮಾಡಿದ್ದಾರೆ. ನಿರುದ್ಯೋಗಿ ಯುವಕರನ್ನು ಕೃತಕ ಗರ್ಭದಾರಣಾ ಸಹಾಯಕರನ್ನಾಗಿ ನೇಮಿಸಿಕೊಳ್ಳುವ ಮೂಲಕ ಹಲವಾರು ಕುಟುಂಬಗಳಿಗೆ ಆಶ್ರಯವನ್ನು ಇಲಾಖೆಯ ಮೂಲಕ ಒದಗಿಸಿದ್ದಾರೆ ಎಂದರು.
ಪಶು ಪರಿವೀಕ್ಷಕ ಶಂಕರ ಶಾಬಣ್ಣವರ ಮಾತನಾಡಿ ಅಧಿಕಾರದಲ್ಲಿದ್ದಾಗ ಕೈ ಕೆಳಗಿನ ಅಧಿಕಾರಿಗಳಿಗೆ ಕಿರುಕುಳ ಮಾನಸಿಕ ಒತ್ತಡಗಳನ್ನು ನೀಡದೇ ತಮ್ಮ ಮನೆ ಸದಸ್ಯರಂತೆಯೇ ಅವರ ಕುಟುಂಬ ಮತ್ತು ನೌಕರಿಯಲ್ಲಿ ಆದ ತಪ್ಪುಗಳನ್ನು ಉತ್ತಮ ಸಲಹೆಗಳನ್ನು ನೀಡುತ್ತಾ ಸರಿಪಡಿಸಿದ ಕೀರ್ತಿ ಡಾ|| ಜಂಬಗಿಯವರಿಗೆ ಸಲ್ಲುತ್ತದೆ ನಿವೃತ್ತಿ ನಂತರವೂ ನಮ್ಮಂತಹ ನೌಕರಿ ಮಾಡುವವರಿಗೆ ಇವರ ಮಾರ್ಗದರ್ಶನ ಅವಶ್ಯ ಬೇಕು ಎಂದರು.
ಮಾಜಿ ಪುರಸಭೆ ಸದಸ್ಯ ಡಾ|| ಎಸ್.ಎಸ್. ಪಾಟೀಲ ಮಾತನಾಡಿ ಮೂಡಲಗಿಯಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡವನ್ನು ಡಾ|| ಜಂಬಗಿಯವರ ಅಧಿಕಾರ ಅವದಿಯಲ್ಲಿ ನಿರ್ಮಿಸಿದ್ದು ಶ್ಲಾಘನೀಯ ಪಶುಗಳನ್ನು ಮಾಂಸದ ವ್ಯಾಪಾರಿಗಳಿಗೆ ಮಾರಾಟ ಮಾಡುವಾಗ ಮಾಂಸದ ಕೆ.ಜಿ. ಮೇಲೆ ಮಾರುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯು ಈ ತರಹದ ಮಾರುಕಟ್ಟೆಯನ್ನು ನಿರ್ಮಿಸುವಲ್ಲಿ ಶ್ರಮಿಸಬೇಕೆಂದರು.
ಗೋಕಾಕದ ಸಹಾಯಕ ನಿರ್ದೇಶಕ ಮೋಹನ ಕಮತ ಮೂಡಲಗಿ ಸಹಾಯಕ ನಿರ್ದೇಶಕ ಡಾ|| ಎಂ.ಬಿ. ವಿಭೂತಿ ವೇಧಿಕೆಯ ಮೇಲೆ ಉಪಸ್ಥಿತರಿದ್ದರು,
ಡಾ|| ಬಿ.ಎಸ್. ಗೌಡರ ಡಾ|| ಬಿ.ಎಸ್. ಜಂಬಗಿಯವರ ಕಾರ್ಯವೈಖರಿ ಬಗ್ಗೆ ಮಾತನಾಡಿದರು.
ಇದೆ ಸಮಯದಲ್ಲಿ ಗೋಕಾಕದ ಸಹಾಯಕ ನಿರ್ದೇಶಕ ಮೋಹನ ಕಮತ ಅವರ ಜನ್ಮ ದಿನವನ್ನು ಕೇಕ್ ಕಟ್ಟ ಮಾಡುವದ ಮೂಲಕ ಆಚರಿಸಿ ಶುಭ ಕೋರಿದರು
ಈ ಸಮಯದಲ್ಲಿ ಡಾ|| ಮಹಾದೇವ ಕೌಜಲಗಿ, ಡಾ|| ಪ್ರಶಾಂತ ಕುರಬೇಟ, ಪಶು ಪರಿವೀಕ್ಷಕರಾದ ಸಿ.ಬಿ. ಹೊಸೂರ ಸುರೇಶ ಆದಪ್ಪಗೋಳ, ಪರಮಾನಂದ ಬಡ್ಡಿ ಮತ್ತು ಎ.ಆಯ್. ವರ್ಕರ ಹಾಗೂ ಪಶು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪಶು ಪರಿವೀಕ್ಷಕ ಎಂ.ಬಿ. ಹೊಸೂರ ಸ್ವಾಗತಿಸಿ ನಿರೂಪಿಸಿದರು. ಎಸ್.ಜಿ. ಮಿಲ್ಲಾನಟ್ಟಿ ವಂದಿಸಿದರು.

ವರದಿ : ಶಿವಾನಂದ ಮುಧೋಳ
Share
WhatsApp
Follow by Email