ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. : ಕಟಗಿ

ಚಿಕ್ಕನರಗುಂದ : ಮಹಿಳೆ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.೧೦೦೦ ಪುರಷರಿಗೆ ೯೪೮ಹೆಣ್ಣುಮಕ್ಕಳು ಇದ್ದಾರೆ. ಎಂದು ನರಗುಂದ ವಿಭಾಗ ಡಿ.ಎಸ್.ಪಿ ಶಿವಾನಂದ ಕಟಗಿ, ಹೇಳಿದರು.
ಅವರು ಇತ್ತೀಚೆಗೆ ಚಿಕ್ಕನರಗುಂದ ಪೌಢಶಾಲೆಯಲ್ಲಿ ಅಂತರಾಷ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ಸ್ವತಂತ್ರವಾಗಿ ೭೦ ವರ್ಷದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಭಾರತದ ಸಂವಿಧಾನವು ಮಹಿಳೆಯರನ್ನು ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಿದೆ. ಭಾರದ ಸ್ವತಂತ್ರಗೊoಡಾಗ ಹಸಿವಿನ ಸಮಸ್ಯೆ ಅಧಿಕವಾಗಿತ್ತು ಬಡತನ ಅನಕ್ಷರತೆ ಇತ್ತು. ಇವೆಲ್ಲವೂ ಸ್ವತಂತ್ರ ಭಾರತದ ಮುಂದಿರುವ ಸವಾಲುಗಳಿದ್ದವು. ಹಸಿರು ಕ್ರಾಂತಿಯಮೂಲಕ ಆಹಾರದ ಹಸಿವನ್ನು ನಿಗಿಸುವ ಕಾರ್ಯ ಮಾಡಿದೆ . ಮಹಿಳಾ ಸಬಲೀಕರಣದ ಯೋಜನೆಯ ಮಹಿಳಾ ಸಮಾನತೆಯನ್ನು ಸಾಧಿಸುವಲ್ಲಿ ಭಾರತ ಪ್ರಮುಖವಾದ ಸಾಧನೆ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಅನ್ನಪೂರ್ಣ ಮತ್ತು ಶ್ರೀದೇವಿ ಮತ್ತು ಶ್ರೀಮತಿ ಬಸಮ್ಮ ಸೀಪಾಯಿ ಇವರನ್ನು ಸಾಧನಾ ಸಂಸ್ಥೆಯ ಅಧ್ಯಕ್ಷರ ಡಾ ಇಸಬೆಲ ಝೇವಿಯರ್ ಸನ್ಮಾನ ಮಾತನಾಡುತ್ತ ಮಹಿಳಾ ತನ್ನ ಸಮಾನ ವೇತನವನ್ನು ಪಡೆಯಲು ನ್ಯೂಯಾರ್ಕ್ ನಗರದ ಕ್ಲರಾ ಮತ್ತು ರೋಜಾ ಎಂಬ ಮಹಿಳೆಯರ ನೇತ್ರತ್ವದಲ್ಲಿ ಹೋರಾಟ ಪ್ರಾರಂಭಿಸಿದರು. ಇಂದಿಗೆ ೧೦೩ ವರ್ಷದ ಘೋಷಣೆ ಮಹಿಳಾ ಸಮಾನತೆ.
ಆದರೂ ಇವತ್ತಿಗೂ ಮಹಿಳೆಯರಿಗೆ ಮಂದಿರಗಳಲ್ಲಿ ಪ್ರವೇಶವಿಲ್ಲ, ಅಸಂಘಟಿತಕಾರ್ಮಿಕ ವಲಯದಲ್ಲಿ ಮಹಿಳೆಯರಿಗೆ ಸಮಾನ ವೇತನ ಸಿಗುತ್ತಿಲ್ಲ. ಉದ್ಯೋಗ ಆಯ್ಕೆ ಇಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರಿಗೆ ಇನ್ನೂ ಸಹ ಶಿಕ್ಷಣದ ಆಯ್ಕೆ ಇಲ. ಸಂವಿಧಾನದ ಆಶಯದಂತೆ ಮಹಿಳೆ ಇನ್ನೂ ಮುಂದೆ ಬರಬೇಕಾಗಿದೆ.
ಮಹಿಳೆಯರು ಸಾಧಕಿಯರು, ಮಹಿಳೆಯರು ವಹಿಸಿಕೊಂಡ ಕಾರ್ಯ ಪುರುಷರಿಗಿಂತ ಯಶಸ್ವಿಯಾಗಿ ನಿಭಾಯಿಸುತ್ತಾರೆ. ತಾವು ಯುವತಿಯರು ಧ್ಯೆರ್ಯದಿಂದ ಮುಂದೆ ಬರಬೇಕು. ನಾವು ಆತ್ಮದಿಂದ ಗೌರವಿಸ ಬೇಕಾಗಿದೆ ಎಂದು ಕರೆಕೊಟ್ಟರು.
ಗದಗ ಘಟಕದ ಸಾಧನಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಗನಗೌಡ ಹಾಲಗೌಡ್ರ ಹುಮಾನ ವಿತರಣೆ ಮತ್ತು ಧನ್ಯವಾದಗಳು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಹಳೆಮನಿಯವರು ಸಾಧನಾ ಸಂಸ್ಥೆಯ ಅಧ್ಯಕ್ಷರ ಕಾರ್ಯವನ್ನು ಶ್ಲಾಘನೀಯವಾದುದ್ದು, ಎಸ್.ಎಸ್.ಎಲ್.ಸಿ. ಪರಿಕ್ಷೆ ಫಲಿತಾಂಶದಲ್ಲಿ ಚಿಕ್ಕನರಗುಂದ ಶಾಲೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲಿ ಅಂತಾ ಹಾರೈಸಿದರು.
ಕಾರ್ಯಕ್ರಮದಲ್ಲಿ ª ಮುಖ್ಯೋಪಾಧ್ಯಯರು ವಾಸು ಬೋಸಲೆ ಮುಂತಾದವರು ಹಾಜರಿದ್ದ ಕೊನೆಗೆ ಜಗದೀಶ ಆರೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Share
WhatsApp
Follow by Email