ಹಿಂಡಾಲ್ಕೂದಿಂದ ಆರೋಗ್ಯ ಇಲಾಖೆಗೆ ಕೊರೋನಾ ಜಾಗೃತಿ ಸಾಮಗ್ರಿ ವಿತರಣೆ

ಬೆಳಗಾವಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸ್ಥಳೀಯ ಹಿಂಡಾಲ್ಕೂ ಲಿಮಿಟೆಡ್‍ದಿಂದ ಕೊರೋನಾ(ಕೋವಿಂದಾ-19)ವೈರಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸು ಅಂಗವಾಗಿ ಗೋಡೆ ಪೋಸ್ಟರ ಮತ್ತು ಬ್ಯಾನರ್‍ಗಳನ್ನು ಇಲಾಖೆಯ ಜಿಲ್ಲಾಧಿಕಾರಿ ಡಾ: ಶಶಿಕಾಂತ ಮುನ್ಯಾಳ ಮತ್ತು ಸರ್ವೇಕ್ಷಣಾಧಿಕಾರಿ ಡಾ: ಬಿ.ಎನ್.ತುಕ್ಕಾರ ಅವರಿಗೆ ಹಸ್ತಾಂತರಿಸಿದರು.
ಹಿಂಡಾಲ್ಕೂ ಲಿಮಿಟೆಡಿನ ಸಹಾಯಕ ಉಪಾಧ್ಯಕ್ಷ ವಿಶ್ವಾಸ ಶಿಂಧೆ ಅವರು ಸೂಮಾರು ಒಂದೊಂದು ಸಾವಿರ ಗೋಡೆ ಪೋಸ್ಟರ್ ಮತ್ತು ಬ್ಯಾನರಗಳನ್ನು ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಹಿಂಡಾಲ್ಕೂ ಸಮುದಾಯ ಅಭಿವೃಧಿ ಕಾರ್ಯಕ್ರಮ ಅಡ್ಡಿಯಲ್ಲಿ ಕೊರೋನಾ (ಕೋವಿಂದಾ-19)ವೈರಸ್ ಬಗ್ಗೆ ಮಾಹಿತಿ ಮುದ್ರಿಸಿ ಜನರಲ್ಲಿ ಜಾಗ್ರತಿ ಮೂಡಿಸಲ್ಲು ಸಹಾಯ ಮಾಡಿರುವದಾಗಿ ತಿಳಿಸಿದರು.
ಈ ವೇಳೆಯಯಲ್ಲಿ ಹಿಂಡಾಲ್ಕೂನ ಸಮುದಾಯ ಅಭಿವೃಧಿ ಕಾರ್ಯಕ್ರಮ ಅಧಿಕಾರಿ ರವಿ ಬಿಸಗುಪ್ಪಿ, ಮಾನವ ಸಂಪನ್ಮೂಲ ವ್ಯಕ್ತಿ ರಾಕೇಶ ನಾಯ್ಕ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.
Share
WhatsApp
Follow by Email