ಆರ್ಥಿಕ ಗಣತಿಗೆ ಜನರು ಸ್ಪಷ್ಟ ಮಾಹಿತಿ ನೀಡಿ ಸಹಕರಿಸಿ : ಪಿಡಿಓ ನೇರ್ಲಿ

ಹುಕ್ಕೇರಿ :ದೇಶದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಆರ್ಥಿಕ ಗಣತಿ ಜಿಲ್ಲಾಧಿಕಾರಿ ಅವರ ಆದೇಶದಂತೆ ನಡೆಸುತ್ತಿದ್ದು, ಜನರು ಯಾವುದೇ ಆತಂಕ, ಗೊಂದಲಗಳಿಗೆ ಒಳಗಾಗದೇ ನಿಮ್ಮ ಮನೆ ಬಾಗಿಲಿಗೆ ಬಂದ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಪಿಡಿಓ ಪಿ.ಆರ್.ನೇರ್ಲಿ ತಿಳಿಸಿದರು.
ಅವರು ಸಮೀಪದ ಸೋಲಾಪುರ ಗ್ರಾಮದಲ್ಲಿ
7ನೇ ಆರ್ಥಿಕ ಗಣತಿ ಕಾರ್ಯಕ್ರಮಕ್ಕೆ ನಡೆಯುತ್ತಿದ್ದು ಈ ಗಣತಿಯು ಪ್ರತಿ 6 ವರ್ಷಕ್ಕೊಮ್ಮೆ ನಡೆಯುತ್ತಿದ್ದು ಸಾಮಾನ್ಯ ಸೇವಾ ಕೇಂದ್ರ ಗಣತಿದಾರರು ತಮ್ಮ ಮನೆ, ಅಂಗಡಿ, ಮಳಿಗೆಗಳಿಗೆ ಬಂದು ಮಾಹಿತಿ ಕೇಳಿದಾಗ ಸರಿಯಾಗಿ ಮಾಹಿತಿ ನೀಡಿ ಎಂದರು

ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾವ್ಯವಸ್ಥಾಪಕರಾದ ವೀರೇಶ ಪುರಾಣಿಕ, ಜಿಲ್ಲಾ ಸಂಯೋಜಕರಾದ ಕಿರಣ ಜೋಶಿ, ಆರ್ಥಿಕ ಗಣತಿದಾರರಾದ ಉಮೇಶ ಗೋಟೂರೆ, ಪ್ರವೀಣ ಕರನಿಂಗ, ವಿನಾಯಕ ಮಾಳನಾಯಿಕ ಇದ್ದರು.
Share
WhatsApp
Follow by Email