ಪಿಜಿ-ಹಾಸ್ಟೆಲ್​​ಗಳಲ್ಲಿ ಇರುವ ವಿದ್ಯಾರ್ಥಿಗಳು ನಿಮ್ಮ ಊರುಗಳಿಗೆ ತೆರಳಿ: BBMP ಆಯುಕ್ತರ ಮನವಿ

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಒಂದು ವಾರದ ಕಾಲ ಶಾಲಾ-ಕಾಲೇಜು, ಮಾಲ್, ಥೀಯೇಟರ್​​ಗಳನ್ನ ಬಂದ್​ ಮಾಡುವಂತೆ ಸಿಎಂ ಬಿ.ಎಸ್​.ಯಡಿಯೂರಪ್ಪ ನೀಡಿದ ಆದೇಶ ಜಾರಿಯಲ್ಲಿದೆ. ಇದರ ಜೊತೆಗೆ ನಗರದ ಪಿಜಿ, ಹಾಸ್ಟೆಲ್​​ಗಳಲ್ಲಿ‌ ಇರುವವರ ಮೇಲೂ ಪಾಲಿಕೆ ನಿಗಾ ಇಟ್ಟಿದೆ.
ಸದ್ಯ ಪೇಯಿಂಗ್ ಗೆಸ್ಟ್‌ ಅಥವಾ ಹಾಸ್ಟೆಲ್​ಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಬಿಬಿಎಂಪಿ ಮನವಿ ಮಾಡಿದೆ. ರಾಜ್ಯ ಸರ್ಕಾರದ ಆದೇಶದಂತೆ ನಿಮ್ಮ ಶಿಕ್ಷಣ ಸಂಸ್ಥೆ ರಜೆ ಘೋಷಿಸಿದ್ದರೆ, ಕೂಡಲೇ ನಿಮ್ಮ ಮನೆ ಅಥವಾ ಊರಿಗೆ ತೆರಳಿ ಎಂದು ಬಿಬಿಎಂಪಿ ಆಯುಕ್ತ ಅನಿಲ್​​ ಕುಮಾರ್​​ ಮನವಿ ಮಾಡಿದ್ದಾರೆ. ಹಾಗೇ ಪಿಜಿಗಳಲ್ಲಿ ಕಟ್ಟುನಿಟ್ಟಾಗಿ ಸ್ವಚ್ಛತೆ ಕಾಪಾಡಬೇಕು ಎಂದು ಮಾಲೀಕರಿಗೆ ಆದೇಶಿಸಿದ್ದಾರೆ.
Share
WhatsApp
Follow by Email