ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿಗೆ ಬಿಗ್ ಶಾಕ್ ನೀಡಿದ್ದು, ಅವರಿಗೆ ನೀಡಿದ್ದ ಪೈಲೆಟ್ ಸೇವೆಯನ್ನು ವಾಪಸ್ ಪಡೆದಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮಗೆ ಝಡ್ ಶ್ರೇಣಿ ಭದ್ರತೆ ಒದಗಿಸಲು ಸಿಎಂಗೆ ಮನವಿ ಮಾಡಿದ್ದು, ಸೋಮವಾರ ಬೆಳಗ್ಗೆ ಪೈಲೆಟ್ ವಾಹನ ಸೇವೆಯನ್ನು ಗೃಹ ಇಲಾಖೆ ಹಿಂಪಡೆದುಕೊಂಡಿದೆ. ವಿವಿಐಪಿ ಭದ್ರತೆ ದೃಷ್ಟಿಯಿಂದ ಮಾಜಿ ಸಿಎಂಗಳಿಗೆ, ವಿಪಕ್ಷ ನಾಯಕರಿಗೆ ಪೈಲಟ್ ಮತ್ತು ಎಸ್ಕಾರ್ಟ್ ಸೇವೆ ನೀಡಲಾಗುವುದು. ಆದರೆ ಇದೀಗ ಯಾವುದೇ ಕಾರಣ ನೀಡದೆ ಪೈಲೆಟ್ ವಾಹನ ವಾಪಸ್ ಪಡೆಯಲಾಗಿದೆ.
ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿಗೆ ವಿವಿಐಪಿ ಭದ್ರತೆಯ ಎಸ್ಕಾರ್ಟ್ ನೀಡಲಾಗುತ್ತಿತ್ತು.ಆದರೆ, ಇದೀಗ ಏಕಾಏಕಿ ಬಿಜೆಪಿ ಸರ್ಕಾರ ಎಸ್ಕಾರ್ಟ್ ಕಡಿತಗೊಳಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಬಿಗ್ ಶಾಕ್ ನೀಡಿದೆ.