
ಮಾ.13ರಂದು ಮನೆಯಿಂದ ಬೈಲಹೊಂಗಲಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆಂದು ಅವರ ಸಹೋದರ ಆನಂದ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವಕ 5 ಫೂಟ 1 ಇಂಚಲ ಎತ್ತರ, ತೆಳುವಾದ ಮೈಕಟ್ಟು, ದುಂಡು ಮುಖ, ನೀಟಾದ ಮೂಗು, ಕಪ್ಪ ಕೂದಲು ಇವೆ. ಮನೆಯಿಂದ ಹೋಗುವಾಗ ಮೈಮೇಲೆ ಬಿಳಿ ಬಣ್ಣದ ಪುಲ್ ತೋಳಿನ ಶರ್ಟ ಹಾಗೂ ನೀಲಿ ಜೀನ್ಸ್ ಪ್ಯಾಂಟ ಧರಿಸಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಠಾಣಾ ಫೊ.08288-233133 ಸಂಪರ್ಕಿಸಲು ಕೋರಲಾಗಿದೆ.