ಅಂಚೆ ಇಲಾಖೆ ಸಣ್ಣ ಉಳಿತಾಯ ಖಾತೆದಾರರಿಗೆ ಶಾಕಿಂಗ್ ನ್ಯೂಸ್

ನವದೆಹಲಿ : ಅಂಚೆ ಇಲಾಖೆಯ ತನ್ನ ಖಾತೆದಾರರಿಗೆ ಕೇಂದ್ರ ಸರ್ಕಾರವು ಶಾಕಿಂಗ್ ನ್ಯೂಸ್ ವೊಂದನ್ನು ನೀಡಿದ್ದು, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಮುಂದಿನ ತ್ರೈಮಾಸಿಕದಲ್ಲಿ ಇಳಿಸುವ ಸಾಧ್ಯತೆ ಇದೆ.
ಪಿಪಿಎಫ್, ಎನ್ ಎಸ್ ಸಿ ಸೇರಿದಂತೆ ಹಲವು ಉಳಿತಾಯ ಯೋಜನೆಗಳು ಇವೆ. ಬ್ಯಾಂಕ್ ಗಳು ತಮ್ಮ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ಕಡಿಮೆ ಮಾಡಿದ್ದರೂ ಅಂಚೆ ಕಚೇರಿಯಲ್ಲಿ ಲಭ್ಯವಿರುವ ಈ ಉಳಿತಾಯ ಯೋಜನೆಗಳ ಬಡ್ಡಿಯನ್ನು ಸರ್ಕಾರ ಈ ತ್ರೈಮಾಸಿಕದಲ್ಲಿ ಕಡಿಮೆ ಮಾಡಿಲ್ಲ. ಹೀಗಾಗಿ ಅಂಚೆ ಇಲಾಖೆಯ ಉಳಿತಾಯ ಖಾತೆದಾರರ ಬಡ್ಡಿ ದರವನ್ನು ಕಡಿತಗೊಳಿಸಬೇಕು ಎಂದು ಬ್ಯಾಂಕ್ ಗಳು ಒತ್ತಾಯಿಸಿವೆ.
ಕೇಂದ್ರ ಸರ್ಕಾರವು ಬ್ಯಾಂಕ್ ಗಳ ಒತ್ತಾಯಕಕ್ಕೆ ಮಣಿದಿದ್ದು, ಅಂಚೆ ಇಲಾಖೆ ಖಾತೆದಾರರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ
Share
WhatsApp
Follow by Email