ಉದಗಟ್ಟಿ ಉದ್ದಮ್ಮದೇವಿ ಜಾತ್ರೆ ರದ್ದು

ಗೋಕಾಕ್ : ಕೊರೊನಾ ವೈರಸ್ ಜಾತ್ರೆಗೂ ತಟ್ಟಿದ್ದು, ಯುಗಾದಿ ಹಬ್ಬದಂದು ನಡೆಯಬೇಕಿದ್ದ ತಾಲ್ಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮದೇವಿ ಜಾತ್ರೆಯನ್ನು ರದ್ದುಪಡಿಸಲಾಗಿದೆ.
ಮಾ. 24 ರಿಂದ 29 ರ ವರೆಗೆ ನಡೆಯಬೇಕಿದ್ದ ಜಾತ್ರೆಯನ್ನು ಕೊರೋನಾ ಭೀತಿಯಿಂದ
ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಪ್ರಮುಖರಾದ ಭೂತಪ್ಪ ಗೋಡೇರ ಮತ್ತು ಹಣಮಂತ ಕೊಪ್ಪದ ಅವರು ತಿಳಿಸಿದ್ದಾರೆ.
Share
WhatsApp
Follow by Email