
ಅಮೆರಿಕದ ಸ್ಕಿಪ್ಸ್ ವಿಶ್ವವಿದ್ಯಾಲಯ ಸಂಶೋಧನೆಯ ಸಂಶೋಧಕರು ಸೇರಿದಂತೆ ಅನೇಕ ವಿಜ್ಞಾನಿಗಳು ಮಂಡಿಸಿದ ವರದಿಯನ್ನು ನೇಚರ್ ಮೆಡಿಸನ್ ನಿಯತಕಾಲಿಕ ಪ್ರಕಟಿಸಿದ್ದು, ಕೊರೊನಾ ವೈರಸ್ ಮಾನವ ನಿರ್ಮಿತವಲ್ಲ, ಬದಲಿಗೆ ಅದು ನೈಸರ್ಗಿಕವಾಗಿ ಸೃಷ್ಟಿಯಾದ ವೈರಾಣು ಎಂದು ಸ್ಪಷ್ಟಪಡಿಸಿವೆ.
ಕೊರೊನಾ ವಯರಸ್ ನೈಸರ್ಗಿಕವಾಗಿ ಜನಿಸಿದ್ದು, ವೈರಾಣುವಿನ ಅನುವಂಶಿಕ ಧಾತುಗಳ ರಚನೆಯನ್ನು ಗಮನಿಸಿದಾಗ ಇದು ಮಾನವ ನಿರ್ಮಿತವಲ್ಲ ಎಂದು ಕಂಡುಬಂದಿದೆ ಎಂಬುದನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.