ಮೂಡಲಗಿ: ಇಲ್ಲಿಯ ಶ್ರೀ ಶಿವಬೋಧರಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷದ ಅವಧಿಗೆ ಗುರುವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಜಯಕುಮಾರ ಅಪ್ಪಾಸಾಹೇಬ ಸೋನವಾಲ್ಕರ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ಹಣಮಂತ ತಳವಾರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ತಿಳಿಸಿದ್ದಾರೆ. ಈ ವೇಳೆಯಲ್ಲಿ ನಿರ್ದೇಶಕರಾದ ವೆಂಕಟೇಶ ರಾ.ಸೋನವಾಲಕ್ಕರ, ಬಸು ಬಿ.ಕುರಬಗಟ್ಟಿ, ಸುಭಾಸ ಯ.ಸಣ್ಣಕ್ಕಿ, ಸಚೀನ ಗೋ.ಸೋನವಾಲ್ಕರ, ವಿನೋಧ ಕೃ.ಪಾಟೀಲ, ರವೀಂದ್ರ ಯ.ಶಾಬನ್ನವರ, ವೀರಣ್ಣಾ ಬ.ಸೋನವಾಲ್ಕರ, ಪದ್ಮಾವತಿ ಮ.ಲಂಕೆಪ್ಪನವರ, ಶಾಂತವ್ವಾ ಲ.ಶಾಬನ್ನವರ ಮತ್ತು ಕಾರ್ಯದರ್ಶಿ ಅಶೋಕ ಮಹಾರಡ್ಡಿ, ಸತೀಶ ಲಂಕೆಪ್ಪನವರ, ಗೋಪಾಲ ಶಾಬನ್ನವರ, ವಿಶಾಲ ಜಾಧವ ಮತ್ತಿತರು ಇದ್ದರು