ಬ್ರೇಕಿಂಗ್ ನ್ಯೂಸ್ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ 20/03/202020/03/2020 admin ಬೈಲಹೊಂಗಲ : ಪಟ್ಟಣದ ಬಸವ ನಗರದಲ್ಲಿರುವ ಬಸವಯೋಗ ಮಂಟಪದಲ್ಲಿ ತಾಲೂಕಾ ಕನ್ನಡ ಜಾನಪದ ಪರಿಷತ್ ಘಟಕದಿಂದ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಕಜಾಪ ಅಧ್ಯಕ್ಷ ಚಂದ್ರಶೇಖರ ಕೊಪ್ಪದ, ಶಿಕ್ಷಕ ಮಲ್ಲಿಕಾರ್ಜುನ ಕೋಳಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದರೊಂದಿಗೆ, ಮುಂದಿನ ಪೀಳಿಗೆಗೆ ಜಾನಪದದ ಮಹತ್ವವನ್ನು ತಿಳಿಸಿಕೊಡುವುದಾಗಬೇಕು. ಡೊಳ್ಳು ಕುಣಿತ, ವೀರಗಾಸೆ, ಬೀಸುವ ಪದ, ಕುಟ್ಟುವ ಪದ ಮತ್ತು ಸೋಬಾಗಿ ಪದಗಳಲ್ಲಿ ಅಡಗಿರುವ ಮೌಲ್ಯಗಳನ್ನು ಜನರಿಗೆ ಮುಟ್ಟಿಸಬೇಕಾಗಿದೆ ಎಂದರು. ಕಜಾಪ ಉಪಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ಜಾನಪದದಲ್ಲಿರುವ ಸಾಮಾಜಿಕ ಕಳಕಳಿಯ ಕುರಿತು ತಿಳಿಸಿದರು. ಅಧ್ಯಕ್ಷತೆವಹಿಸಿದ್ದರು. ಕೃ.ಪ.ಸಹಕಾರಿ ಸಂಘದ ನಿರ್ದೇಶಕ ಪಿ.ಎಚ್.ರಾಯಭಾಗ, ಬಸವ ಪೌಂಡೇಶನದ ಮಹೇಶನ ಕೋಟಗಿ, ಮರ್ಚಂಟ್ Share