ಬೇಸಿಗೆ ಎಂದು ಈಜಲು ಹೋಗಿ ಇಬ್ಬರ ಬಾಲಕರ ದುರ್ಮರಣ

ಮುದ್ದೇಬಿಹಾಳ:ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಹೊರವಲಯದಲ್ಲಿರುವ ಕುಮಾರಪ್ಪ ಮಡಿವಾಳಪ್ಪ ಕೋರಿ ಅವರ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಘಟನೆ ಸಂಭವಿಸಿದೆ.
ಶಾಲೆ ರಜೆ ಇದ್ದ ಕಾರಣ ಐದು ಮಕ್ಕಳು ಸೇರಿಕೊಂಡು ಈಜಲು ಈ ಕೃಷಿ ಹೊಂಡಕ್ಕೆ ಹೋಗಿದ್ದಾರೆ ಎನ್ನಲಾಗಿದೆ
ಇವರಲ್ಲಿ ಇಬ್ಬರು ಹೊರಗಡೆ ಬಂದಿದ್ದು ಒಬ್ಬ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಇಬ್ಬರು ಬಾಲಕರು ಸಾವನ್ನಪ್ಪಿದ್ದು
ಅಮಿತ್ ಟಕ್ಕಳಕಿ (11 ವರ್ಷ ಸಿದ್ದರಾಮಪ್ಪ ಗೌಡ ಮುದುಕಪ್ಪ ಬಿರಾದಾರ್ (12) ವರ್ಷ ದ ಮೃತ ದುರ್ದೈವಿ ಗಳಾಗಿದ್ದಾರೆ.
ಇತ್ತ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ ಘಟನೆಗೆ ಢವಳಗಿ ಗ್ರಾಮವೇ ಮೌನವಾಗಿದೆ.
ಸಿದ್ದರಾಮಪ್ಪ ಗೌಡ ಡವಳಗಿ ಎಂಬ ವಿದ್ಯಾರ್ಥಿ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಅಮಿತ್ ಎನ್ನುವನು ವಿದ್ಯಾರ್ಥಿ ಮುದ್ದೇಬಿಹಾಳ ಪಟ್ಟಣದ ಎಂಜಿಎಂಕೆ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಾನೆ
ಘಟನಾ ಸ್ಥಳಕ್ಕೆ ಪಿಎಸ್ಐ ಮಲ್ಲಪ್ಪ ಮಡ್ಡಿ ಹಾಗೂ ಕಂದಾಯ ಇಲಾಖೆಯ ತಲಾಟಿ ಮಠಪತಿ ಅವರು ಭೇಟಿ ನೀಡಿ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವರದಿ..ಮಕಬುಲ್ ಅ ಬನ್ನೇಟ್ಟಿ
ಮುದ್ದೇಬಿಹಾಳ
Share
WhatsApp
Follow by Email