ಬ್ರೇಕಿಂಗ್ ನ್ಯೂಸ್ ಜನತಾ ಕರ್ಪ್ಯೂ ಹಾಗೂ ಕೊರೋನಾ ವೈರಸ್ ಬಗ್ಗೆ ಬೈಲಹೊಂಗಲ ಪಟ್ಟಣದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಅರಿವು ಜನಜಾಗೃತಿ 21/03/202021/03/20201 min read admin ಬೈಲಹೊಂಗಲ- ಪಟ್ಟಣದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಕೊರೋನಾ (ಕೋವಿಡ್-19) ವೈರಸ್ ಬಗ್ಗೆ ಅರಿವು, ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿದಿನ ಬೆಳಿಗ್ಗೆ 6 ಘಂಟೆ ಮತ್ತು ರಾತ್ರಿ 9 ಘಂಟೆಗೆ ಧ್ವನಿವರ್ಧಕ ಮೂಲಕ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಕಚೇರಿ ಮೇಲೆ ಸ್ಥಾಪಿಸಿದ ಸುದ್ದಿ ಮನೆಯಿಂದ ಕೊರೋನಾ ವೈರಸ್ ಅರಿವು ಜನಜಾಗೃತಿ ವಿಶೇಷವಾಗಿ ಜನತಾ ಕರ್ಪ್ಯೂ ಕರೆ ಮುಟ್ಟಿಸುವ ಕಾರ್ಯ ನಡೆಯುತ್ತಿದೆ. ಅತ್ಯಂತ ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಕರೋನಾ ಸೊಂಕಿನ ಲಕ್ಷಣ, ಹರಡುವ ವಿಧಗಳು, ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳು ಅನುಸರಿಸುವ ಕುರಿತು ಡಾ. ಮಹಾಂತೇಶ ರಾಮಣ್ಣವರ ಅವರು ಮಾಹಿತಿ ನೀಡಿದರು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ 22 ರಂದು ಭಾನುವಾರ ಮುಂಜಾನೆ 7ರಿಂದ ರಾತ್ರಿ 9 ಘಂಟೆ ವರೆಗೆ ವಿಶೇಷವಾಗಿ ಜನತಾ ಕರ್ಪ್ಯೂ ಕರೆ ನೀಡಿದ ವಿನಂತಿಯನ್ನು ಬೆಂಬಲಿಸಿ ಜನಜಾಗೃತಿ ಮೂಡಿಸಲಾಯಿತು ಇದರಿಂದ ಕರೋನಾ ಮುಕ್ತ ಭಾರತದತ್ತ ಸಾಗಿಸಲು ಸ್ವಯಂ ಪ್ರೇರಿತರಾಗಿ ಕೈಜೋಡಿಸಲು ಮನವಿ ಮಾಡಲಾಯಿತು. ತಮ್ಮ ವೈದ್ಯ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಮಾಜಮುಖಿ ಕೆಲಸ ಮಾಡುವ ವೈದ್ಯರು ಅಪರೂಪ. ಅಂಥ ಅಪರೂಪ ವೈದ್ಯ,ಟ್ರಸ್ಟನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಅವರು ದಿ.20 ರಂದು ಚಾಲನೆ ನೀಡಿ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಕುರಿತು ಡಾ. ಮಹಾಂತೇಶ ರಾಮಣ್ಣವರ ಅವರು ಮಾಹಿತಿ ನೀಡಿದರು. ಪಟ್ಟಣದ ಎಸ್‌ಜಿವಿ ಆಯುರ್ವೆದ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿ ಶಿವಕುಮಾರ ಬೆನಕನಕೊಂಡ ಅವರು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಾಲೂಕಾ ಆಡಳಿತ, ಪುರಸಭೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ತಾಲೂಕಾ ಆರೋಗ್ಯಾಧಿಕಾರಿ ಕಚೇರಿ ಆಶ್ರಯದಲ್ಲಿ ಈ ಜನಜಾಗೃತಿ ಅಭಿಯಾನವು ನಡೆಸಲಾಗುತ್ತಿದೆ. ಬಾಕ್ಸಿನಲ್ಲಿ- ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ನಿಧನವಾರ್ತೆಯನ್ನು ಬಿತ್ತರಿಸಲು 2017 ರಲ್ಲಿ ಪ್ರಾರಂಭಿಸಿತ್ತು. ಆ ವೇದಿಕೆಯನ್ನು ಈ ಮೂಲಕ ಕರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವದು ವೈದ್ಯರ ಆದ್ಯ ಕರ್ತವ್ಯವೆಂದು ತಿಳಿದು ಟ್ರಸ್ಟಿನ ಕಚೇರಿ ಮೇಲ್ಚಾವಣಿ ಧ್ವನಿವರ್ಧಕ ಮೂಲಕ ಪಟ್ಟಣದ ನಾಲ್ಕು ದಿಕ್ಕಿಗೆ ಕೇಳುವಂತೆ ಪ್ರಸಾರ ಮಾಡಲಾಗುತ್ತಿದೆ. ಡಾ. ಮಹಾಂತೇಶ ರಾಮಣ್ಣವರ, ಕಾರ್ಯದರ್ಶಿಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಬೈಲಹೊಂಗಲ.ಹಾಗೂ ಬೆಳಗಾವಿ ಕೆಎಲ್‌ಇ ವಿಶ್ವವಿದ್ಯಾಲಯದ ಶ್ರೀ ಬಿಎಂಕೆ ಆಯುರ್ವೆದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಮುಖ್ಯಸ್ಥರು Share