ಡಿಸಿಎಮ್ ಲಕ್ಷ್ಣ ಸವದಿ ಅಭಿಮಾನಿಗಳಿಂದ ಸಾರಿಗೆ ಸಿಬ್ಬಂದಿ, ಸಾರ್ವಜನಿಕರಿಗೆ ಉಚಿತ ಮಾಸ್ಕ ವಿತರಸಿ ಕರೋನಾ ಜಾಗೃತಿ

ಅಥಣಿ: ವ್ಯಾಪಕವಾಗಿ ಹರಡುತ್ತಿರುವ ಕರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕರು ಹಾಗೂ ಚಾಲಕರಿಗೆ ಮತ್ತು ಸಿಬ್ಬಂದಿಗಳಿಗೆ ಉಪಮುಖ್ಯಮಂತ್ರಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಅಥಣಿಯ ಬಸ್ ನಿಲ್ದಾಣದಲ್ಲಿ ಶನಿವಾರ 10 ಗಂಟೆಗೆ ಉಚಿತವಾಗಿ ಮಾಸ್ಕ ವಿತರಿಸಿ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಅವರು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ  ಪ್ರತಿನಿತ್ಯ ಐದು ಕೋಟಿಯಷ್ಟು ನಷ್ಟವಾಗುತ್ತಿದೆ. ಆದರೆ ಸಾರ್ವಜನಿಕ ಅನುಕೂಲಕ್ಕಾಗಿ ತುರ್ತು ಸೇವೆಯ ರೀತಿಯಲ್ಲಿ ಸಿಬ್ಬಂದಿ ಸನ್ನದ್ದವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಳೆಯ ಜನತಾ ಕಪ್ರ್ಯೂ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರ ಕರೆಗೆ ಜನರು ಸಹಕರಿಸಿ ಸ್ಪಂದಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಕ್ಕದ ರಾಜ್ಯಗಳಿಗೆ ಸಾರಿಗೆ ಸೇವೆ ಬಂದ್: ಮಹಾರಾಷ್ಟ್ರದಲ್ಲಿ ಕರೋನಾ ಸೋಕು ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂದ್ರ ಪ್ರದೇಶ, ತೆಲಂಗಾನಾ, ಗೋವಾ ರಾಜ್ಯಗಳಿಗೆ ಕರ್ನಾಟಕದ ಬಸ್ ಸೇವೆಗಳನ್ನು ಬಂದ್ ಮಾಡಲಾಗಿದೆ. ಮತ್ತು ರಾಜ್ಯದಲ್ಲಿ ಇರುವ ಅತ್ಯಾವಶ್ಯಕ ಅನಿಸುವ ಸ್ಥಳಗಳಲ್ಲಿ ಮಾತ್ರ ಸಾರಿಗೆ ಸೇವೆಯನ್ನು ನೀಡಲಾಗುವದು, ಸಾರ್ವಜನಿಕರ ಹಿತ ದೃಷ್ಠಿಯಿಂದ ಈ ಕ್ರಮಕ್ಕೆ ಸರಕಾರ ಮುಂದಾಗಿದೆ. ಸಾರ್ವಜನಿಕರು ಮಹಾಮಾರಿ ಕರೋನಾ ವಿರುದ್ದದ ಹೋರಾಟಕ್ಕೆ ಮುಂದಾಗಬೇಕು ಎಂದು ಸಾರಿಗೆ ಸಚಿವರು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕ ಕಪ್ರ್ಯೂ ಮಾಡುವಂತೆ ಮನವಿ ಮಾಡಿರುವದರಿಂದ ರಾಜ್ಯದ ಜನರಲ್ಲಿ ಇಂದು ಬಳಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಯಾರು ಸಹ ತಮ್ಮ ಮನೆಗಳಿಂದ ಹೋರ ಬರದೆ ಸಹಕಾರ ನೀಡಬೇಕು. ಅಗತ್ಯ ಸೇವೆಗಳನ್ನು ಹೋರತು ಪಡಿಸಿ ಉಳಿದ ಎಲ್ಲ ಸೇವೆಗಳು ಇಂದು ಬಂದ್ ಮಾಡಿ ಸಹಕರಿಬೇಕು. ದೇಶಕ್ಕೆ ಬಂದಿರು ಮಹಾ ಮಾರಿ ಕರೋನಾ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ವೈದ್ಯಕೀಯ ಸೇವೆ ನೀಡದಿದ್ದರೆ ನಿರ್ದಾಕ್ಷಣ್ಯ ಕ್ರಮ: 
ಬೆಳಗಾವಿ ಜಿಲ್ಲೆ ಮಹಾರಾಷ್ಟ್ರದ ಗಡಿಯನ್ನು ಹೊಂದಿಕೊಂಡಿರುವ 1 ನೂರಕ್ಕೂ ಹೆಚ್ಚು ಗ್ರಾಮ ಹಾಗೂ ಪಟ್ಟಣಗಳು ಇರುವದರಿಂದಾಗಿ ಮಹಾರಾಷ್ಟ್ರದಲ್ಲಿ ಕರೋನಾ ತೀವ್ರತೆ ಹೆಚ್ಚಿದ್ದು, ಗಡಿಯಲ್ಲಿರುವ ಗ್ರಾಮಗಳಲ್ಲಿ ಜನರಿಗೆ ಕರೋನಾ ಸೋಂಕು ತಗಲುವ ಸಾದ್ಯತೆ ಹೆಚ್ಚಿದ್ದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ಕರೋನಾ ಸೊಂಕು ಕುರಿತ ಚಿಕಿತ್ಸೆ ನೀಡುವ ಕಾರ್ಯದಲ್ಲಿ ಹಿಂದೇಟು ಹಾಕಿದರೆ ಅಂತಹ ವೈದ್ಯರು ಸಿಬ್ಬಂದಿಗಳ ಮೇಲೆ ಸರಕಾರ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಾಲಾಗುವದು. ಇಗಾಗಲೆ ಆರೋಗ್ಯ ಸಚಿವ ಶ್ರೀರಾಮಲು ಅವರು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸುತ್ತಿದ್ದು ಅಗತ್ಯ ಕ್ರಮಗಳನ್ನು ಸರಕಾರ ಕೈಗೊಂಡಿದ್ದು ಯಾವುದೆ ತರಹದ ಸಮಸ್ಯಗಳಿಗೆ ಸಿದ್ದರಿರುವಂತೆ ಸೂಚಿಸಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಅಥಣಿಯಲ್ಲಿ ವರದಿಗಾರರಿಗೆ ಹೇಳಿಕೆ ನೀಡಿದರು. 
ಬಸ್ ನಿಲ್ದಾಣದ ಕ್ಯಾಂಟೀನ್ ಪರಿಶೀಲಿಸಿದ ಡಿಸಿಎಮ್:  ಅಥಣಿ ಪಟ್ಟಣದಲ್ಲಿ ಕರೋನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾಗ ಅಲ್ಲೆ ಇದ್ದ ಬಸ್ ನಿಲ್ದಾಣದ ಕ್ಯಾಂಟಿನ್ ನಲ್ಲಿ ಪರಿಶೀಲನೆ ನಡೆಸಿದರು ಅಲ್ಲಿದ ವ್ಯವಸ್ಥೆ ಕುರಿತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿದ್ದ ಪಾಮ್ ಎಣ್ಣೆ ಪ್ಯಾಕೇಟ್ ತೆಗೆದುಕೊಂಡು ಕಳಪೆ ದರ್ಜೇಯ ಎಣ್ಣೆಯನ್ನು ಅಡುಗೆಗೆ ಬಳಕೆ ಮಾಡುತ್ತಿರುವದು ಕಂಡು ಬಂದ ಹಿನ್ನಲೆಯಲ್ಲಿ ಲ್ಯಾಬ್ ಪರೀಕ್ಷೆ ನಡೆಸುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳು ನೋಚನೆ ನೀಡಿದ ಘಟನೆ ನಡೆಯಿತು
  ಈ ವೇಳೆ ಲಕ್ಷ್ಮಣ ಸವದಿ ಗೆಳೆಯರ ಬಳಗದಿಂದ ಸಾರ್ವಜನಿಕರಿಗೆ ಸ್ವಚ್ಚತೆ ಕಾಪಾಡುವ ಮತ್ತು ಸ್ಯಾನಿಟೈಜರ್ ಲಿಕ್ವಿಡ್ ನಿಂದ ಕೈ ತೊಳೆಯುವ ಕುರಿತು ಜಾಗೃತಿ ಮೂಡಿಸಲಾಯಿತಲ್ಲದೆ ಹದಿನೈದು ನೂರಕ್ಕಿಂತ ಹೆಚ್ಚು ಮಾಸ್ಕಗಳನ್ನು ಸಾರಿಗೆ ಘಟಕದ ಚಾಲಕ,ನಿರ್ವಾಹಕ, ಮೆಕ್ಯಾನಿಕ್ ಮತ್ತು ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಹಂಚಲಾಯಿತು ಈ ವೇಳೆ ಲಕ್ಷ್ಮಣ ಸವದಿ ಗೆಳೆಯರ ಬಳಗದ  ಪ್ರದೀಪ ನಂದಗಾಂವ, ಶ್ರೀಶೈಲ್ ನಾಯಕ, ಚಿದಾನಂದ ಶೇಗುಣಸಿ, ಆಶೀಪ್ ತಾಂಬೊಳಿ, ಸಂಗಮೇಶ ಪಲ್ಲಕ್ಕಿ, ಸುಶೀಲ ಪತ್ತಾರ, ಅಮೋಘ ಕೊಬ್ಬರಿ, ಎಸ್ ಆರ್ ಘೂಳಪ್ಪನವರ. ದತ್ತಾ ವಾಸ್ಟರ ಮತ್ತು ದೀಪಕ ಕಡೋಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು 
Share
WhatsApp
Follow by Email