ರವಿವಾರದ ಸಂತೆ ರದ್ದಾದರೂ ಶನಿವಾರದ ಸಂತೆ ಭಾರಿ ಭರ್ಜರಿ : ಕರೋನಾಗೆ ಶೆಡ್ಡು ಹೊಡೆದ ಮೂಡಲಗಿ ಸಂತೆ

ಮೂಡಲಗಿ: ಕರೋನಾ ಭೀತಿಯಿಂದ ಹೋದ ರವಿವಾರ ರದ್ದಾಗಬೇಕಾಗಿದ್ದ ಸಂತೆ ಮಾಹಿತಿ ಕೊರತೆಯಿಂದಲೋ ಅಥವಾ ಅಧಿಕಾರಿಗಳ ಬೇಜವಾಬ್ದಾರಿಯಿಂದಲೋ ಸರಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದೆ ಸಂತೆ ಮಾತ್ರ ನಡೆದಿತ್ತು. ಇದೀಗ ಜಿಲ್ಲಾ ಹಾಗೂ ತಾಲೂಕಾಡಳಿತ ಮತ್ತು ಪ್ರಧಾನಿ ಮೋದಿಯವರ ಜನತಾ ಕರ್ಪ್ಯೂ ಪಾಲನೆಯಿಂದ ಈ ರವಿವಾರದ ಸಂತೆ ರದ್ದಾದರೂ ರವಿವಾರದ ಮುನ್ನಾದಿನ ಶನಿವಾರ ಸಂತೆ ಸೇರಿ ಕರೋನಾಗೆ ಶೆಡ್ಡು ಹೊಡೆದು ಭಾರಿ ಜನತ್ಸೋಮದಲ್ಲಿ ಭಾರಿ ಭರ್ಜರಿಯಿಂದ ನಡೆಯಿತ್ತು.
ಪಟ್ಟಣದ ಬಾಜಿ ಮಾರ್ಕೆಟ್ ಆವರಣದಲ್ಲಿ ಮದ್ಯಾಹ್ನದಿಂದಲೆ ಉಳ್ಳಾಗಡ್ಡಿ,ಕಾಯಿಪಲ್ಲೆ,ಇತರೆ ತರಕಾರಿ ವಸ್ತುಗಳ ಲೀಲಾವ ನಡೆದು ಗ್ರಾಹಕರು ಭಾರಿ ಸಂಖ್ಯೆಯಲ್ಲಿ ಸೇರಿ ಬೆಲೆ ದುಪ್ಪಟ್ಟಿದ್ದರೂ ಹೆಚ್ಚಿನ ಬೆಲೆಗೆ ಖರಿದಿಸಿದರು.
ಜಿಲ್ಲಾ,ತಾಲೂಕಾ ಆಡಳಿತದ ಆದೇಶದಂತೆ ಸಂತೆ,ಜಾತ್ರೆ,ಮದುವೆ,ಸಭೆ ಸಮಾರಂಭಗಳನ್ನು ನಡೆಸಬಾರದು ಅಲ್ಲದೆ ೧೦೦ಕ್ಕಿಂತ ಹೆಚ್ಚು ಜನ ಒಂದೆ ಕಡೆ ಸೇರಬಾರದೆಂಬ ಆದೇಶವಿದ್ದರೂ ಶನಿವಾರ ೪ ಘಂಟೆಯoದ ರಾತ್ರಿ ವರೆಗೆ ನಡೆದ ಸಂತೆಯಲ್ಲಿ ಸಾವಿರಾರೂ ಜನ ಸೇರಿದ್ದರೂ ಕರೋನಾ ಮಾಹಾ ಮಾರಿಗೆ ಸ್ವಾಗತ ನೀಡುವಂತಾಗಿತ್ತು
ಪೋಲಿಸ್ ಅಧಿಕಾಗಳು ಸಂತೆಯಲ್ಲಿ ಡಿಕ್ಸೋ ಹಾಡುಗಳನ್ನು ಕೇಳುತ್ತಾ ಬಜ್ಜಿ ಚುನುಮರಿ ತಿನ್ನುತ್ತಾ ವಾಹನದಲ್ಲಿ ಕುಳಿತ್ತಿರುವುದು ಮಾತ್ರ ವಿರ್ಪಯಾಸದ ಸಂಗತಿಯಾಗಿದೆ. ಅಧಿಕಾರಿಗಳು ಹೀಗೆ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಪ್ರಧಾನಿ ಮೋದಿಯವರ ಜನತಾ ಕರ್ಫ್ಯೂ ಯಶ್ವಿಸಿಯಾಗುವುದು ಕನಸಿನ ಮಾತು.
ಸಂತೆಗೆ ಸಾವಿರಾರೂ ಜನ ಸೇರಿದ ಬಗ್ಗೆ ತಹಶೀಲದಾರ,ಪೋಲೀಸ ಮತ್ತು ಪುರಸಭೆ ಅಧಿಕಾರಿಗಳನ್ನು ಸಾರ್ವಜನಿಕರು ಮತ್ತು ಮಾದ್ಯಮದವರು ಪ್ರಶ್ನಿಸಿದರೂ ಕ್ಯಾರೆ ಅನ್ನದ ಅಧಿಕಾರಿಗಳಿಗೆ ಏನು ಅನ್ನಬೇಕು

Share
WhatsApp
Follow by Email