ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದಕ್ಕೆ ಹೋಗಿದೆ

ಸೋಮವಾರ ಅಂತಿಮ ಪರೀಕ್ಷೆ (ಇಂಗ್ಲೀಷ್) ನಡೆಯಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಸಂಚಾರ ಬಂದ್ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.
ಇದರಿಂದಾಗಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆ ಮುಂದೂಡಿ ಸರಕಾರ ಆದೇಶ ಹೊರಡಿಸಿದೆ.
ಮುಂದಿನ ದಿನಾಂಕ ಮಾರ್ಚ್ 31ರ ನಂತರ ಘೋಷಣೆಯಾಗಲಿದೆ.
ಎಂದು
ಚಿಕ್ಕೋಡಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ
Share
WhatsApp
Follow by Email