ಕೊರೋನಾ ಅಟ್ಟಹಾಸ : ಇಟಲಿ, ಸ್ಪೇನ್ ನಲ್ಲಿ ಒಂದೇ ದಿನ 1,232 ಮಂದಿ ಬಲಿ

ಸ್ಪೇನ್ : ಕೊರೊನ ವೈರಸ್ ಅಟ್ಟಹಾಸಕ್ಕೆ ಜಗತ್ತೆ ನಡುಗುತ್ತಿದೆ. ಈ ಮಧ್ಯೆ ಸ್ಪೇನ್ ಮತ್ತು ಇಟಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಈ ವೈರಸ್ ಗೆ ಒಟ್ಟು 1,232 ಮಂದಿ ಬಲಿಯಾಗಿದ್ದಾರೆ. ಇನ್ನು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 18,552ಕ್ಕೆ ಏರಿಕೆಯಾಗಿದೆ.
ಇಟಲಿಯಲ್ಲಿ 743 ಮಂದಿ ಮೃತಪಟ್ಟಿದ್ದು ಒಟ್ಟಾರೆ ಸಾವಿನ ಸಂಖ್ಯೆ 6820ಕ್ಕೇರಿದೆ. ಇನ್ನು ಸ್ಪೇನ್ ನಲ್ಲಿ 489 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 2,800ಕ್ಕೇರಿದೆ. ಇನ್ನು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 18,552 ಮಂದಿ ಬಲಿಯಾಗಿದ್ದಾರೆ.
ಇಂದು ವಿಶ್ವದಾದ್ಯಂತ 35,879 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟಾರೆ 414,661 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಭಾರತದಲ್ಲಿ ಇಂದು ಹೊಸದಾಗಿ 37 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 536ಕ್ಕೇರಿದೆ.
Share
WhatsApp
Follow by Email