ಬ್ರೇಕಿಂಗ್ ನ್ಯೂಸ್ ಹಳ್ಳೂರ : ಗ್ರಾಮದ ಸಾರ್ವಜನಿಕರಿಗೆ ಸೂಚನೆ, ದಿನಸಿ ಅಂಗಡಿಗೆ ಬೆಳಗ್ಗೆ 8 ರಿಂದ 10 ಗಂಟೆಯವರೆಗೂ ಮಾತ್ರ ಅವಕಾಶ್ಯ 25/03/202027/03/20201 min read admin ಹಳ್ಳೂರ : ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಇಂದು ಸಾರ್ವಜನಿಕರ ಸಭೆ ಆಯೋಜಿಸಲಾಗಿತ್ತು. ಗ್ರಾಪಂ ಪಿಡಿಒ ಮಾತನಾಡಿ, ಗ್ರಾಮದ ಜನರ ಹಿತಕ್ಕಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಬೇಕು, ಜನರು ಅನಾವಶ್ಯಕವಾಗಿ ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡರು.ಪೋಲಿಸ್ ಇಲಾಖೆಯ ಸಿಬ್ಬಂಧಿ ಎನ್ ಎಸ್ ವಡೇಯರ್ ಮಾತನಾಡಿ, ಸರಕಾರ ಯಾವ ರೀತಿಯಾಗಿ ಕ್ರಮಕೈಗೊಳ್ಳತ್ತದೆ ಅದೇ ರೀತಿಯಾಗಿ ನಾವು ಕೆಲಸ ಮಾಡಬೇಕಾಗುತ್ತದೆ ಆದರಿಂದ ಗ್ರಾಮದ ಸಾರ್ವಜನಿಕರು ನಮ್ಮ ಜೊತೆ ನೀವು ಕೈಜೋಡಿಸಿ ಸರಕಾರದ ಆದೇಶಕ್ಕೆ ನೀವು ಸಹಕರಿಸಿದರೆ ಮಾತ್ರ ವೈಸರ್ ಹರಡದಂತೆ ಕಡಿವಾಣ ಹಾಕಬಹುದು ಎಂದು ಹೇಳಿದರು.ಸಾರ್ವಜನಕರಿಗೆ ಸೂಚನೆ:ಈ ಸಭೆಯಲ್ಲಿ ಗ್ರಾಮದ ದಿನಸಿ ಅಂಗಡಿಗಳು ಮಾತ್ರ ಬೆಳಗ್ಗೆ 8 ಗಂಟೆಯಿoದ 10 ಗಂಟೆಯವರೆಗೆ ಮಾತ್ರ ಬಾಗಿಲನ್ನು ತಗೆಯಬೇಕು ಇನ್ನೂಳಿದ ಅಂಗಡಿ ಮುಗ್ಗಟ್ಟುಗಳು ಯಾವುದೇ ಕಾರಣಕ್ಕೂ ತಗೆಯಬಾರದು ಮತ್ತು ಅನಾವಶ್ಯವಾಗಿ ಜನರು ಹೊರಗಡೆ ಬರಬಾರದು. ಯಾರಾದರೂ ಈ ಆದೇಶವನ್ನು ಮೀರಿ ಅಂಗಡಿ ಮುಗ್ಗಟ್ಟುಗಳನ್ನು ತಗೆದರೆ ಅವರ ವಿರುದ್ದ ಮೊಕದ್ದಮೆ ಹಾಕಲಾಗುವುದು ಮತ್ತು ನಾಳೆ ಶ್ರೀಶೈಲದಿಂದ ಬಂದ ಕಂಬಿಗಳು ಗ್ರಾಮದಲ್ಲಿ ಬರುವುದರಿಂದ ಸಾರ್ವಜನಿಕರು ದೇವಸ್ಥಾನದಲ್ಲಿ ಅನ್ನ ಪ್ರಸಾದ ವಿಚರಣೆ ಹಾಗೂ ದೀಡ ನಮಸ್ಕಾರ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಈ ಸಭೆಯ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿಲಾಗಿದೆ.ಸಭೆಯಲ್ಲಿ ಎಲ್ಲ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳ, ವ್ಯೆದ್ಯಾಧಿಕಾರಿಗಳು, ಗ್ರಾಮಲೇಕ್ಕಾಧಿಕಾರಿ ಹಾಗೂ ಸಾರ್ವಜನಿಕರು ಇದ್ದರು. Share