
ಇಡೀ ವಿಶ್ವದೆಲ್ಲೇಡೆ ಭಾರಿ ಭಯಾನಕ ವಾತಾವರಣ ಸೃಷ್ಠಿಸಿದ ಮಹಾಮಾರಿ ಕೋರೋನಾ ವೈರಾಣು ಹರದಂತೆ ಮುನ್ನಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶಾಧ್ಯಂತ ಲಾಕ್ ಡಾನ್ ಮಾಡಿದ ಆದೇಶ ಹೊರಡಿಸಿದ ಹಿನ್ನೇಲೆಯಲ್ಲಿ ಪಟ್ಟಣದಲ್ಲಿ ಎಲ್ಲ ಅಂಗಡಿ, ಮಳಿಗೆಗಳು ಬಂದ ಮಾಡಿ ಬೆಂಬಲ ಸೂಚಿಸಿದ್ದರಿಂದಾಗಿ ಸ್ಥಳಿಯ ಪೋಲಸಿಸರು ಸರಕಾರದ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಬೇಸಿಗೆ ಬಿಸಿಲನ್ನು ಲೆಕ್ಕಿಸಿದರೆ ಕರ್ತವ್ಯನಿರತರಾಗಿರುವ ಪೋಲಿಸ್ ಸಿಬ್ಬಂದಿಗಳಿಗೆ ನಿವೃತ್ತ ಹೇಡ್ಕಾನ್ಸ್ಟೇಬಲ್ ಬಿ ಎಸ್ ಗೋನಾಳ ಅವರು ಶುಕ್ರುವಾರ ನೀರು ಚಹಾ, ಬಿಸ್ಕೇಟ್ ಇತರೇ ದಿನಸಿ ತಿಂಡಿಗಳನ್ನು ವಿತರಿಸುವ ಮೂಲಕ ಮಾನವಿಯತೆ ಮರೆದಿದ್ದಾರೆ.
ಈ ವೇಳೆ ಮಾತನಾಡಿದ ಅವರು ನಾನುಕೂಡ ಸುಮಾರು 35 ವರ್ಷಗಳವೆರೆಗೆ ಪೋಲಿಸ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಕೆಲ ಗಲಭೇ, ಧರಣಿ ನೆಡದ ಸಂದರ್ಭದಲ್ಲಿ ಆಗಿನ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಾರ್ವಜನಿಕರ ಆಸ್ತಿ ಪಾಸ್ತಿಗೆ ಮತ್ತು ಸಾವು ನೋವು ಸಂಭವಿಸದAತೆ 144 ಕಲಂ ಜಾರಿ ಸಂದರ್ಭದಲ್ಲಿ ಕುಡಿಯಲು ನೀರು ಆಹಾರಕ್ಕಾಗಿ ಇಲಾಖೆ ಏನೆಲ್ಲ ಕಷ್ಟಬಡುತ್ತಿತ್ತು ಪೋಲಿಸರ ಗೊಳು ಏನು ಎಂತಹದ್ದು ಎಂಬುದನ್ನು ಸಂಪೂರ್ಣ ಅರ್ಥೈಸಿಕೊಂಡಿದ್ದೇ.
ಈ ನಿಟ್ಟಿನಲ್ಲಿ ನಾನು ಸಧ್ಯ ನಿವೃತ್ತಿಹೊಂದಿರಬಹುದು ಆದರೇ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಪೋಲಿಸ್ ಸಮವಸ್ತçದ ಋಣ ನನ್ನ ಮೇಲೆ ಇದೇ ಹಾಗಾಗಿ ಫೋಲಿಸ್ ಇಲಾಖೆಯನ್ನು ಅತ್ಯಂತ ಗೌರವಿಸುತ್ತೇನೆ ಈ ಕಾರಣಕ್ಕಾಗಿ ಸಧ್ಯ ಕರ್ತವ್ಯದಲ್ಲಿರುವ ಸಾಮಾಜಿಕ ಸೇವೆ ಮಾಡುತ್ತಿರುವ ಪೋಲಿಸರಿಗೆ ಇದೊಂದು ಅಳಿಲು ಸೇವೆ ವಿನಃ ಇದು ಯಾವೂದೇ ಪ್ರಚಾರಕ್ಕಾಗಿ ಮಾಡುವ
ಉದ್ದೇಶವಿಲ್ಲ ಎಂದರು