ಮೂಡಲಗಿ : ಹಗ್ಗವಿಲ್ಲದೆ ಸಾಗುವ ಸುಣಧೋಳಿ ರಥೋತ್ಸವ ರದ್ದು

ಮೂಡಲಗಿ : ಪ್ರತಿವರ್ಷದಂತೆ ದವನದ ಹುಣ್ಣಿಮೆ ಮುಗಿದ 5ನೇ ದಿನಕ್ಕೆ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಪವಾಡಪುರುಷ ಹಾಗೂ ಹಗ್ಗವಿಲ್ಲದೆ ಸಾಗುವ ರಥೋತ್ಸವ ಮಹೋತ್ಸವನ್ನು ರದ್ದು ಮಾಡಲಾಗಿದೆ ಎಂದು ಶ್ರೀ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿ ತಿಳಿಸಿದ್ದಾರೆ
ಅವರು ಶ್ರೀಮಠದಲ್ಲಿ ಹಮ್ಮಿಕೊಂಡ ಪ್ರಮುಖರ ಸಭೆಯಲ್ಲಿ ಮಾತನಾಡಿ ಎಲ್ಲ ರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರ ರೋಗ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದೇಶದ ಪ್ರಧಾನ ನರೇಂದ್ರ ಮೋದಿಯವರು ಜನತೆ ಉಳಿವಿಗಾಗಿ ಜನತಾ ಕರ್ಫ್ಯೂ ಮೂಲಕ ದೇಶದ 21 ದಿನಗಳ ಕಾಲ ಲಾಕ್ ಡೌನ್ ಮಾಡಿದ್ದು ಜನರ ಹಿತಕ್ಕಾಗಿ ಪ್ರತಿಯೊಬ್ಬ ನಾಗರಿಕರು ಸರ್ಕಾರದ ಆದೇಶವನ್ನು ಪಾಲಿಸಬೇಕು. ಸರ್ಕಾರದ ಆದೇಶದಂತೆ ಎಲ್ಲಾ ನಾಗರಿಕರು ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡರು.
ಸುಣಧೋಳಿ ಗ್ರಾಮದ ಪವಾಡಪುರುಷ ಶ್ರೀ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವನ್ನು ರದ್ದು ಪಡಿಸಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ
Share
WhatsApp
Follow by Email