ವಿಜಯಪುರ : ದೇಶಕ್ಕೆ ಅಗ್ನಿ ಪರೀಕ್ಷೆಯಾಗಿ ಮಾರ್ಪಟ್ಟಿದೆ ಸರ್ಕಾರದ ಆದೇಶವನ್ನು ಧಿಕ್ಕರಿಸದೆ ಗೌರವಿಸಿ: ಪ್ರಭುಗೌಡ ದೇಸಾಯಿ

ಮುದ್ದೇಬಿಹಾಳ: ಸಧ್ಯ ಪ್ರತಿಯೊಬ್ಬರೂ ಕೋರೋನಾ ವೈರಸ್ಸಿನ ವಿರುದ್ಧ ಜಾಗೃತರಾಗಿ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಇಂದಿನ ಸಂದರ್ಭ ನಮ್ಮ ದೇಶಕ್ಕೆ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೇ ಮಾತ್ರವಲ್ಲದೇ ಸರಕಾರದ ಆದೇಶವನ್ನು ಧಿಕ್ಕರಿಸದೇ ಗೌರವಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುನ್ನಡೆಯಬೇಕಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ತಿಳಿಸಿದ್ದಾರೆ.
ಸಧ್ಯ ಕೊರೊನಾ ವೈರಸಗೆ ನಾವೆಲ್ಲ ಮನೆ ಬಿಟ್ಟು ಹೊರಗೆ ಬರದೇ ಸಾಮಾಜಿಕ ಅಂತರ ಕಾಯ್ದುಕೊಂಡಾಗ ಮಾತ್ರ ನಮ್ಮ ಪರಿವಾರದ ಜೊತೆಗೆ ನಾವು ಕೂಡ ದೇಶದಲ್ಲಿ ಉತ್ತಮ ಜೀವನ ನಡೆಸಬೇಹುದಾಗಿದೆ ನಮ್ಮ ಸುರಕ್ಷತೆಗಾಗಿ ಹಾಗೂ ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ನಾವೆಲ್ಲ ಅರಿತುಕೊಂಡು ಹೆಜ್ಜೆ ಇಡಬೇಕಾಗಿದೆ. ಒಂದು ವೇಳೆ ಏನಾದರೂ ತಾತ್ಸಾರ ಮನೋಭಾವನೆ ತೊರಿದರೆ ಮುಂಬರವ ದಿನಗಳಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಗಳನ್ನು ಹಾಗೂ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ,
ಈ ನಿಟ್ಟಿನಲ್ಲಿ ಈಗಾಗಲೆ ನಮ್ಮ ಸಂಕಷ್ಟದ ಸಮಯದಲ್ಲಿ ನಮ್ಮೆಲ್ಲರ ರಕ್ಷಣೆಗಾಗಿ ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ಪೌರಕಾರ್ಮಿಕರು, ಹಾಗೂ ಪತ್ರಕರ್ತರೂ ಸೇರಿದಂತೆ ಶ್ರಮಿಸುತ್ತಿರುವ ಎಲ್ಲರ ಕಾರ್ಯ ಶ್ಲಾಘನೀಯವಾಗಿದೆ ಮತ್ತು ಸುತ್ತಮುತ್ತಲಿರುವ ಬಡವರ್ಗ, ಕಾರ್ಮಿಕ ವರ್ಗಕ್ಕೆ ನಮ್ಮ ಕೈಲಾದಷ್ಟು ಎಲ್ಲರೂ ಸಹಾಯ ಮಾಡೋಣ ಎಂದು ಕರೆ ನೀಡಿದ್ದಾರೆ
Share
WhatsApp
Follow by Email